Asianet Suvarna News Asianet Suvarna News

ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿರುವ ಉದ್ದನೆಯ ಸುರಂಗಕ್ಕೆ ವಾಜಪೇಯಿ ಹೆಸರು!

ಹಿಮಾಚಲ ಪ್ರದೇಶದ ಪ್ರಮುಖ ಸುರಂಗಕ್ಕೆ ವಾಜಪೇಯಿ ಹೆಸರು| ರೋಹ್ಟಂಗ್‌ಪಾಸ್‌ ಬಳಿ ನಿರ್ಮಾಣಗೊಂಡಿರುವ ಸುರಂಗ| 8.8 ಕಿ.ಮೀ ಉದ್ದದ ಮಾರ್ಗ 2020ಕ್ಕೆ ಪೂರ್ಣದ ನಿರೀಕ್ಷೆ

World longest mountain tunnel under Rohtang Pass named after Atal Bihari Vajpayee
Author
Bangalore, First Published Dec 26, 2019, 10:11 AM IST

ನವದೆಹಲಿ[ಡಿ.26]: ಹಿಮಾಚಲ ಪ್ರದೇಶದ ರೋಹ್ಟಂಗ್‌ ಪಾಸ್‌ನ ಕೆಳ ಭಾಗದಲ್ಲಿ ನಿರ್ಮಿಸಿರುವ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ ಸುರಂಗಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. ಅಟಲ್‌ರ 95ನೇ ಜನ್ಮದಿನಾಚರಣೆಯ ಅಂಗವಾಗಿ ಬುಧವಾರ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ.

ಅಟಲ್‌ ಪ್ರಧಾನಿಯಾಗಿದ್ದ ವೇಳೆ ಅಂದರೆ 2000ನೇ ಇಸವಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಸುಮಾರು 4000 ಕೋಟಿ ರು. ವೆಚ್ಚದ ಈ ಯೋಜನೆ 2020ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಮುದ್ರ ಮಟ್ಟದಿಂದ 3000 ಮೀಟರ್‌ ಎತ್ತರದ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಈ ಸುರಂಗ 8.8 ಕಿ.ಮೀ ಉದ್ದವಿರಲಿದೆ. ಇಷ್ಟುಎತ್ತರದ ಪ್ರದೇಶದಲ್ಲಿ ಇಷ್ಟುಉದ್ದದ ಸುರಂಗ ವಿಶ್ವದಲ್ಲೇ ಮೊದಲು.

ಈ ಸುರಂಗ ಮಾರ್ಗ ಸಂಚಾರಕ್ಕೆ ಲಭ್ಯವಾದ ಬಳಿಕ ಮನಾಲಿ ಮತ್ತು ಲೇಹ್‌ ನಡುವಿನ ಮಾರ್ಗ 46 ಕಿ.ಮೀನಷ್ಟುಇಳಿಕೆಯಾಗಿದೆ. ಸರ್ವಋುತು ಸಂಚಾರಕ್ಕೆ ಲಭ್ಯವಿರುವ ಮಾರ್ಗದಿಂದ ಚೀನಾದೊಂದಿಗೆ ಗಡಿ ಭಾಗ ಹೊಂದಿರುವ ಭಾರತಕ್ಕೆ ತ್ವರಿತಗತಿಯಲ್ಲಿ ಸೇನೆ ರವಾನೆಗೆ ಅನುಕೂಲವಾಗಿದೆ.

Follow Us:
Download App:
  • android
  • ios