Asianet Suvarna News Asianet Suvarna News

UP Election 2022 : ಬಿಜೆಪಿಗೆ ಗುಡ್ ಬೈ ಹೇಳಿದ ಮೂರನೇ ಸಚಿವ, ಈವರೆಗೂ 14 ನಾಯಕರ ರಾಜೀನಾಮೆ

ಉತ್ತರ ಪ್ರದೇಶ ಬಿಜೆಪಿಯಲ್ಲಿ ಮುಂದುವರಿದ ರಾಜೀನಾಮೆ ಪರ್ವ
ಕ್ಯಾಬಿನೆಟ್ ಗೆ ರಾಜೀನಾಮೆ ನೀಡಿದ ಮೂರನೇ ಸಚಿವ
ಧರಮ್ ಸಿಂಗ್ ಸೈನಿಗೆ ಸ್ವಾಗತ ಎಂದು ಹೇಳಿದೆ ಅಖಿಲೇಶ್ ಯಾದವ್

Yet another setback for the Yogi Aditanath Uttar Pradesh minister Dharam Singh Saini resigned from the ruling party san
Author
Bengaluru, First Published Jan 13, 2022, 3:41 PM IST

ಲಖನೌ (ಜ. 13): ಉತ್ತರ ಪ್ರದೇಶದಲ್ಲಿ (Uttar Pradesh Election) ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿ ರಾಜೀನಾಮೆಗಳ ಪರ್ವ ಆರಂಭವಾಗಿದೆ. ಚುನಾವಣೆ ಘೋಷಣೆ ಆದ ದಿನದಿಂದ ಈವರೆಗೂ ಕ್ಯಾಬಿನೆಟ್ ದರ್ಜೆಯ ಮೂವರು ಸಚಿವರು ರಾಜೀನಾಮೆ ಸಲ್ಲಿಕೆ ಮಾಡಿದೆ. ಅದರಲ್ಲೂ ಚುನಾವಣೆ ಘೋಷಣೆ ಆದ ಬಳಿಕ, ವಿವಿಧ ಕಾರಣಗಳನ್ನು ನೀಡಿ ಈವರೆಗೂ 15 ನಾಯಕರು ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ. ಹಿಂದುಳಿದ ವರ್ಗಗಳ ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಅವರ ರಾಜೀನಾಮೆಯಿಂದಾಗಿಯೇ ಬಿಜೆಪಿ ಹಲವು ಹಾಲಿ ಶಾಸಕರು ಹಾಗ ಸಚಿವರನ್ನು ಕಳೆದುಕೊಂಡಂತಾಗಿದೆ. ಗುರುವಾರ ಒಂದೇ ದಿನ ನಾಲ್ವರು ನಾಯಕರು ಬಿಜೆಪಿಯನ್ನು ತೊರೆದಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತಾವು ಬಿಜೆಪಿಯಲ್ಲೇ ಇರುವುದಾಗಿ ಮಾತನಾಡಿದ್ದ ಸಚಿವ ಧರಮ್ ಸಿಂಗ್ ಸೈನಿ (Dharam Singh Saini ), ಗುರುವಾರ ರಾಜ್ಯಪಾಲ ಆನಂದಿಬೆನ್ ಪಟೇಲ್ ಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಧರಮ್ ಸಿಂಗ್ ಸೈನಿಗೆ ಸ್ವಾಗತ ಎಂದು ಹೇಳಿರುವುದು ಅವರು ಸಮಾಜವಾದಿ ಪಕ್ಷಕ್ಕೆ ಸೇರರುವುದು ಖಚಿತವಾಗಿದೆ. ಇನ್ನೊಂದೆಡೆ ಲಖಿಂಪುರ ಖೇರಿಯ ಐದು ಬಾರಿಯ ಬಿಜೆಪಿ ಶಾಸಕ ಬಾಲಾ ಪ್ರಸಾದ್ ಅವಸ್ತಿ (Bala Prasad Awasthi) ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಮಾಜವಾದಿ ಪಾರ್ಟಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ. 

'ಎಸ್‌ಪಿಯಲ್ಲಿ ಅವರಿಗೆ ಹೃತ್ಪೂರ್ವಕ ಸ್ವಾಗತ ಮತ್ತು ಶುಭಾಶಯಗಳು' ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿದ್ದು, ಯೋಗಿ ಅವರ ಸಂಪುಟಕ್ಕೆ ರಾಜೀನಾಮೆ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಧರಂ ಸಿಂಗ್ ಸೈನಿ ಅವರೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ ಸರ್ಕಾರದಲ್ಲಿ ಧರಂ ಸಿಂಗ್ ಸೈನಿ ಅವರು ರಾಜ್ಯ (ಸ್ವತಂತ್ರ ), ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ವಾರದ ಆರಂಭದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಸ್ವಾಮಿ ಪ್ರಸಾದ್ ಮೌರ್ಯ ಅವರ ಆಪ್ತ ಸಹಾಯಕ ಎಂದು ನಂಬಲಾಗಿದೆ. ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯ ಯಶ್ ಪಾಲ್ ಸಿಂಗ್ ಚೌಧರಿಯನ್ನು 3353 ಮತಗಳಿಂದ ಸೋಲಿಸಿದ್ದ ಬಾಲಾ ಪ್ರಸಾದ್ ಅವಸ್ತಿ, ಯೋಗಿ ಆದಿತ್ಯನಾಥ್ ಸರ್ಕಾರ ಬ್ರಾಹ್ಮಣರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಪಕ್ಷವನ್ನು ತೊರೆದಿದ್ದಾರೆ.
 


ಗುರುವಾರ ಒಂದೇ ದಿನ ನಾಲ್ವರ ರಾಜೀನಾಮೆ: ಗುರುವಾರ ಒಂದೇ ದಿನ ಒಬ್ಬ ಸಚಿವ ಸೇರಿದಂತೆ ನಾಲ್ವರು ರಾಜೀನಾಮೆ ನೀಡಿದ್ದಾರೆ. ಧರಮ್ ಸಿಂಗ್ ಸೈನಿಯೊಂದಿಗೆ ವಿನಯ್ ಶಾಕ್ಯ (Vinay Shakya), ಬಾಲಾ ಪ್ರಸಾದ್ ಅವಸ್ತಿ ಹಾಗೂ ಮಖೇಶ್ ವರ್ಮ (Mukesh Verma) ರಾಜೀನಾಮೆ ನೀಡಿದ್ದಾರೆ. ಇದರ ನಡುವೆ ಧರಮ್ ಸಿಂಗ್ ಸೈನಿ, ಜನವರಿ 20ರವರೆಗೆ ಪ್ರತಿದಿನವೂ ಒಬ್ಬ ಬಿಜೆಪಿ ಸಚಿವ ಹಾಗೂ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಲೇ ಇರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ನಾವು ಹೇಳಿದ್ದನ್ನು ಕೇಳುವವರು ಯಾರೂ ಇಲ್ಲ. ಒಮ್ಮೆ ಅಂದಾಜು 140 ಶಾಸಕರು ಈ ಕುರಿತಾಗಿ ಧರಣಿಗೆ ಕುಳಿತಿದ್ದರೂ, ಅವರೆಲ್ಲರಿಗೂ ಬೆದರಿಕೆ ಹಾಕಲಾಗಿತ್ತು ಎಂದು ಧರಮ್ ಸಿಂಗ್ ಸೈನಿ ಹೇಳಿದ್ದಾರೆ. 

"

UP Election 2022 : ಬಿಜೆಪಿ ಸಚಿವ ರಾಜೀನಾಮೆ, ಮುಲಾಯಂ ಸಿಂಗ್ ಆಪ್ತ ಬಿಜೆಪಿಗೆ
ಈ ನಡುವೆ ಭಡೋಹಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ (Ravindra Nath Tripati) ಅವರ ಸುಳ್ಳು ರಾಜೀನಾಮೆ ಪತ್ರ ಉತ್ತರ ಪ್ರದೇಶದಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೆ, ತಾವು ಬಿಜೆಪಿಯಲ್ಲಿಯೇ ಉಳಿಯುವುದಾಗಿ ಅವರು ಹೇಳಿದ್ದರೂ, ರಾಜೀನಾಮೆ ನೀಡುವ 15ನೇ ನಾಯಕ ರವೀಂದ್ರ ನಾಥ್ ತ್ರಿಪಾಠಿಯೇ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಈವರೆಗೂ ಬಿಜೆಪಿಯನ್ನು ತೊರೆದ ಸಚಿವ ಹಾಗೂ ಶಾಸಕರು

1. ರಾಧಾ ಕೃಷ್ಣ ಶರ್ಮಾ, ಬದೌನ್ ಜಿಲ್ಲೆಯ ಬಿಲ್ಸಿಯ ಶಾಸಕ.
2. ರಾಕೇಶ್ ರಾಥೋಡ್, ಸೀತಾಪುರದ ಶಾಸಕ
3. ಮಾಧುರಿ ವರ್ಮಾ, ಬಹ್ರೈಚ್‌ನ ನನ್‌ಪಾರಾ ಶಾಸಕಿ
4. ಜೈ ಚೌಬೆ, ಸಂತ ಕಬೀರನಗರದ ಶಾಸಕ
5. ಸ್ವಾಮಿ ಪ್ರಸಾದ್ ಮೌರ್ಯ, ಕ್ಯಾಬಿನೆಟ್ ಮಂತ್ರಿ
6. ಭಗವತಿ ಸಾಗರ್, ಬಿಲ್ಹೌರ್ ಕಾನ್ಪುರ ಶಾಸಕ
7. ಬ್ರಿಜೇಶ್ ಪ್ರಜಾಪತಿ, ಶಾಸಕ
8. ರೋಷನ್ ಲಾಲ್ ವರ್ಮಾ, ಶಾಸಕ
9. ವಿನಯ್ ಶಾಕ್ಯ, ಶಾಸಕ
10. ಅವತಾರ್ ಸಿಂಗ್ ಭದಾನ, ಶಾಸಕ
11. ದಾರಾ ಸಿಂಗ್ ಚೌಹಾಣ್, ಕ್ಯಾಬಿನೆಟ್ ಮಂತ್ರಿ
12. ಮುಖೇಶ್ ವರ್ಮಾ, ಶಾಸಕ
13. ಧರಂ ಸಿಂಗ್ ಸೈನಿ, ಕ್ಯಾಬಿನೆಟ್ ಮಂತ್ರಿ
14. ಬಾಲ ಪ್ರಸಾದ್ ಅವಸ್ತಿ, ಶಾಸಕ

Follow Us:
Download App:
  • android
  • ios