Asianet Suvarna News Asianet Suvarna News

ರಾಜ್ಯಸಭೆ ಸಂಸದೆಯಾಗಲೂ ವಿನೇಶ್‌ಗೆ ರೂಲ್‌ ಅಡ್ಡಿ, ಜಸ್ಟ್‌ 4 ದಿನದಿಂದ ಮಿಸ್‌ ಆಗಲಿದೆ ಸಂಸತ್‌ಗೆ ಹೋಗುವ ಅವಕಾಶ!

Rajya Sabha Ticket to Vinesh Phogat ನಿಯಮದ ಕಾರಣದಿಂದಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಪಂದ್ಯದಿಂದಲೇ ಅನರ್ಹರಾಗಿದ್ದ ವಿನೇಶ್‌ ಪೋಗಟ್‌ ಅವರನ್ನು ರಾಜ್ಯಸಭೆ ಸಂಸದರನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್‌ ಪಕ್ಷದ ಒಳಗೆ ಚರ್ಚೆ ಆಗುತ್ತಿದೆ. ಆದರೆ, ರಾಜ್ಯಸಭೆ ಸಂಸದರಾಗಲೂ ಅವರಿಗೆ ರೂಲ್ಸ್‌ ಅಡ್ಡಿಯಾಗಲಿದೆ.

Wrestler Vinesh Phogat Misses Rajya Sabha Seat Minimum age Criteria by 4 days san
Author
First Published Aug 9, 2024, 10:58 PM IST | Last Updated Aug 9, 2024, 10:58 PM IST

ನವದೆಹಲಿ (ಆ.9): ರೆಸ್ಲರ್‌ ವಿನೇಶ್‌ ಪೋಗಟ್‌ ಅವರ ಅದೃಷ್ಟವೇ ಸರಿ ಇದ್ದಂತೆ ಕಾಣುತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಪೋಗಟ್‌ ಅವರಿಗೆ, ವಿಶ್ವ ಕುಸ್ತಿ ಸಂಸ್ಥೆಯ ನಿಯಮದ ಕಾರಣದಿಂದಾಗಿ ಅನರ್ಹಗೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದ ಕಾರಣಕ್ಕೆ ಚಿನ್ನದ ಪದಕದ ಪಂದ್ಯದಿಂದ ಅವರನ್ನು ಅನರ್ಹ ಮಾಡಲಾಗಿತ್ತು. ಚಿನ್ನದ ಪದಕದ ಅಂಚಿಗೆ ಬಂದು ವಿನೇಶ್‌ಗೆ ಹೀಗೆ ಆಗಿದ್ದರಿಂದ ಇಡೀ ಭಾರತದಾದ್ಯಂತ ಆಕೆಯ ಕುರಿತಾಗಿ ಭಾವುಕತೆ ನಿರ್ಮಾಣವಾಗಿತ್ತು. ಇದರ ನಡುವೆ ಅವರಿಗೆ ರಾಜ್ಯಸಭಾ ಸ್ಥಾನ ನೀಡಿ ಸಂಸತ್‌ಗೆ ಕಳಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದಿದ್ದವು. ಕೆಲವು ಮೂಲಗಳ ಪ್ರಕಾರ, ಕಾಂಗ್ರೆಸ್‌ ಪಕ್ಷ ಈಗಾಗಲೇ ಆಕೆಯನ್ನು ರಾಜ್ಯಸಭೆಗೆ ಕಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಆರಂಭಿಸಿದೆ ಎಂದೂ ತಿಳಿಸಲಾಗಿತ್ತು. ಆದರೆ, ಅಲ್ಲಿಯೂ ವಿನೇಶ್‌ ಪೋಗಟ್‌ಗೆ ನಿಯಮದ ಅಡ್ಡಿ ಎದುರಾಗಲಿದೆ. ದೇಶದ ಸಂಸತ್ತಿನ ನಿಯಮಗಳ ಪ್ರಕಾರ, ವಿನೇಶ್‌ ಪೋಗಟ್‌ ಈಗ ರಾಜ್ಯಸಭಾ ಸದಸ್ಯರಾಗಲು ಸಾಧ್ಯವಿಲ್ಲ.

ರಾಜ್ಯಸಭೆ ಅಥವಾ ಸಂಸತ್ತಿನ ಮೇಲ್ಮನೆ ಮತ್ತು 'ಹಿರಿಯರ ಮನೆ'ಯ ಸದಸ್ಯರಾಗಲು ಕನಿಷ್ಠ ವಯಸ್ಸು 30. ಮತ್ತೊಂದೆಡೆ ವಿನೇಶ್‌ ಪೋಗಟ್‌ ಅವರಿಗೆ 29 ವರ್ಷ. ಆಗಸ್ಟ್‌ 25 ರಂದು ಅವರು 30ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಪ್ರಸ್ತುತ ರಾಜ್ಯಸಭೆಯಲ್ಲಿ 12 ಸೀಟ್‌ಗಳು ಖಾಲಿ ಉಳಿದಿವೆ. ಖಾಲಿ ಉಳಿದಿರುವ ಈ ಸ್ಥಾನಗಳಿಗೆ ಸೆಪ್ಟೆಂಬರ್‌ 3 ರಂದು ಚುನಾವಣೆ ನಡೆಯಲಿದೆ. ಇವುಗಳಿಗೆ ನಾಮಪತ್ರ ಸಲ್ಲಿಕೆ ಮಾಡಲು ಆಗಸ್ಟ್‌ 21 ಕೊನೆಯ ದಿನವಾಗಿದೆ. ಅಂದರೆ, ವಿನೇಶ್‌ ಪೋಗಟ್‌ ಅವರ 30ನೇ ವರ್ಷದ ಜನ್ಮದಿನಕ್ಕೂ 4 ದಿನ ಮುನ್ನ ನಾಮಪತ್ರ ಸ್ವೀಕಾರ ಮುಗಿಯಲಿದೆ. ಈ ಕಾರಣದಿಂದಾಗಿ ಕೇವಲ 4 ದಿನದಿಂದ ಸಂಸತ್‌ಗೆ ಹೋಗುವ ಅವಕಾಶವನ್ನೂ ವಿನೇಶ್‌ ಪೋಗಟ್‌ ಕಳೆದುಕೊಳ್ಳಲಿದ್ದಾರೆ.

ಖಾಲಿ ಇರುವ ಸೀಟುಗಳಲ್ಲಿ ಒಂದು ವಿನೇಶ್‌ ಅವರ ತವರು ರಾಜ್ಯವಾದ ಹರಿಯಾಣದಿಂದವೇ ಇದೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಹೂಡಾ ಅವರು ಜೂನ್‌ನಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಆಕೆಯ ಒಲಂಪಿಕ್ಸ್ ನಿರಾಶೆಯ ನಂತರ ಫೋಗಟ್‌ಗೆ ರಾಜ್ಯಸಭಾ ನಾಮನಿರ್ದೇಶನವನ್ನು ಕೋರಿದ ರಾಜಕಾರಣಿಗಳಲ್ಲಿ ಹೂಡಾ ಕೂಡ ಸೇರಿದ್ದಾರೆ, ಆದರೆ, ವಿನೇಶ್‌ ಪೋಗಟ್‌ ಕುಟುಂಬ ಇದನ್ನು ನಿರಾಕರಿಸಿದೆ.

ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಅವರು ರಾಜ್ಯಸಭೆಯ ಅತ್ಯಂತ ಕಿರಿಯ ಪ್ರಸ್ತುತ ಸದಸ್ಯರಾಗಿದ್ದಾರೆ; ಅವರು ನವೆಂಬರ್ 11 ರಂದು 36 ನೇ ವರ್ಷಕ್ಕೆ ಕಾಲಿಡುತ್ತಾರೆ. ಚಡ್ಡಾ ಅವರು 2022ರ ಮೇ 2 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. 33ನೇ ವರ್ಷದಲ್ಲಿ ಅವರು ರಾಜ್ಯಸಭೆ ಸಂಸದರಾಗಿದ್ದರು.

 

ಫೈನಲ್‌ಗೂ ಮುನ್ನ ವಿನೇಶ್ ಫೋಗಟ್‌ಗೆ ಬಿಗ್ ಶಾಕ್; ಚಿನ್ನದ ಪದಕಕ್ಕೆ ಅನರ್ಹ..!

ಕ್ರೀಡಾಪಟುಗಳು ಸೇರಿದಂತೆ ರಾಜಕೀಯೇತರರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಕೆಲವರು ರಾಜಕೀಯ ಪಕ್ಷಗಳ ಸದಸ್ಯರು ಅಥವಾ ನಾಮನಿರ್ದೇಶಿತರಾಗಿ ಸೇರಿದರೆ, ಹೆಚ್ಚಿನವರು ಭಾರತದ ರಾಷ್ಟ್ರಪತಿಗಳಿಂದ ನಾಮನಿರ್ದೇಶಿತರಾಗುತ್ತಾರೆ. ಲೆಜೆಂಡರಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ರಾಜ್ಯಸಭೆಯಲ್ಲಿದ್ದರು, ನಿವೃತ್ತ ಸ್ಪಿನ್ ಗ್ರೇಟ್ ಹರ್ಭಜನ್ ಸಿಂಗ್ ಪ್ರಸ್ತುತ ಸದಸ್ಯರಾಗಿದ್ದಾರೆ, ಅವರು ಎಎಪಿಯ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದಾರೆ.

'ಈಕೆಯನ್ನೇ ಅಲ್ಲವೇ ನಾವು ಬೀದಿಯಲ್ಲಿ ಎಳೆದಾಡಿದ್ದು..' ವಿನೇಶ್‌ ಪೋಗಟ್‌ ಗೆಲುವಿನ ಬೆನ್ನಲ್ಲೇ ಭಜರಂಗ್‌ ಪೂನಿಯಾ ಟ್ವೀಟ್‌!

Latest Videos
Follow Us:
Download App:
  • android
  • ios