Asianet Suvarna News Asianet Suvarna News

ಭಾರತೀಯರ ಬದುಕು, ಮೌಲ್ಯಗಳು ಗಟ್ಟಿಯಾಗಿ ಪ್ರತಿಪಾದಿಸಿದ ದೀನ್‌ ದಯಾಳ್‌ ಅಪರೂಪದ ದೇಶಪ್ರೇಮಿ: ಸಿಎಂ

ಭಾರತೀಯರ ಬದುಕು, ಮೌಲ್ಯಗಳು, ಆದರ್ಶಗಳು ಬೇರೆ ದೇಶದವರಿಗಿಂತ ವಿಭಿನ್ನವಾಗಿದೆ ಎಂದು ಪಂಡಿತ್‌ ದೀನ್‌ ದಯಾಳ ಉಪಾಧ್ಯಾಯ ಗಟ್ಟಿಯಾಗಿ ಪ್ರತಿಪಾದಿಸಿದ ಅಪರೂಪದ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

DeenDayal is a rare patriotic says CM bengaluru rav
Author
First Published Sep 26, 2022, 5:48 AM IST

ಬೆಂಗಳೂರು (ಸೆ.26) : ಭಾರತೀಯರ ಬದುಕು, ಮೌಲ್ಯಗಳು, ಆದರ್ಶಗಳು ಬೇರೆ ದೇಶದವರಿಗಿಂತ ವಿಭಿನ್ನವಾಗಿದೆ ಎಂದು ಪಂಡಿತ್‌ ದೀನ್‌ ದಯಾಳ ಉಪಾಧ್ಯಾಯ ಗಟ್ಟಿಯಾಗಿ ಪ್ರತಿಪಾದಿಸಿದ ಅಪರೂಪದ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚಕ್ರಪಾಣಿ ¶ೌಂಡೇಷನ್‌ ಹಾಗೂ ಬಿಜೆಪಿ ಬೆಂಗಳೂರು ಉತ್ತರ ವಿಭಾಗ ಭಾನುವಾರ ಆಯೋಜಿಸಿದ್ದ ನಗರದ ವಿರೂಪಾಕ್ಷಪುರದ ಉದ್ಯಾನವನ್ನು ‘ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಉದ್ಯಾನ’ ಎಂಬುದಾಗಿ ನಾಮಕರಣ ಮಾಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪರಂಪರೆ-ಆಧುನಿಕತೆಯನ್ನು ಬೆಸೆದ ದಿವ್ಯಚೇತನ ದೀನ ದಯಾಳ್ ಉಪಾಧ್ಯಾಯ

ಸ್ವಾತಂತ್ರ್ಯ ಹೋರಾಟ ಉತ್ತುಂಗದ ವೇಳೆಯಲ್ಲಿ ದೇಶದಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದವು. ಕೆಲವರು ಪಾಶ್ಚಿಮಾತ್ಯ ದೇಶದ ಪ್ರಭಾವದಲ್ಲಿದ್ದರು. ಇನ್ನು ಕೆಲವರು ಕಮ್ಯುನಿಸ್ಟ್‌ ನೆಲೆಯ ಪ್ರಭಾವದಲ್ಲಿದ್ದರು. ಈ ಎರಡರ ಮಧ್ಯೆ ನಮ್ಮ ಭಾರತೀಯರು ಹಾಗೂ ಅವರ ಬದುಕನ್ನು ಗುರುತಿಸಲಿಲ್ಲ ಎನ್ನುವ ನೋವು ದೀನ್‌ ದಯಾಳ್‌ ಉಪಾಧ್ಯಾಯ ಅವರಿಗಿತ್ತು. ಪ್ರತಿ ದೇಶಕ್ಕೆ ತನ್ನತನವಿದೆ. ತನ್ನದೇ ಆದ ಸಂಸ್ಕೃತಿ, ಸಂಸ್ಕಾರ, ಚಿಂತನೆ, ಬದುಕಿದೆ. ಭಾರತೀಯರ ಬದುಕು, ಮೌಲ್ಯಗಳು, ಆದರ್ಶಗಳು ಬೇರೆ ದೇಶದವರಿಗಿಂತ ವಿಭಿನ್ನವಾಗಿದೆ ಎಂದು ಗಟ್ಟಿಯಾಗಿ ದೀನ್‌ ದಯಾಳ್‌ ಉಪಾಧ್ಯಾಯರು ಪ್ರತಿಪಾದಿಸಿದರು ಎಂದು ತಿಳಿಸಿದರು.

ಅಂತ್ಯೋದಯ ಪರಿಕಲ್ಪನೆಯ ಮುಖಾಂತರ ಪರಿಶಿಷ್ಟಜಾತಿ ಪರಿಶಿಷ್ಟಪಂಗಡ, ಹಿಂದುಳಿದ ವರ್ಗಗಳ ಏಳಿಗೆಗೆ ನಿರಂತರವಾಗಿ ಶ್ರಮಿಸಿದರು. ಪಂಡಿತ್‌ ದೀನ್‌ ದಯಾಳ ಉಪಾಧ್ಯಾಯರ ಎಲ್ಲಾ ಆದರ್ಶಗಳು ಪ್ರಸ್ತುತವಾಗಿದೆ. ಅವರ ಹೆಸರಿನಲ್ಲಿ ಉದ್ಯಾನವನ ಆಗಿರುವುದು ಒಳ್ಳೆ ಕೆಲÓವಾಗಿದೆ. ಅವರ ಹೆಸರು ಈ ಭಾಗದ ಜನರಿಗೆ ಸ್ಪೂರ್ತಿದಾಯಕವಾಗಿದೆ ಎಂದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ರೈತರ ಬೆಳೆ ನಾಶವಾಗಿ ಸಂಕಷ್ಟಸಂದರ್ಭದಲ್ಲಿ ಬ್ಯಾಂಕ್‌ಗಳು ರೈತನ ಆಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸಲು ಅಗತ್ಯ ಕಾನೂನು ಜಾರಿಗೆ ತರಲು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಸದನದಲ್ಲಿ ಮಳೆ, ಪ್ರವಾಹದ ಕುರಿತು ಮುಖ್ಯಮಂತ್ರಿಗಳು ಸಮರ್ಥವಾಗಿ ಉತ್ತರ ನೀಡಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ಆರು ಸಾವಿರ ಕೋಟಿ ರು. ಅನುದಾನ ನೀಡಿದ್ದಾರೆ. ಅನುದಾನ ಬಳಕೆ ಪಾರದರ್ಶಕವಾಗಿರಬೇಕು ಎಂದು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

63 ಅಡಿ ಎತ್ತರದ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಬಿಜೆಪಿ ಮುಖಂಡ, ನಗರಸಭೆ ಮಾಜಿ ಸದಸ್ಯ ಕೆ.ಎನ್‌.ಚಕ್ರಪಾಣಿ ಮಾತನಾಡಿ, ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನ ಅಂಗವಾಗಿ ಕೆನರಾ ಬ್ಯಾಂಕ್‌ ಬಡಾವಣೆಯ ಉದ್ಯಾನವನಕ್ಕೆ ಅವರ ಹೆಸರನ್ನಿಡಲಾಗಿದೆ. ಆರ್‌ಎಸ್‌ಎಸ್‌ ಪ್ರಚಾರಕರಾಗಿ, ಜನಸಂಘದ ಅಧ್ಯಕ್ಷರಾಗಿ, ಪತ್ರಕರ್ತರಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಆತ್ಮನಿರ್ಭರ ಭಾರತವು ದೀನದಯಾಳ್‌ ಉಪಾಧ್ಯಾಯ ಅವರ ಕನಸು ಎಂದು ಹೇಳಿದರು. ಈ ವೇಳೆ ಬೆಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ಬಿ.ನಾರಾಯಣ್‌, ಕವಿತಾ ಚಕ್ರಪಾಣಿ, ಪ್ರಮುಖರಾದ ವಿದ್ವಾನ್‌ ಶ್ರೀನಿವಾಸನ್‌, ರವೀಂದ್ರನಾಥ್‌ ಇತರರಿದ್ದರು.

Follow Us:
Download App:
  • android
  • ios