ಜೆಸಿಬಿಯಿಂದ ಮಣ್ಣನ್ನು ಅಗೆಯುವುದು, ಅಥವಾ ಕಲ್ಲು ಮೊದಲಾದ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುಸುವುದನ್ನು ನೋಡಿದ್ದೇವೆ. ಆದರೆ ಇದರಿಂದಾಗುವ ಮತ್ತೊಂದು ಉಪಯೋಗ ನಿಮಗೆ ತಿಳಿದಿದೆಯಾ? 

ಹೌದು ಕಾರ್ಯಕ್ರಮ ನಿಮಿತ್ತ ಟ್ರಕ್‌ಗೇರಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕೆಳಗಿಳಿಯಲಾಗದೇ ಪರದಾಡಿಡಿದ್ದಾರೆ. ಈ ವೇಳೆ ಬೇರೆ ಉಪಾಯವಿಲ್ಲದೇ ಜೆಸಿಬಿ ತರಿಸಿ ಅದನ್ನೇ ಮೆಟ್ಟಿಲಿನಂತೆ ನಿಲ್ಲಿಸಿ ಟ್ರಕ್‌ನಿಂದ ಕೆಳಗಿಳಿಸಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳೆಯರು ಇಳಿಯಲೂ ಆಗದೆ, ಹಾರಲೂ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾಗ ಜೆಸಿಬಿ ಮೂಲಕ ಕೆಳಗಿಳಿಸಿರುವ ವಿಡಿಯೋ ವ್ಯಾಪಕವಾಗಿ ಶೇರ್ ಕೂಡಾ ಆಗಿದೆ. ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿರುವ ಈ ವಿಡಿಯೋಗೆ ಭಿನ್ನ ವಿಭಿನ್ನ ಕಮೆಂಟ್‌ಗಳು ಬಂದಿದೆ.

ಹೀಗಿದ್ದರೂ ಈ ಘಟನೆ ನಡೆದಿದ್ದೆಲ್ಲಿ? ಎಂಬ ವಿಚಾರ ಬಯಲಾಗಿಲ್ಲ.