ಗುಜರಾತ್(ನ.26): ಭಾರತದ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿ ಅವಮಾನ, ರಾಷ್ಟ್ರಧ್ವಜದಲ್ಲಿ ಬದಲಾವಣೆ ಮಾಡುವುದು ಅಪರಾಧವಾಗಿದೆ. ಈ ರೀತಿ ರಾಷ್ಟ್ರಧ್ವಜದಲ್ಲಿ ಕೆಲ ಬದಲಾವಣೆ ಮಾಡಿ ಧ್ವಜ ಹಾರಿಸಿದ ಕಾರಣಕ್ಕೆ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು, 30 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ರೋಣ:ರಾಷ್ಟ್ರ ಧ್ವಜವನ್ನ ಕಸದಂತೆ ನೆಲದ ಮೇಲೆ ಎಸೆದ ಪಿಡಿಒ..!..

ಗುಜರಾತ್‌ನ ಆನಂದ್‌ ಜಿಲ್ಲೆಯ ಉಮ್ರೇತ್ ನಗರದ ಇಬ್ಬರು ಮಕ್ಕಳು ( 10 ರಿಂದ 14 ವರ್ಷದೊಳಗಿನ) ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಆದರೆ ಈ ಧ್ವಜದಲ್ಲಿ ಅಶೋಖ ಚಕ್ರದ ಬದಲು ಇಸ್ಲಾಂ ಚಿಹ್ನೆಗಳು, ಇಸ್ಲಾಂ ಸಂದೇಶಗಳನ್ನು ಹೊಂದಿರುವ ಧ್ವಜ ಇದಾಗಿದೆ. 30 ವರ್ಷದ ಮಹಿಳೆಯ ಹಾಗೂ ಮಹಿಳೆಯ 10 ವರ್ಷದ ಪುತ್ರ ಹಾಗೂ ಆತನ ಗೆಳೆಯ ಸೇರಿ ಧ್ವಜರೋಹಣ ಮಾಡಿದ್ದಾರೆ.

ಮಂಡ್ಯ: ತ್ರಿವರ್ಣ ಧ್ವಜ ಹಿಡಿದು, ಕಪ್ಪು ಪಟ್ಟಿ ಧರಿಸಿ ನಮಾಜ್‌ ಸಲ್ಲಿಕೆ

ತ್ರಿವರ್ಣ ಧ್ವಜದಲ್ಲಿ ಮಾರ್ಪಡು ಮಾಡಿ ಹಾರಾಟ ಮಾಡಿದ ಕಾರಣಕ್ಕೆ ಆನಂದ್ ಡಿವಿಶನ್ ಡೆಪ್ಯೂಟಿ ಸೂಪರಿಡೆಂಟ್ ಪೊಲೀಸ್ ಬಿಡಿ ಜಡೇಜಾ, ಮಹಿಳೆಯನ್ನು ಬಂಧಿಸಿದ್ದಾರೆ. ಇನ್ನು ಮಕ್ಕಳಿಬ್ಬರನ್ನು ವಶಕ್ಕೆ ಪಡೆದು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಮಕ್ಕಳು ಅರಿವಿಲ್ಲದೆ ಮಾಡಿದ್ದರೂ, ಈ ಯತ್ನವನ್ನು ಮಹಿಳೆಗೆ ತಡೆಯುವ ಅವಕಾಶವಿತ್ತು. ಆದರೆ ಈ ಮಹಿಳೆ ಧ್ವಜಾರೋಹಣಕ್ಕೆ ಎಲ್ಲಾ ನೆರವು ನೀಡಿದ್ದಾರೆ ಎಂದು ಜಡೇಜಾ ಹೇಳಿದ್ದಾರೆ.