ಲಕ್ನೋ(ನ.  26)  ದಿಟ್ಟ ನಿರ್ಧಾರಗಳನ್ನು ಥಟ್ಟನೆ ತೆಗೆದುಕೊಳ್ಳುವ ಯೋಗಿ ಸರ್ಕಾರ ಅಂಥದ್ದೆ ಮತ್ತೊಂದು ಹೆಜ್ಜೆ ಇಟ್ಟಿದೆ.  ಎಸೆಂಶಿಯಲ್ ಸರ್ವೀಸ್ ಮೆಂಟೆನೆನ್ಸ್ ಆಕ್ಟ್(ಎಸ್ಮಾ) ಜಾರಿ ಮಾಡಿದ್ದು ಸರ್ಕಾರಿ ಸೇವಾ ನೌಕರರು ಪ್ರತಿಭಟನೆ ಮಾಡುವಂತೆ ಇಲ್ಲ.

ಇದರ ನಡುವೆ  ರಾಜಧಾನಿ ಲಕ್ನೋದಲ್ಲಿ  144  ನೇ ಸೆಕ್ಷನ್  ಹಾಕಲಾಗಿದೆ.  ಡಿಸೆಂಬರ್ 1 ರವೆಗೆ  ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ.

ಕೊರೋನಾ ಪ್ರಕರಣಗಳು ಏರಿಕೆ ಕಾಣುತ್ತಿರುವುದರಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ.   ಪರವಾನಗಿ ಪಡೆದುಕೊಳ್ಳದೇ ಯಾವುದೆ ಕಾರ್ಯಕ್ರಮ ನಡೆಸುವಂತೆ ಇಲ್ಲ ಎಂದು  ಸರ್ಕಾರ ಅಧಿಕೃತವಾಗಿ ತಿಳಿಸಿದೆ.

ಲವ್ ಜಿಹಾದ್‌ಗೆ ಕಠಿಣ ಕಾನೂನು ತಂದ ಯೋಗಿ ಸರ್ಕಾರ

ಸೆಂಟ್ರಲ್ ಟ್ರೇಡ್ ಯೂನಿಯನ್ ಕರೆ ನೀಡಿರುವ ಪ್ರತಿಭಟನೆಗೆ  ನವೆಂಬರ್  26  ರಂದು ಕೆಲ ಸರ್ಕಾರಿ ನೌಕರರು  ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕ ನಂತರ ಸರ್ಕಾರ ಎಸ್ಮಾ ಜಾರಿಮಾಡಿದೆ. ಮೇ 2021 ರವರೆಗೆ ಎಸ್ಮಾ ಜಾರಿಯಲ್ಲಿರಲಿದ್ದು ಸರ್ಕಾರಿ ನೌಕರರು ಸೊಲ್ಲು ಎತ್ತುವ ಹಾಗೆ ಇಲ್ಲ.

ಉತ್ತರ ಪ್ರದೇಶದ ರಾಜ್ಯಪಾಲೆ ಅನಾದಿಬೆನ್ ಪಟೇಲ್ ಅನುಮತಿ ಪಡೆದುಕೊಂಡೆ ಎಸ್ಮಾ ಜಾರಿಮಾಡಲಾಗಿದೆ.  ಎಸ್ಮಾ ಉಲ್ಲಂಘನೆ ಮಾಡಿ ಪ್ರತಿಭಟನೆಗೆ ಮುಂದಾದರೆ ದಂಡ ಮತ್ತು ಜೈಲುವಾಸ ಎರಡನ್ನೂ ಅನುಭವಿಸಬೇಕಾಗುತ್ತದೆ. ಹಿಂದೆ ಜಯಲಲಿತಾ ಸರ್ಕಾರ ತಮಿಳುನಾಡಿನಲ್ಲಿ ಎಸ್ಮಾ ಜಾರಿ ಮಾಡಿ ನೌಕರರನ್ನು ದಾರಿಗೆ ತಂದಿತ್ತು.