ಕೋಲ್ಕತಾ(ಮಾ.13): ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ ಸೇರಿಕೊಂಡು ಬಾರಿ ಸಂಚಲನ ಸೃಷ್ಟಿಸಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಿನ್ಹಾ ಇದೀಗ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಿಕೊಂಡಿದ್ದಾರೆ. ಸಿನ್ಹಾ ಟಿಎಂಸಿ ಸೇರ್ಪಡೆ ಕುರಿತು ಚರ್ಚಗಳು ನಡೆಯುತ್ತಿದೆ. ಇದರ ಜೊತೆಗೆ ಸಿನ್ಹಾ ಹಳೇ ವಿಡಿಯೋ ಒಂದು ವೈರಲ್ ಆಗಿದೆ.

ಬಿಜೆಪಿ ಮಾಜಿ ನಾಯಕ ಟಿಎಂಸಿಗೆ: ವಾಜಪೇಯಿ ಅಧಿಕಾರವಧಿಯಲ್ಲಿ ವಿತ್ತ ಸಚಿವರಾಗಿದ್ದ ಸಿನ್ಹಾ!

ಯಶವಂತ್ ಸಿನ್ಹಾ 2018ರಲ್ಲಿ ಬಿಜೆಪಿ ವೇದಿಕೆಯಲ್ಲಿ ಮಾಡಿದ್ದ ಭಾಷಣ ಇದೀಗ ವೈರಲ್ ಆಗಿದೆ. 4 ವರ್ಷಗಳ ಹಿಂದೆ ಚುನಾವಣಾ ಕಣದಿಂದ ನಾನು ನಿವೃತ್ತಿಯಾಗಿದ್ದೇನೆ. ಇದೀಗ ನಾಲ್ಕು ವರ್ಷಗಳ ಬಳಿಕ ರಾಜಕೀಯಿಂದ ನಿವೃತ್ತಿಯಾಗುತ್ತಿದ್ದೇನೆ. ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತಿದ್ದೇನೆ ಎಂದು ಈ ವೇದಿಕೆಯಲ್ಲಿ ಘೋಷಿಸುತ್ತಿದ್ದೇನೆ. ಪಕ್ಷದ ರಾಜನೀತಿಯಲ್ಲಿ ನಾನಿರುವುದಿಲ್ಲ. ಇತರ ಯಾವುದೇ ಪಕ್ಷ ಸೇರುವುದಿಲ್ಲ. ಸಂಪೂರ್ಣ ಸನ್ಯಾಸತ್ವ ಎಂದು 2018ರಲ್ಲಿ ಸಿನ್ಹಾ ಘೋಷಿಸಿದ್ದರು.

"

ಈ ಘೋಷಣೆ ಮಾಡಿದ ಮೂರೇ ವರ್ಷಕ್ಕೆ ಯಶವಂತ್ ಸಿನ್ಹಾ ಇದೀಗ ತೃಣಮೂಲ ಕಾಂಗ್ರೆಸ್ ಸೇರಿಕೊಂಡು ರಾಜಕೀಯ ಸನ್ಯಾಸತ್ವದಿಂದ ಹೊರಬಂದಿದ್ದಾರೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿದವರು ಹೀಗೆ ಮತ್ತೆ ರಾಜಕೀಯ ಪ್ರವೇಶಿಸುತ್ತಿರುವುದು ಇದು ಮೊದಲೇನಲ್ಲ. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಯಶವಂತ್ ಸಿನ್ಹಾ ಸೇರಿದಂತೆ ಹಲವರು ಊದಾಹರಣೆಗಳಾಗಿದ್ದಾರೆ.