Asianet Suvarna News Asianet Suvarna News

YearEnder 2023 ಕರ್ನಾಟಕಕ್ಕೆ ಯುನೆಸ್ಕೋ ಗುಡ್‌ನ್ಯೂಸ್, ಟಿಕ್‌ಟಾಕ್ ಸ್ಟಾರ್ ಅರೆಸ್ಟ್!

2023ನೇ ವರ್ಷಕ್ಕೆ ಗುಡ್‌ಬೈ ಹೇಳಲು ಸಜ್ಜಾಗಿದ್ದೇವೆ. ಈ ವರ್ಷ ಹಲವು ಘಟನೆಗಳು ನೆನಪಿನಲ್ಲಿ ಉಳಿಯಿವಂತೆ ಮಾಡಿದೆ. ಈ ಪೈಕಿ ಭಾರತ ಆಯೋಜಿಸಿದ ಜಿ20 ಶೃಂಗಸಭೆ, ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಹೊಯ್ಸಳ ದೇವಾಲಯ ಸೇರ್ಪಡೆ ಸೇರಿದಂತೆ ಹಲವು ಮಹತ್ವದ ಬೆಳವಣಿಗೆ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದೆ.

YearEnder 2023 Karnataka Hoysala Temple on UNESCO Heritage list to India successfully hosted g20 summit ckm
Author
First Published Dec 15, 2023, 12:46 PM IST

ಬೆಂಗಳೂರು(ಡಿ.14) ಜಾಗತಿಕ ಮಟ್ಟದಲ್ಲಿ ಈ ವರ್ಷ ನಡೆದ ಹಲವು ಘಟನೆಗಳು ಸ್ಮರಣೀಯವಾಗಿದ್ದರೆ, ಮತ್ತೆ ಕೆಲ ಘಟನೆಗಳು ಆತಂಕ ಹೆಚ್ಚಿಸಿದೆ. ಪ್ರಮುಖವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮೊರಕ್ಕೋ ಭೂಕಂಪ ಸೇರಿದಂತೆ ಕೆಲ ದುರ್ಘಟನೆಗಳು ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಭಾರತಕ್ಕೆ ಸೆಪ್ಟೆಂಬರ್ ತಿಂಗಳು ಹಲವು ಯಶಸ್ಸು ತಂದುಕೊಟ್ಟಿದೆ. ಭಾರತ ಯಶಸ್ವಿಯಾಗಿ ಟಿ20 ಶೃಂಗಸಭೆ ಆಯೋಜಿಸಿದ ವಿಶ್ವದ ಅಗ್ರ ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಜಪಾನ್ ತನ್ನ ಚಂದ್ರಯಾನ ನೌಕೆಯನ್ನು ಕೊನೆಗೂ ಉಡಾವಣೆ ಮಾಡಿತ್ತು. ಹಲವು ವಿಘ್ನಗಳ ಬಳಿಕ ಜಪಾನ್ ಹರಸಾಹಸ ಪಟ್ಟು  ಅತಿ ಚಿಕ್ಕ ಗಾತ್ರದ ಲ್ಯಾಂಡರನ್ನು ಕಳುಹಿಸಿತ್ತು. ಜಪಾನ್‌ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ ನಿರ್ಮಾಣ ಮಾಡಿರುವ ಎಚ್‌ಐಐ-ಎ ರಾಕೆಟ್‌ ಈ ನೌಕೆಯನ್ನು ತಾನೆಗಾಶಿಮಾ ಸ್ಪೇಸ್‌ ಸೆಂಟರ್‌ನಿಂದ ಉಡಾವಣೆ ಮಾಡಲಾಗಿತ್ತು.

ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!

ಸೆಪ್ಟೆಂಬರ್ 9 ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. 6.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಬರೋಬ್ಬರಿ 1,200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಪ್ರಬಲ ಭೂಕಂಪ ಹಿನ್ನೆಲೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದು, ಪ್ರಧಾನಿ ಮೋದಿ ಸಹ ಈ ಬಗ್ಗೆ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದರು.  

ಸೆಪ್ಟೆಂಬರ್ 10 ರಂದು ಭಾರತ ಯಶಸ್ವಿಯಾಗಿ ಜಿ20 ಶೃಂಗಸಭೆ ಆಯೋಜಿಸಿತ್ತು. ಪ್ರಧಾನಿ ಮೋದಿ ಬ್ರೆಜಿಲ್‌ ಅಧ್ಯಕ್ಷರಿಗೆ ಜಿ20 ಅಧ್ಯಕ್ಷತೆಯ ಬ್ಯಾಟನ್‌ ಅನ್ನು ಹಸ್ತಾಂತರಿಸಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಜಿ20 ಶೃಂಗಸಭೆ ವೇಳೆ ಜಾಗತಿಕ ನಾಯಕರು ಹಲವು ಪ್ರಮುಖ ನಿರ್ಧಾರಗಳನ್ನು ಘೋಷಣೆ ಮಾಡಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಇಷ್ಟು ವರ್ಷ ವಿವಿಧ ದೇಶದಲ್ಲಿ ನಡೆದ ಜಿ20 ಶೃಂಗಸಭೆಗಳ ಪೈಕಿ ಭಾರತದ ಶೃಂಗಸಭೆ ಅತ್ಯಂತ ಫಲಪ್ರದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  

ಇದೇ ಶೃಂಗಸಭೆಯಲ್ಲಿ ಯುರೋಪ್‌, ಮಧ್ಯಪ್ರಾಚ್ಯ ಮತ್ತು ಭಾರತದ ನಡುವೆ ಹೊಸ ವ್ಯಾಪಾರ ಕಾರಿಡಾರ್‌ ರಚನೆಯ ಘೋಷಣೆಯನ್ನು ಜಿ20 ಶೃಂಗದ ವೇಳೆ ಘೋಷಿಸಲಾಗಿತ್ತು.  ಹೊಸ ವ್ಯಾಪಾರ ಮಾರ್ಗ ರಚನೆಯ ಈ ವಿದ್ಯಮಾನ ಜಾಗತಿಕ ಮಟ್ಟದಲ್ಲಿ ಹೊಸ ಮೈಲುಗಲ್ಲು ಎಂದೇ ಬಿಂಬಿತವಾಗಿದೆ. ಗ್ಲೋಬಲ್‌ ಸೌತ್‌ ಮೂಲಕ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಚೀನಾಕ್ಕೆ ಪೆಟ್ಟು ನೀಡಿದ್ದ ಭಾರತ, ಇದೀಗ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳನ್ನು ಒಳಗೊಂಡ ಹೊಸ ವ್ಯಾಪಾರ ಕಾರಿಡಾರ್‌ ರಚನೆಯ ಘೋಷಣೆ ಮೂಲಕ ಚೀನಾಕ್ಕೆ ಮತ್ತೊಂದು ಪೆಟ್ಟು ನೀಡಿತ್ತು.

Throwback 2023 ಟ್ವಿಟರ್ ಲೋಗೋ ಬದಲಾವಣೆ, ಪಾಕಿಸ್ತಾನಕ್ಕೆ ಸಾಲ ಘೋಷಣೆ; ಅಚ್ಚರಿ ನೀಡಿದ ಜುಲೈ!

ಸೆಪ್ಟೆಂಬರ್ 18 ರಂದು ಯೂನೆಸ್ಕೋ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿತ್ತು. ಯುನೆಸ್ಕೋ ಘೋಷಿಸಿದ ವಿಶ್ವಪಾರಂಪರಿಕ ತಾಣ ಪಟ್ಟಿಯಲ್ಲಿ ಕರ್ನಾಟಕ ಹೊಯ್ಸಳರ ದೇವಾಲಯ ಸ್ಥಾನ ಪಡೆಯಿತು. 2014ರಿಂದ ವಿಶ್ವಪಾರಂಪರಿಕ ತಾಣ ಸಂಭಾವ್ಯ ಪಟ್ಟಿಯಲ್ಲಿದ್ದ ಹೊಯ್ಸಳ ದೇವಾಲಯ ಕೊನೆಗೂ ಯನೆಸ್ಕೋ ಮಾನ್ಯತೆಗೆ ಒಳಪಟ್ಟಿತು.

ಬಾಲಿವುಡ್ ಚಲನಚಿತ್ರಗಳ ಮೇಲಿನ ಪ್ರೀತಿಯಿಂದಾಗಿ ಲೀನಾ ಮುಖರ್ಜಿ ಎಂದು ಪ್ರಸಿದ್ಧರಾಗಿರುವ ಲೀನಾ ಲುಟ್ಫಿಯಾವತಿಗೆ ಇಂಡೋನೇಷ್ಯಾದಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಗರಿಗರಿಯಾದ ಹಂದಿಯ ಮಾಂಸವನ್ನು ತಿನ್ನುವ ಮೊದಲು "ಬಿಸ್ಮಿಲ್ಲಾ" ಎಂಬ ಅರೇಬಿಕ್ ಪದವನ್ನು ಅವರು ಉಚ್ಛಾರ ಮಾಡಿದ್ದರು.ಹಂದಿ ಮಾಂಸವನ್ನು ತಿನ್ನುವ ವೇಳೆಘೆ ಮುಖವನ್ನು ಅಸಹ್ಯವಾಗಿ ಮಾಡಿಕೊಂಡು ಇಸ್ಲಾಮಿಕ್‌ ಪ್ರಾರ್ಥನೆಯನ್ನೂ ಮಾಡಿದ್ದಳು. ಹೀಗಾಗಿ ಟಿಕ್‌ಟಾಕ್ ಸ್ಟಾರ್‌ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.  
 

Follow Us:
Download App:
  • android
  • ios