Asianet Suvarna News Asianet Suvarna News

CM Yogi Adityanath ದೇವಸ್ಥಾನ ಕಟ್ಟಿಸಿದ ಭಕ್ತ, ಆಯೋಧ್ಯೆ ಸಮೀಪದಲ್ಲೇ ಇದೆ ಯೋಗಿ ಬಾಬ ಮಂದಿರ!

ಭಾರತದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು, ಅತೀ ಜನಪ್ರಿಯರಾದವರಿಗಾಗಿ ದೇವಸ್ಥಾನ ಕಟ್ಟಿಸುವುದು ಹೊಸದೇನಲ್ಲ, ಸಿನಿಮಾ ತಾರೆಯ ಮಂದಿರ, ಕ್ರಿಕೆಟಿಗರ ಮಂದಿರ ಸೇರಿ ಹಲವು ಮಂದಿರ ನಿರ್ಮಾಣಗೊಂಡಿದೆ. ಈ ಸಾಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿಕೊಂಡಿದ್ದಾರೆ. ಆಯೋಧ್ಯೆ ಸಮೀಪದಲ್ಲೇ ಯೋಗಿ ಆದಿತ್ಯನಾಥ್ ದೇವಸ್ಥಾನ ನಿರ್ಮಾಣಗೊಂಡಿದೆ.

Yogi baba Temple built and dedicated to Uttar Pradesh CM Yogi Adityanath near Ayodhya devotees can worship idol of  UP CM ckm
Author
First Published Sep 19, 2022, 5:29 PM IST

ಆಯೋಧ್ಯೆ(ಸೆ.19): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ಆದಿತ್ಯನಾಥ್ ಯೋಗಿಯಾಗಿದ್ದರೂ ತಮ್ಮ ಖಡಕ್ ನಿರ್ಧಾರಗಳಿಂದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯಾಗಿ ಮಾತ್ರ ಉಳಿದಿಲ್ಲ. ದೇವರಾಗಿದ್ದಾರೆ. ಹೌದು, ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಿಂದ 25 ಕಿಲೋಮೀಟರ್ ದೂರದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ಗಾಗಿ ದೇವಸ್ಥಾನ ನಿರ್ಮಾಣಗೊಂಡಿದೆ. ಯೋಗಿ ಬಾಬಾ ಮಂದಿರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಕೇಸರಿ ಉಡುಪಿನಲ್ಲಿರುವ ಯೋಗಿ ಆದಿತ್ಯನಾಥ್ ಶ್ರೀರಾಮ ಚಂದ್ರನಂತೆ ಬಿಲ್ಲು, ಬತ್ತಳಿಕೆ ಹಿಡಿದು ಬರುತ್ತಿರುವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಯಾಗ್‌ರಾಜ್ ಆಯೋಧ್ಯ ಹೆದ್ದಾರಿಯಲ್ಲಿ ಬಳಿ ಬರುವ ಭರತ್ ಕುಂಡದ ಸಮೀದಲ್ಲಿರುವ ಭದರಸಾ ಗ್ರಾಮದಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ.

ಯೋಗಿ ಆದಿತ್ಯನಾಥ್(Yogi Adityanath) ಉತ್ತರ ಪ್ರದೇಶದ ಜನರಿಗೆ ದೇವರು. ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶ(Uttar Pradesh) ಅಭಿವೃದ್ಧಿ ಕಂಡಿದೆ. ಇಷ್ಟು ಮಾತ್ರವಲ್ಲ ಹಿಂದುತ್ವ ನಳನಳಿಸುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಯಾವ ಸರ್ಕಾರವಕ್ಕೂ ಸಾಧ್ಯವಾಗದ ರಾಮ ಮಂದಿರ(Sri Ram Mandir) ನಿರ್ಮಾಣವೂ ಆಗುತ್ತಿದೆ. ಹೀಗಾಗಿ ಯೋಗಿ ಆದಿತ್ಯನಾಥ್ ನಮ್ಮ ಪಾಲಿಗೆ ದೇವರು ಎಂದು ದೇವಸ್ಥಾನ ಕಟ್ಟಿಸಿದ ಭಕ್ತ ಪ್ರಭಾಕರ್ ಮೌರ್ಯ ಹೇಳಿದ್ದಾರೆ. ಹಿಂದೂಗಳ ಬೇಡಿಕೆಯನ್ನು ಯೋಗಿ ಆದಿತ್ಯನಾಥ್ ಪೂರೈಸಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣ ಭಾರತೀಯ ಹಿಂದೂಗಳ ಬೇಡಿಕೆಯಾಗಿತ್ತು. ಇದು ಹಿಂದೂಗಳ ಹಕ್ಕೂ ಕೂಡ ಆಗಿತ್ತು. ಶ್ರೀರಾಮ ಮಂದಿರ ನಿರ್ಮಾಣಕ್ಕಿದ್ದ ತೊಡಕು ನಿವಾರಿಸಿ ದೇವಸ್ಥಾನ ಕಟ್ಟಲಾಗುತ್ತಿದೆ. ಶ್ರೀರಾಮ ಮಂದಿರ ಕಟ್ಟಿಸುತ್ತಿರುವ ಯೋಗಿ ಆದಿತ್ಯನಾಥ್‌ಗೆ ಒಂದು ದೇವಸ್ಥಾನ ಬೇಕು. ಇದಕ್ಕೆ ಯೋಗಿ ಆದಿತ್ಯನಾಥ್(Yogi Adityanath temple) ಅರ್ಹರಾಗಿದ್ದಾರೆ ಎಂದು ಪ್ರಭಾಕರ್ ಮೌರ್ಯ ಹೇಳಿದ್ದಾರೆ.

Madrassas survey ಆದೇಶಿಸಿದ ಸಿಎಂ ಯೋಗಿಗೆ ಮಕ್ಕಳ ಹಕ್ಕುಗಳ ಆಯೋಗದಿಂದ ಮಹತ್ವದ ಪತ್ರ

ಸುಂದರ ಪರಿಸರದಲ್ಲಿ(Ayodhya) ಯೋಗಿ ಬಾಬಾ ಮಂದಿರ ನಿರ್ಮಾಣಗೊಂಡಿದೆ. ಪ್ರತಿ ದಿನ ಸಂಜೆ ಇಲ್ಲಿ ಯೋಗಿ ಆದಿತ್ಯನಾಥ್ ಮೂರ್ತಿಗೆ ಪೂಜೆ(pooja) ಸಲ್ಲಿಸಲಾಗುತ್ತಿದೆ. ಈ ಮಂದಿರ ವಿಚಾರ ತಿಳಿದು ಇದೀಗ ಇತರ ಗ್ರಾಮಗಳಿಂದ, ಬೇರೆ ಜಿಲ್ಲೆಗಳಿಂದ ಹಲವರು ಆಗಮಿಸುತ್ತಿದ್ದಾರೆ. ಮಂದಿರ ಭೇಟಿ ನೀಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಪೂಜ್ಯಭಾವದಿಂದ, ದೇವರಾಗಿ ನೋಡುವವರು ಮಾತ್ರ ಈ ದೇವಸ್ಥಾನಕ್ಕೆ ಆಗಮಿಸದರೆ ಸಾಕು ಎಂದು ಪ್ರಭಾಕರ್ ಮೌರ್ಯ ಮನವಿ ಮಾಡಿದ್ದಾರೆ.

 ರಾಮಮಂದಿರ ನಿರ್ಮಾಣಕ್ಕೆ ಅಂದಾಜು .1800 ಕೋಟಿ ವೆಚ್ಚ
ಉತ್ತರ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುವ ರಾಮಮಂದಿರಕ್ಕೆ ಅಂದಾಜು 1,800 ಕೋಟಿ ರು. ವೆಚ್ಚವಾಗಲಿದೆ ಎಂದು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ಭಾನುವಾರ ಫೈಜಾಬಾದ್‌ನ ಸರ್ಕೀಟ್‌ ಹೌಸ್‌ನಲ್ಲಿ ಟ್ರಸ್ಟ್‌ ಸಭೆ ನಡೆಸಿತು ಹಾಗೂ ಮಂದಿರ ನಿರ್ಮಾಣದ ನಿಯಮ ಮತ್ತು ಕೈಪಿಡಿಗೆ ಅನುಮೋದನೆ ನೀಡಿದೆ. ಬಳಿಕ ಮಾತನಾಡಿದ ಚಂಪತ್‌ ರಾಯ್‌, ತಜ್ಞರು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ರು. ವೆಚ್ಚವಾಗಲಿದೆ ಎಂದು ಟ್ರಸ್ಟ್‌ ಅಂದಾಜಿಸಿದೆ. ಸುದೀರ್ಘ ಚರ್ಚೆ ಮತ್ತು ಎಲ್ಲರ ಸಲಹೆಗಳನ್ನು ಆಲಿಸಿದ ಬಳಿಕ ಈ ನಿರ್ಧಾರಗಳನ್ನು ತೆಗೆದುಕೊಳ್ಳಾಗಿದೆ ಎಂದರು.

ಯೋಗಿಯೇ ಈ ದೇಶದ ಮುಂದಿನ ಬಲಿಷ್ಠ ಪ್ರಧಾನಿ; ಅನಿರುಧ್ ಮಿಶ್ರಾ ಭವಿಷ್ಯ!
 

Follow Us:
Download App:
  • android
  • ios