ಮೆಟ್ರೋದಲ್ಲಿ ಸಮೋಸಾ ತಿಂದು ಸೀಟಿನಡಿ ಕಸ ಎಸೆದ ಮಂದಿ, ನಿಯಮ ಇರೋದು ಯಾರಿಗಪ್ಪಾ!

ನಮ್‌ ದೇಶವೇ ಹೀಗೆ..ಇಲ್ಲಿ ನಿಯಮವೇನಿದ್ರೂ ಬ್ರೇಕ್ ಮಾಡಿ ಫೈನ್ ಕಟ್ಟೋಕಷ್ಟೇ. ಅದನ್ನು ಅನುಸರಿಸುವವರು ಕಡಿಮೆ. ಹಾಗೆಯೇ ಮೆಟ್ರೋದಲ್ಲಿ ಆಹಾರ ತಿನ್ಬಾರ್ದು ಅನ್ನೋ ನಿಯಮವಿದ್ರೂ ಇಬ್ಬರು ಮಹಿಳೆಯರು ಬಿಂದಾಸ್ ಆಗಿ ಫುಡ್ ತಿಂದು ಅಲ್ಲೇ ಕಸ ಬಿಸಾಡಿರುವ ಘಟನೆ ನಡೆದಿದೆ.

Women Enjoy Samosas On Delhi Metro, Then Throw Waste Under Seat, video viral Vin

ದೇಶದ ನಗರಗಳಲ್ಲಿರುವ ಟ್ರಾಫಿಕ್‌ನಿಂದ ಬೇಸತ್ತ ಜನರಿಗೆ ಮೆಟ್ರೋ ಸೌಲಭ್ಯ ರಿಲೀಫ್ ನೀಡಿದೆ. ಹಲವು ಮೆಟ್ರೋ ಪಾಲಿಟನ್‌ ನಗರಗಳಲ್ಲಿ ಮೆಟ್ರೋ ರೈಲು ಜನರ ಪ್ರಯಾಣವನ್ನು ಸುಗಮವಾಗಿಸಿದೆ. ಕಡಿಮೆ ಅವಧಿಯಲ್ಲಿ ಟ್ರಾಫಿಕ್ ಕಿರಿಕಿರಿಯಿಲ್ಲದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಆದರೆ ಸೌಲಭ್ಯ ದೊರಕಿದರೂ ಜನರು ಅದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದನ್ನು ಮರೆತುಬಿಡುತ್ತಾರೆ. ಅದಕ್ಕೆ ಮೆಟ್ರೋದಲ್ಲಿ ನಡೆದಿರುವ ಈ ಘಟನೆಯೇ ಸ್ಪಷ್ಟ ಉದಾಹರಣೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣದ ದೃಷ್ಟಿಯಿಂದ ಮೆಟ್ರೋ ರೈಲು ಹಲವು ನಿಯಮಗಳನ್ನು ರೂಪಿಸುತ್ತದೆ. ಆಗಾಗ ಮೆಟ್ರೋ ರೈಲಿನೊಳಗೆ ಈ ನಿಯಮಗಳನ್ನು ಅನೌನ್ಸ್ ಮಾಡುತ್ತಲೇ ಇರುತ್ತದೆ. ಆದರೂ ಜನರು ಇದನ್ನು ಫಾಲೋ ಮಾಡೋ ಬದಲು ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇತ್ತೀಚಿಗೆ ಪ್ರಯಾಣಿಕರಿಬ್ಬರು ಮೆಟ್ರೋದಲ್ಲಿ ಕುಳಿತು ಆಹಾರವನ್ನು ತಿನ್ನುವುದನ್ನು ನೋಡಬಹುದಾಗಿದೆ.

ಮೆಟ್ರೋ ರೈಲು ಖಾಲಿ ಇತ್ತು, ಆದ್ರೂ ಸೀಟ್‌ಗಾಗಿ ಕಿತ್ತಾಡಿಕೊಂಡ ನಾರಿಮಣಿಯರು- ವಿಡಿಯೋ ವೈರಲ್

ಮೆಟ್ರೋದಲ್ಲಿ ಪ್ರಯಾಣಿಕರು ಯಾವುದೇ ಆಹಾರವನ್ನು ತಿನ್ನಬಾರದು ಅನ್ನೋ ನಿಯಮವಿದೆ. ಆದರೆ ದೆಹಲಿ ಮೆಟ್ರೋ ಸೀಟಿನಲ್ಲಿ ಇಬ್ಬರು ಮಹಿಳೆಯರು ಆರಾಮವಾಗಿ ಸಮೋಸವನ್ನು ಸವಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಸಮೋಸಾವನ್ನು ತಿನ್ನುವುದು ಮಾತ್ರವಲ್ಲದೆ ಇಬ್ಬರು ಮಹಿಳೆಯರು ಉಳಿದ ಕಸವನ್ನು ಮೆಟ್ರೋ ಸೀಟಿನೊಳಗೆ ಎಸೆಯುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ಸ್ವಚ್ಛ ಭಾರತ್‌ ಮಿಷನ್‌ ಅನ್ನೋದು ಎಲ್ಲರಿಗೂ ಮರೆತು ಹೋಗಿದೆ' ಎಂದಿದ್ದಾರೆ. ಮತ್ತೊಬ್ಬರು, 'ಇವರು ಮೆಟ್ರೋದಲ್ಲಿ ಮೊದಲ ಬಾರಿಗೆ ಪ್ರಯಾಣಿಸುತ್ತಿರಬೇಕು. ಹೀಗಾಗಿ ಅವರಿಗೆ ನಿಯಮದ ಬಗ್ಗೆ ತಿಳಿದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.

ಮೆಟ್ರೋದಲ್ಲಿ ಯುವತಿಯ ಅಶ್ಲೀಲ ಡ್ಯಾನ್ಸ್, ರೀಲ್ಸ್ ಹುಚ್ಚಿಗೆ ಮಜುಗರಕ್ಕೀಡಾದ ಪ್ರಯಾಣಿಕರು!

Latest Videos
Follow Us:
Download App:
  • android
  • ios