ರೋಮ್‌ (ನ.29): ಇಟಲಿಯ ಐಷಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬೋರಿನಿ ಮೆಲನೇಸಿ ವಿಶ್ವದ ಅತ್ಯಂತ ದುಬಾರಿ ಹ್ಯಾಂಡ್‌ಬ್ಯಾಗ್‌ ಅನ್ನು ಬಿಡುಗಡೆ ಮಾಡಿದೆ. 

ಅಂದಹಾಗೆ ಈ ಬ್ಯಾಗಿನ ದರ ಬರೋಬ್ಬರಿ 52 ಕೋಟಿ ರು.ಗಳು! ಪ್ರತಿ ಬ್ಯಾಗ್‌ ಅನ್ನು ತಯಾರಿಸಲು 1000 ಗಂಟೆಗಳ ಕೆಲಸದ ಅವಧಿಯ ಅಗತ್ಯವಿದ್ದು, ಕೇವಲ 3 ಐಷಾರಾಮಿ ಬ್ಯಾಗ್‌ಗಳನ್ನು ಉತ್ಪಾದನೆ ಮಾಡಲಾಗುವುದು. ಅವುಗಳ ಮಾರಾಟದಿಂದ ಬಂದ ಹಣವನ್ನು ಸಮುದ್ರದ ಸ್ವಚ್ಛತೆಗೆ ವಿನಿಯೋಗಿಸುವುದಾಗಿ ಕಂಪನಿ ತಿಳಿಸಿದೆ.

ರಚಿತಾ ರಾಮ್‌ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್?

ಏಕೆ ಇಷ್ಟುದರ?

ಈ ಹ್ಯಾಂಡ್‌ಬ್ಯಾಗ್‌ ಅನ್ನು ಹೊಳಪಾದ ಮೊಸಳೆಯ ಚರ್ಮದಿಂದ ಮಾಡಲಾಗಿದೆ. ಜೊತೆಗೆ ಬ್ಯಾಗಿನ ಅಲಂಕಾರಕ್ಕೆ 10 ವೈಟ್‌ ಗೋಲ್ಡ್‌ನಿಂದ ಮಾಡಿದ ಪಾತರಗಿತ್ತಿಗಳು ಹಾಗೂ ವಜ್ರದ ಹರಳುಗಳನ್ನು ಬಳಕೆ ಮಾಡಲಾಗಿದೆ. 

ನೀಲ ಮಣಿಗಳು, ಅಪರೂಪದ ನೀಲಿ ಹವಳಗಳು ಬ್ಯಾಗಿನ ಮೆರುಗನ್ನು ಹೆಚ್ಚಿಸಿದೆ.