Breaking: ಹರಿಯಾಣ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಸೇರಿದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಾದ ವಿನೇಶ್ ಪೋಗಟ್ ಹಾಗೂ ಭಜರಂಗ್ ಪೂನಿಯಾ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಗೆ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.
ನವದೆಹಲಿ (ಸೆ.6): ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್‌ಗೇರಿ ಬಳಿಕ ಹೆಚ್ಚಿನ ತೂಕದ ಕಾರಣದಿಂದಾಗಿ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಪೋಗಟ್ ಹಾಗೂ ಒಲಿಂಪಿಕ್ ಕಂಚಿನ ಪದಕ ವಿಜೇತ ರೆಸ್ಲರ್ ಭಜರಂಗ್ ಪೂನಿಯಾ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಮುನ್ನ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಹರಿಯಾಣದ ಪಕ್ಷದ ಅಧ್ಯಕ್ಷ ಉದಯ್ ಭಾನ್ ಮತ್ತು ವಕ್ತಾರ ಪವನ್ ಖೇರಾ ಅವರ ಉಪಸ್ಥಿತಿಯಲ್ಲಿ ಫೋಗಟ್ ಮತ್ತು ಪುನಿಯಾ ಅವರನ್ನು ಹೊಸದಿಲ್ಲಿಯ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ಗ್ರ್ಯಾಂಡ್ ಓಲ್ಡ್ ಪಾರ್ಟಿಗೆ ಸೇರ್ಪಡೆಗೊಳಿಸಲಾಯಿತು. ಕಳೆದ ವರ್ಷ, ಫೋಗಟ್ ಮತ್ತು ಪುನಿಯಾ ಅವರು ಬಿಜೆಪಿಯ ಮಾಜಿ ಸಂಸದ ಮತ್ತು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನಾನಿರತ ಕುಸ್ತಿಪಟುಗಳು ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳುತ್ತೇನೆ. ಒಂದು ಮಾತಿದ್ಯಲ್ಲ. ಕೆಟ್ಟ ಸಮಯದಲ್ಲಿಯೇ ನಮ್ಮವರು ಯಾರು ಅನ್ನೋದು ಗೊತ್ತಾಗುತ್ತದೆ ಅಂತಾ. ಅದೇ ರೀತಿ ನಮ್ಮನ್ನು ರಸ್ತೆಯಲ್ಲಿ ಹಿಡಿದು ಎಳೆದಾಡುತ್ತಿರುವಾಗ, ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮ ಬೆಂಬಲಕ್ಕೆ ನಿಂತಿದ್ದವು. ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಪಕ್ಷಕ್ಕೆ ಸೇರಿದ್ದಕ್ಕೆ ನನಗೆ ಬಹಳ ಖುಷಿ ಆಗಿತ್ತಿದೆ. ರಸ್ತೆಯಿಂದ ಸಂಸತ್‌ವರೆಗಿನ ಹೋರಾಟಕ್ಕೆ ನಾನು ಸಿದ್ದಳಿದ್ದೇನೆ ಎಂದು ವಿನೇಶ್ ಪೋಗಟ್ ಹೇಳಿದ್ದಾರೆ.
ವಿನೇಶ್ ಪೋಗಾಟ್, ಭಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ: ಹರ್ಯಾಣ ವಿಧಾನಸಭೆಗೆ ಸ್ಪರ್ಧೆ
ಕಾಂಗ್ರೆಸ್‌ಗೆ ಸೇರ್ಪಡೆಯಾದ ಮೇಲೆ ಬಜರಂಗ್ ಪುನಿಯಾ ಮಾತನಾಡಿದ್ದಯ, ಇಂದು ಬಿಜೆಪಿ ಐಟಿ ಸೆಲ್ ಏನು ಹೇಳುತ್ತಿದೆಯೆಂದರೆ, ನಾವು ಕೇವಲ ರಾಜಕೀಯ ಮಾಡಲು ಬಯಸಿದ್ದೇವೆ ಎನ್ನುತ್ತಾರೆ. ನಮ್ಮೊಂದಿಗೆ ನಿಲ್ಲುವಂತೆ ನಾವು ಎಲ್ಲಾ ಬಿಜೆಪಿ ಸಂಸದರಿಗೆ ಪತ್ರ ಬರೆದಿದ್ದೇವೆ ಆದರೆ ಅವರು ಯಾರೂ ಬಂದಿರಲಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯದ ಪರವಾಗಿ ಬಿಜೆಪಿ ನಿಂತಿದೆ ಎಂದು ಈಗ ನಮಗೆ ತಿಳಿದಿದೆ ಮತ್ತು ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರವನ್ನು ಬಲಪಡಿಸಲು ನಾವು ಶ್ರಮಿಸುತ್ತೇವೆ. ವಿನೇಶ್ ಫೈನಲ್‌ಗೆ ಅರ್ಹತೆ ಪಡೆದ ದಿನ ದೇಶವು ಸಂತೋಷವಾಗಿತ್ತು ಆದರೆ ಮರುದಿನ ಎಲ್ಲರೂ ದುಃಖಿತರಾಗಿದ್ದರು, ಆ ಸಮಯದಲ್ಲಿ ಒಂದು ಐಟಿ ಸೆಲ್ ಇದನ್ನು ಸಂಭ್ರಮಿಸಿತ್ತು ಎಂದು ಪೂನಿಯಾ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.
ಕುಸ್ತಿಪಟು ವಿನೇಶ್ ಫೋಗಟ್ ಜೊತೆ ನಟ ಆಮೀರ್ ಖಾನ್ ಚರ್ಚೆ- ಶೀಘ್ರದಲ್ಲಿ ದಂಗಲ್ 2?