Asianet Suvarna News Asianet Suvarna News

ಮನೆಯೊಂದಕ್ಕೆ ನುಗ್ಗಿದ ಹಾವನ್ನು ಸೆರೆ ಹಿಡಿದ ಮಹಿಳಾ ಅರಣ್ಯಾಧಿಕಾರಿ

  • ಕೇರಳದ ಮಹಿಳಾ ಅಧಿಕಾರಿಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ
  • ಮನೆಯೊಂದಕ್ಕೆ ನುಗ್ಗಿದ ಹಾವನ್ನು ಸೆರೆ ಹಿಡಿದ ರೋಶಿನಿ
  • ರಾಪಿಡ್ ರೆಸ್ಪಾನ್ಸ್ ಟೀಮ್‌ನ ಸದಸ್ಯರಾಗಿರುವ ಮಹಿಳಾ ಅಧಿಕಾರಿ
     
Women Forest Officer Captures Cobra in Kerala watch video akb
Author
Bangalore, First Published Feb 7, 2022, 5:56 PM IST

ಕೇರಳ: ಮನೆಯೊಂದಕ್ಕೆ ನುಗ್ಗಿದ ನಾಗರಹಾವನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಸೆರೆ ಹಿಡಿದಿದ್ದಾರೆ. ಹಾವುಗಳನ್ನು ರಕ್ಷಿಸುವಲ್ಲಿ ತರಬೇತಿ ಪಡೆದಿರುವ ರೋಶಿನಿ, ಸರೀಸೃಪವನ್ನು ಚತುರವಾಗಿ ನಿಭಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಹಾವುಗಳ ಎದುರಿಗೆ ನಿಂತು ತಾನು ಧೈರ್ಯವಂತೆ/ ಧೈರ್ಯವಂತ ಎಂದು ಹೇಳಿಕೊಳ್ಳುವವರು ತುಂಬಾ ಕಡಿಮೆ. ಆದಾಗ್ಯೂ, ಅರಣ್ಯ ಇಲಾಖೆಯ ಅನೇಕ ತರಬೇತಿ ಪಡೆದ ಸದಸ್ಯರು ಈ ವಿಚಾರಕ್ಕೆ ಹೊರತಾಗಿದ್ದಾರೆ ಮತ್ತು ಆಗಾಗ್ಗೆ ಕಾಣಸಿಗುವ ಸರೀಸೃಪಗಳನ್ನು ರಕ್ಷಿಸುತ್ತಾರೆ. ಕೇರಳದ (Kerala) ತಿರುವನಂತಪುರಂ (Thiruvananthapuram) ಜಿಲ್ಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ನಾಗರಹಾವನ್ನು ಚತುರವಾಗಿ ಮತ್ತು ತಾಳ್ಮೆಯಿಂದ ರಕ್ಷಿಸಿರುವುದೇ ಇದಕ್ಕೆ ಉದಾಹರಣೆ. ಕಟ್ಟಕ್ಕಡದ (Kattakkada) ಮನೆಯೊಂದರಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು. ಅದೀಗ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದು, ಸೆನ್ಸೇಶನ್‌ ಸೃಷ್ಟಿ ಮಾಡಿದೆ. ಅಲ್ಲದೇ ಅಧಿಕಾರಿ ರೋಶಿನಿ ಜಿ ಎಸ್ (Roshini GS) ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 

 

ವಿಡಿಯೋದಲ್ಲಿ ಮಹಿಳಾ ಅಧಿಕಾರಿ ಹಾವು ಹಿಡಿಯುವ ಕೊಕ್ಕೆ ಹಾಗೂ ಚೀಲದೊಂದಿಗೆ  ಹಾವನ್ನು ಶಾಂತವಾಗಿ  ಹಿಡಿಯುವ ದೃಶ್ಯ ಸೆರೆಯಾಗಿದೆ. ರೋಶಿನಿ ಅವರು ಮೆಲ್ಲ ಮೆಲ್ಲನೇ ಹಾವನ್ನು ಅದರ ಬಾಲದಿಂದ ಕೊಕ್ಕೆಯಲ್ಲಿ ಮುಟ್ಟುತ್ತಾ ಕೆಲವು ಸೆಕೆಂಡುಗಳ ಕಾಲ ಕಾದು ಹಾವನ್ನು ಕಪ್ಪು ಚೀಲದ ಮುಂದೆ ಇಡುತ್ತಾರೆ. ಕೂಡಲೇ ಹಾವು ಅದರೊಳಗೆ ಸೇರುತ್ತದೆ. ನಂತರ ಅವರು ಚೀಲವನ್ನು ಕಟ್ಟಿಕೊಂಡು ಹಿಂತಿರುಗುತ್ತಾರೆ .

ನನ್ನ ಕೊನೆ ಉಸಿರಿರುವವರೆಗೆ ಹಾವು ಹಿಡಿಯುವೆ : ಸ್ನೇಕ್‌ ಮ್ಯಾನ್

ಭಾರತೀಯ ಅರಣ್ಯ ಸೇವಾ ಅಧಿಕಾರಿ (Indian Forest Service officer) ಸುಧಾ ರಾಮೆನ್ (Sudha Ramen) ಅವರು ಆನ್‌ಲೈನ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ನಂತರ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಈ ವಿಡಿಯೋವನ್ನು ಅವರು ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಗಳು ಮಾಡುತ್ತಿರುವ ಉತ್ತಮ ಕೆಲಸಕ್ಕೆ ನಿದರ್ಶನ ಎಂದರು. 'ಧೈರ್ಯಶಾಲಿ ಅರಣ್ಯ ಸಿಬ್ಬಂದಿ ರೋಶಿನಿ ಕಟ್ಟಕಡದಲ್ಲಿ ಮಾನವ ವಸತಿ ಪ್ರದೇಶದಲ್ಲಿದ್ದ ಹಾವನ್ನು ರಕ್ಷಿಸಿದ್ದಾರೆ. ಅವರು ಹಾವುಗಳನ್ನು ನಿಭಾಯಿಸುವಲ್ಲಿ ತರಬೇತಿ ಪಡೆದಿದ್ದಾರೆ. ದೇಶಾದ್ಯಂತ ಅರಣ್ಯ ಇಲಾಖೆಗಳಲ್ಲಿ ಮಹಿಳಾ ಬಲವು ಉತ್ತಮ ಸಂಖ್ಯೆಯಲ್ಲಿ ಬೆಳೆಯುತ್ತಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಉರಗರಕ್ಷಕ ವಾವಾ ಸುರೇಶ್‌ಗೆ ಕಚ್ಚಿದ ನಾಗರಹಾವು... ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಈ ವಿಡಿಯೋ ಪೋಸ್ಟ್‌ ಆದ ಕೆಲವೇ ದಿನಗಳಲ್ಲಿ 45 ಸಾವಿರಕ್ಕೂ ಹೆಚ್ಚು ಜನರು ವೀಡಿಯೋವನ್ನು ವೀಕ್ಷಿಸಿದ್ದಾರೆ.  ಹಲವು ಟ್ವಿಟ್ಟರ್ ಬಳಕೆದಾರರು ರೋಶಿನಿ ಅವರ ಕೌಶಲ್ಯ ಮತ್ತು ಹಾವನ್ನು ನಿರ್ವಹಿಸುವ ಕಲೆಗೆ ಅಭಿನಂದಿಸಿದ್ದಾರೆ.  ಕೇರಳದ ಮಾಧ್ಯಮಗಳ ವರದಿಯ ಪ್ರಕಾರ, ರೋಶಿನಿ ಅವರು ತಿರುವನಂತಪುರಂನ (Thiruvananthapuram) ಪರುತಿಪಲ್ಲಿ (Paruthipalli) ರೇಂಜ್ ಆಫೀಸ್‌ನಲ್ಲಿರುವ ರಾಪಿಡ್ ರೆಸ್ಪಾನ್ಸ್ ಟೀಮ್‌ನ ಸದಸ್ಯರಾಗಿದ್ದಾರೆ. ಅಲ್ಲೇ ಆಸುಪಾಸಿನಲ್ಲಿ ನಾಗರಹಾವು ಕಾಣಿಸಿಕೊಂಡಿದೆ ಎಂಬ ಮಾಹಿತಿ ಮೇರೆಗೆ ಕಟ್ಟಕ್ಕಡದ (Kattakkada) ಮನೆಗೆ ಅವರು ತಂಡದೊಂದಿಗೆ ಆಗಮಿಸಿದ್ದರು.

Follow Us:
Download App:
  • android
  • ios