ಐಐಟಿ ಮದ್ರಾಸ್‌ನಲ್ಲಿ ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಟ್ರ್ಯಾಕ್‌ ಉದ್ಘಾಟನೆ. ಈ ಯೋಜನೆಯು ಗಂಟೆಗೆ 1,200 ಕಿಮೀ ವೇಗದಲ್ಲಿ ಚಲಿಸುವ ಹೈಪರ್‌ಲೂಪ್‌ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಚೆನ್ನೈ: ಸಾರಿಗೆ ವ್ಯವಸ್ಥೆಗೆ ಇನ್ನಷ್ಟು ವೇಗ ತುಂಬುವ ನಿಟ್ಟಿನಲ್ಲಿ ಭಾರತದ ಮೊದಲ ಹೈಪರ್‌ಲೂಪ್‌ (ರೈಲು ಚಲಿಸಲು ಸುರಂಗದ ರೀತಿಯ ಪೈಪ್‌ನಲ್ಲಿನ ಮಾರ್ಗ) ಪರೀಕ್ಷಾ ಟ್ರ್ಯಾಕ್‌ ಅನ್ನು ತಮಿಳುನಾಡು ರಾಜಧಾನಿ ತಯ್ಯೂರಿನ ಐಐಟಿ ಮದ್ರಾಸ್‌ನಲ್ಲಿ ಉದ್ಘಾಟಿಸಲಾಗಿದೆ. ಭಾರತದ ಮೊದಲ ಹೈಪರ್‌ಲೂಪ್ ರೈಲು ಪರೀಕ್ಷಾ ಮಾರ್ಗವು ಚೆನ್ನೈನಲ್ಲಿ ನಿರ್ಮಾಣವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹೈಪರ್‌ಲೂಪ್‌ ತಂತ್ರಜ್ಞಾನವನ್ನು ಪರೀಕ್ಷಿಸುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ, ಆರ್ಸೆಲರ್‌ ಮಿತ್ತಲ್‌, ಐಐಟಿಯ ಆವಿಷ್ಕಾರ್‌ ಹೈಪರ್‌ಲೂಪ್‌ ತಂಡ ಹಾಗೂ ಟುಟ್ರ್‌ ಹೈಪರ್‌ಲೂಪ್‌ ಎಂಬ ಸ್ಟಾರ್ಟ್‌ಅಪ್‌ ಜಂಟಿಯಾಗಿ 410 ಮೀ. ಉದ್ದದ ಟ್ರ್ಯಾಕ್‌ ನಿರ್ಮಿಸಿವೆ. ಗಂಟೆಗೆ 1,200 ಕಿಮೀ ಚಲಿಸುವ, ಕೈಗೆಟಕುವ ದರದ, ವಿಶ್ವಾಸಾರ್ಹ ಹೈಪರ್‌ಲೂಪ್‌ ಸಾರಿಗೆ ವ್ಯವಸ್ಥೆ ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಪುಷ್ಪ 2 ಎಂಟ್ರಿಗೆ ಹಿಂದಿನ ಎಲ್ಲ ರೆಕಾರ್ಡ್ ಉಡೀಸ್! ಅಮೆರಿಕಾದಲ್ಲಿ ಮೊದಲ ದಿನ ದಾಖಲೆ

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ‘ಇದು ಸಾರಿಗೆ ವಲಯದ ಹೊಸ ಯುಗ ಆರಂಭದ ಮೈಲುಗಲ್ಲು’ ಎಂದು ಬಣ್ಣಿಸಿದ್ದಾರೆ. ಇದೀಗ ಮೊದಲ ಬಾರಿ ಗಂಟೆಗೆ 100 ಕಿಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಇದನ್ನು 600 ಕಿಮೀ.ಗೆ ಕೊಂಡೊಯ್ಯುವ ಗುರಿಯಿದೆ. ಹೈಪರ್‌ಲೂಪ್‌ ತಂತ್ರಜ್ಞಾನದಿಂದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸಿ, ಬೆಂಗಳೂರು ಹಾಗೂ ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು 15 ನಿಮಿಷಕ್ಕೆ ಇಳಿಸಲು ಸಾಧ್ಯವಿದೆ.

ಮತ್ತೊಂದೆಡೆ, ಹೈಡ್ರೋಜನ್ ರೈಲು ಕೂಡ ಭಾರತದಲ್ಲಿ ಓಡಲು ಸಿದ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೈಲು ಸಾರಿಗೆಯಲ್ಲಿ ಪ್ರಮುಖ ವಿಷಯವನ್ನು ತಿಳಿಸಿದ್ದಾರೆ. ಅದೇನೆಂದರೆ ಚೆನ್ನೈ ಐಐಟಿ ವಿದ್ಯಾರ್ಥಿಗಳು ಹೈಪರ್‌ಲೂಪ್ ರೈಲು ಪರೀಕ್ಷಾ ಮಾರ್ಗವನ್ನು ನಿರ್ಮಿಸುತ್ತಿದ್ದಾರೆ.

ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಹಸೆಮಣೆ ಏರಲು ಸಜ್ಜಾದ ರಶ್ಮಿಕಾ ಮಂದಣ್ಣ!

ಮಿಂಚಿನ ವೇಗದಲ್ಲಿ ಚಲಿಸುವ ಹೈಪರ್‌ಲೂಪ್ ರೈಲು ಯೋಜನೆಯನ್ನು ಭಾರತದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ತೀವ್ರ ಪರೀಕ್ಷೆ ನಡೆಯುತ್ತಿರುವಾಗ, ಚೆನ್ನೈ ಐಐಟಿ ವಿದ್ಯಾರ್ಥಿಗಳು 410 ಮೀಟರ್ ಉದ್ದದ ಹೈಪರ್‌ಲೂಪ್ ಪರೀಕ್ಷಾ ಮಾರ್ಗವನ್ನು ವಿನ್ಯಾಸಗೊಳಿಸಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಚೆನ್ನೈ ಐಐಟಿ ತಂಡ ಮತ್ತು TuTr ಹೈಪರ್‌ಲೂಪ್ ಎಂಬ ಸ್ಟಾರ್ಟ್‌ಅಪ್ ಕಂಪನಿ ದೇಶದ ಅತಿವೇಗದ ರೈಲನ್ನು ನಿರ್ಮಿಸುತ್ತಿವೆ'' ಎಂದು ತಿಳಿಸಿದ್ದಾರೆ. ಹೈಪರ್‌ಲೂಪ್ ರೈಲು ನಾವು ಊಹಿಸಲೂ ಸಾಧ್ಯವಾಗದಷ್ಟು ವೇಗವಾಗಿ ಚಲಿಸುತ್ತದೆ. ಹೈಪರ್‌ಲೂಪ್ ರೈಲು ಗಂಟೆಗೆ 1,100 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಭಾರತದಲ್ಲಿ ಈ ರೈಲನ್ನು ಗಂಟೆಗೆ 360 ಕಿ.ಮೀ ಅಥವಾ ಸೆಕೆಂಡಿಗೆ 100 ಮೀಟರ್ ವೇಗದಲ್ಲಿ ಚಲಾಯಿಸಲು ನಿರ್ಧರಿಸಲಾಗಿದೆ.

ವಿಶ್ವದಲ್ಲಿ ಇನ್ನೂ ಜಾರಿಯಿಲ್ಲ: ಇದುರೆಗೆ ಅಮೆರಿಕ, ಕೆನಡಾ, ಮೆಕ್ಸಿಕೋ, ಬ್ರಿಟನ್‌ ಸೇರಿದಂತೆ ಕೆಲ ದೇಶಗಳು ಹೈಪರ್‌ಲೂಪ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಆದರೆ ಯಾವುದೇ ದೇಶ ಈ ಸೇವೆಗಳನ್ನು ಪ್ರಾರಂಭಿಸಿಲ್ಲ.

ನೆಲದ ಮೇಲಿನ ಸಾರಿಗೆಯ ವೇಗವನ್ನು ವಿಮಾನದ ವೇಗಕ್ಕೆ ಹೆಚ್ಚಿಸುವ ನಿರೀಕ್ಷೆಯಿರುವ ಕ್ರಾಂತಿಕಾರಿ ಹೈಪರ್‌ಲೂಪ್‌(Hyperloop). ಬೇರೆ ಬೇರೆ ದೇಶಗಳಲ್ಲಿ ಅಧ್ಯಯನ ನಡೆಸುತ್ತಿವೆಯಾದರೂ ಅಂತಿಮವಾಗಿ ಭಾರತ(India) ಅಥವಾ ಸೌದಿ ಅರೇಬಿಯಾದಲ್ಲಿ(Saudi Arabia) ಈ ವ್ಯವಸ್ಥೆ ಮೊದಲು ಸಾಕಾರವಾಗಲಿದೆ ಎಂದು ವರ್ಜಿನ್‌ ಹೈಪರ್‌ಲೂಪ್‌ ಸಂಸ್ಥೆಯ ಮಾಲಿಕರಲ್ಲೊಬ್ಬರಾದ ಸುಲ್ತಾನ್‌ ಅಹ್ಮದ್‌ ಬಿನ್‌ ಸುಲೇಯಮ್‌ 2021ರಲ್ಲಿ ಹೇಳಿದ್ದರು.

ಈ ಹಿಂದೆ 2018ರಲ್ಲೇ ವರ್ಜಿನ್‌ ಹೈಪರ್‌ಲೂಪ್‌ ಕಂಪನಿಯ ಚೇರ್ಮನ್‌ ರಿಚರ್ಡ್‌ ಬ್ರಾನ್ಸನ್‌ ಪುಣೆ(Pune) ಮತ್ತು ಮುಂಬೈ(Mumbai) ನಡುವೆ ಹೈಪರ್‌ಲೂಪ್‌ ಆರಂಭಿಸುವುದಾಗಿ ಪ್ರಕಟಿಸಿದ್ದರು. ಆದರೆ ಕೋವಿಡ್‌ನಿಂದಾಗಿ ಅದು ಮುಂದುವರೆಯಲಿಲ್ಲ. 

ಏನಿದು ಹೈಪರ್‌ಲೂಪ್‌?
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದೊಡ್ಡ ಗಾತ್ರದ ಟ್ಯೂಬ್‌ ಅಳವಡಿಸಿ, ಅದರೊಳಗೆ ಸಣ್ಣ ಸಣ್ಣ ಪೆಟ್ಟಿಗೆಯಂತಹ ‘ಪಾಡ್‌’ಗಳಲ್ಲಿ ಜನರು ಅಥವಾ ಸರಕುಗಳನ್ನು ಸಾಗಿಸುವುದೇ ಹೈಪರ್‌ಲೂಪ್‌. ಟ್ಯೂಬ್‌ನೊಳಗೆ ಗಾಳಿಯ ಒತ್ತಡ ಕಡಿಮೆಯಿರುವಂತೆ ನೋಡಿಕೊಳ್ಳಲಾಗುತ್ತದೆ. ಆಗ ಪಾಡ್‌ಗಳಿಗೆ ಪ್ರತಿರೋಧ ನಗಣ್ಯ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಬಹಳ ವೇಗದಲ್ಲಿ ಚಲಿಸಲು ಸಾಧ್ಯವಿದೆ. ಇದು ಬುಲೆಟ್‌ ರೈಲಿಗಿಂತ ವೇಗದ ಸಾರಿಗೆ ಸಾಧನವಾಗಿದೆ.