ಅಯೋಧ್ಯೆ(ಜೂ.17): ಜುಲೈ 1ರ ಪವಿತ್ರ ‘ದೇವಶಯನಿ ಏಕಾದಶಿ’ಯಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಉದ್ದೇಶವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೊಂದಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆ.

ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂಮಿ ಪೂಜೆ ನೆರವೇರಿಸಲು ಕರೆತರುವ ಉದ್ದೇಶವನ್ನು ಟ್ರಸ್ಟ್‌ ಹೊಂದಿತ್ತು. ಆದರೆ ಮೋದಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗಿದೆ. ಹೀಗಾಗಿ ಆದಿತ್ಯನಾಥ್‌ ಅವರು ಭೂಮಿಪೂಜೆ ನೆರವೇರಿಸಿ ಮೋದಿ ಅವರ ಪರವಾಗಿ ಅಡಿಗಲ್ಲು ಇಡುವ ಸಾಧ್ಯತೆ ಇದೆ. ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಸಮಾರಂಭದಲ್ಲಿ ದಿಲ್ಲಿಯಿಂದಲೇ ಪಾಲ್ಗೊಳ್ಳುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ಅಯೋಧ್ಯೆ ರಾಮಮಂದಿರಕ್ಕೆ ಅಡಿಗಲ್ಲು ಮುಂದೂಡಿಕೆ: ಕೊನೆ ಕ್ಷಣದಲ್ಲಿ ಆಗಿದ್ದೇನು?

ಹೊಸ ಯೋಜನೆಯ ಪ್ರಕಾರ, ಮೋದಿ ಅವರು ದಿಲ್ಲಿಯಲ್ಲೇ ಅಡಿಗಲ್ಲಿಗೆ ಸಾಂಕೇತಿಕ ಪೂಜೆ ಮಾಡಿ, ಟ್ರಸ್ಟ್‌ನ ಸದಸ್ಯರಾದ ನೃಪೇಂದ್ರ ಮಿಶ್ರಾ ಅವರಿಗೆ ಅದನ್ನು ಹಸ್ತಾಂತರಿಸಲಿದ್ದಾರೆ. ಮಿಶ್ರಾ ಅವರು ಈ ಕಲ್ಲನ್ನು ತೆಗೆದುಕೊಂಡು ಅಯೋಧ್ಯೆಗೆ ಆಗಮಿಸಿ ಯೋಗಿ ಆದಿತ್ಯನಾಥ್‌ ಅವರಿಗೆ ನೀಡಲಿದ್ದಾರೆ. ಮೋದಿ ಅವರ ಪರ ಯೋಗಿ ಅವರು ಆ ಅಡಿಗಲ್ಲು ಇರಿಸಿ ಭೂಮಿಪೂಜೆ ನೆರವೇರಿಸಲಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"