ವಿಳಾಸ ಎಲ್ಲಿದ್ದರೂ ಮ್ಯಾಪ್ ಹಾಕಿದರೆ ಸಾಕು. ತಲುಪಬೇಕಾದ ಸ್ಥಳ ನಿರಾಯಾಸವಾಗಿ ಸೇರಬಹುದು. ಆದರೆ ಇಲ್ಲೊಬ್ಬ ಡೆಲಿವರಿ ಬಾಯ್ ಮ್ಯಾಪ್ ಹಾಕಲೂ ಆಗದೆ, ಇತ್ತ ವಿಳಾಸ ಹುಡುಕಲು ಆಗದೇ ಪರದಾಡಿದ ಘಟನೆ ನಡೆದಿದೆ. ಇದಕ್ಕೆ ಕಾರಣ ಗ್ರಾಹಕರ ಬರೆದ ವಿಳಾಸ.

ಜೋಧಪುರ(ಜ.17): ದೊಡ್ಡ ಗೇಟ್ ಪಕ್ಕದಲ್ಲೇ ಬಂದ್ರೆ ಅಲ್ಲೇ ಒಂದು ಲೈಟ್ ಕಂಬ ಸಿಗುತ್ತೆ, ಅದ್ರ ಮುಂದೆ ಎರಡು ಮರ ಇದೆ, ಅಲ್ಲೇ ಪಕ್ಕದಲ್ಲಿ ನಮ್ ಮನೆ ಇದೆ. ಹೀಗೆ ಗೆಳೆಯರಿಗೆ, ಆಪ್ತರಿಗೆ ಅಡ್ರೆಸ್ ಹೇಳಿದ ರೀತಿ, ಆನ್‌ಲೈನ್ ಶಾಪಿಂಗ್ ಖರೀದಿಯಲ್ಲಿ ವಿಳಾಸ ಬರೆದರೆ ಡೆಲಿವರಿ ಬಾಯ್ ಏನು ಮಾಡೋದು. ರಾಜಸ್ಥಾನದ ಜೋಧಪುರದಲ್ಲಿ ಹೀಗೆ ಆಗಿದೆ. ಡೆಲಿವರಿ ಬಾಯ್, ಗ್ರಾಹಕನ ಅಡ್ರೆಸ್ ನೋಡಿ ಕಂಗಾಲಾಗಿದ್ದಾನೆ. ಗೂಗಲ್ ಮ್ಯಾಪ್ ಎಲ್ಲಿಗೆ ಹಾಕಲಿ ಅನ್ನೋದು ಗೊತ್ತಾಗಿಲ್ಲ. ಆತ ನಮೂದಿಸಿದ ಪ್ರಕಾರ ಹೋಗಣ ಅಂದರೆ ಇಡೀ ಜೋಧಪುರ ಜಿಲ್ಲೆ ಹುಡುಕಬೇಕಾದಿತು. ಕಾರಣ ಈತ ಹೇಳಿದ ವಿಳಾದಲ್ಲಿ ಜೋಧಪುರ ಜಿಲ್ಲೆ ಹೊರತುಪಡಿಸಿದರೆ ಇನ್ನೇನು ಇಲ್ಲ. ಇನ್ನುಳಿದ 5 ವಾಕ್ಯದಲ್ಲಿ ತನ್ನ ಮನೆಯ ಪಕ್ಕದ ಹಾದಿ ಬೀದಿ, ಪರಿಸರ ವಿವರಿಸಿದ್ದಾನೆ.

ಈಗ ಎಲ್ಲವನ್ನೂ ಆನ್‌ಲೈನ್ ಮೂಲಕವೇ ಖರೀದಿಸುವ ಜಮಾನ. ಇನ್ನು ಎಲ್ಲೋ ಹೋಗಬೇಕಾದರೂ ಮ್ಯಾಪ್ ಹಾಕಿ ಹೋಗುವ ಜಾಯಮಾನ. ಆದರೆ ಜೋಧಪುರದ ಗ್ರಾಹಕ ತನ್ನ ಆನ್‌ಲೈನ್ ಖರೀದಿ ವೇಳೆ ಹೆಸರನ್ನು ಬಿಕಾರಂ ಎಂದು ನಮೂದಿಸಿದ್ದಾನೆ. ಇನ್ನು ವಿಳಾಸದ ಕತೆ ಕೇಳಿದರೆ ನೀವು ಒಂದು ಬಾರಿ ನಕ್ಕು ಬಿಡುತ್ತೀರ. ಬಿಕಾರಾಂ ಹರಿಸಿಂಗ್ ನಗರ, ಗಿಲ್ಕೋರ್ ಗ್ರಾಮಕ್ಕೆ 1 ಕಿಲೋಮೀಟರ್ ಮೊದಲು, ಬಲ ಭಾಗದಲ್ಲಿ ನಮ್ಮ ಜಮೀನಿನ ಗೇಟ್ ಇದೆ. ಕಪ್ಪು ಬಣ್ಣದ ಕಬ್ಬಿಣದ ಗೇಟ್ ಬಳಿ ಬಂದು ನನಗೆ ಕರೆ ಮಾಡಿ. ನಾನು ಬಂದುಬಿಡುತ್ತೇನೆ. ಜೋಧಪುರ ಜಿಲ್ಲೆ, ರಾಜಸ್ಥಾನ. ಇದು ಆತ ಬರೆದಿರುವ ವಿಳಾಸ.

ಆಹಾರ ಪೂರೈಕೆಗೆ ಹೋದಾಗ ಮೈ ಮೇಲೆ ಹಾರಿದ ನಾಯಿ: ಕಟ್ಟಡದಿಂದ ಹಾರಿದ ಸ್ವಿಗ್ಗಿ ಬಾಯ್

ವಿಳಾಸ ನೋಡಿಯೇ ಡೆಲಿವರಿ ಬಾಯ್ ಆರ್ಡರ್ ತಲುಪಿಸುವುದು ಹೇಗೆ ಅನ್ನೋ ಚಿಂತೆ ಶುರುವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿಶಾಂತ್ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ವಿಳಾಸವನ್ನು ಡೆಲಿವರಿ ಬಾಯ್ ತನ್ನ ಕೊನೆಯ ಉಸಿರಿನವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಬಾರಿಯ ಬೆಸ್ಟ್ ಆನ್‌ಲೈನ್ ಶಾಪಿಂಗ್ ಪ್ರಶಸ್ತಿಯನ್ನು ಈತನಿಗೆ ನೀಡಬೇಕು ಎಂದಿದ್ದಾರೆ. 

Scroll to load tweet…

ಆನ್‌ಲೈನ್ ಖರೀದಿ ವೇಳೆ ತಪ್ಪಾಗಿ ವಿಳಾಸ ನಮೂದಿಸಿದ ಘಟನೆಗಳು ಸಾಕಷ್ಟಿವೆ. ಹಲವರು ಉದ್ದೇಶಕಪೂರ್ವಕವಾಗಿ ಈ ರೀತಿ ಮಾಡಿದ ಘಟನೆಯೂ ನಡೆದಿದೆ. ಇನ್ನು ಆನ್‌ಲೈನ್ ಖರೀದಿಯಲ್ಲಿ ಆರ್ಡರ್ ಮಾಡಿದ ಉತ್ಪನ್ನ ಬಿಟ್ಟು ಬೇರೆ ಉತ್ಪನ್ನ ಬಂದ ಘಟನೆಗಳು ವರದಿಯಾಗಿದೆ. 

ಗಂಟೆಗಟ್ಟಲೆ ಕಾದರೂ ಬರಲೇ ಇಲ್ಲ ಫುಡ್, ಝೊಮೇಟೋ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ

ಲ್ಯಾಪ್ಟಾಪ್‌ ಆರ್ಡರ್‌ ಮಾಡಿದವಗೆ ಸಿಕ್ಕಿದ್ದು ನಾಯಿ ಬಿಸ್ಕೆಟ್‌!
 ಲಂಡನ್ನಿನ 61 ವರ್ಷದ ಎಲಾನ್‌ ವುಡ್‌ ಎಂಬ ವ್ಯಕ್ತಿ ಅಮೇಜಾನ್‌ನಲ್ಲಿ 1.20 ಲಕ್ಷ ರುಪಾಯಿಗಳ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿ ಹಣವನ್ನೂ ಪಾವತಿಸಿದ್ದಾರೆ. ಬಳಿಕ ಡೆಲಿವರಿಯಾದ ಬಾಕ್ಸ್‌ ಓಪನ್‌ ಮಾಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕಂದ್ರೆ ಸಿಕ್ಕಿದ್ದು ಲ್ಯಾಪ್‌ಟಾಪ್‌ ಅಲ್ಲ ಎರಡು ಪೆಡಿಗ್ರಿ ನಾಯಿ ಬಿಸ್ಕೆಟ್‌. ಬಳಿಕ ಮೊದಲು ಹಣ ಹಿಂದಿರುಗಿಸಲು ನಕ್ರಾ ಮಾಡಿದ ಕಂಪನಿ ನಂತರ ಎಲಾನ್‌ಗೆ ಕ್ಷಮೆಯಾಚಿಸಿ ಹಣ ವಾಪಸು ನೀಡಿದೆ. ಏನೇ ಹೇಳಿ ಲ್ಯಾಪ್‌ಟಾಪ್‌ ಬದಲು ನಾಯಿಬಿಸ್ಕೆಟ್‌ ನೋಡಿ ಹೇಗಾಗಿರಬೇಡ.