ಕೊರೋನಾ ಎರಡನೇ ಅಲೆ ಭೀಕರವಾದಾಗ ಫಂಕ್ಷನ್, ಹಬ್ಬ, ಮದುವೆ, ಸೀಮಂತ, ಎಂಗೇಜ್ಮೆಂಟ್ ಒಂದಾ ಎರಡಾ..? ಸಂಭ್ರಮಿಸೋದಕ್ಕೆ ಇರೋ ಒಂದು ಛಾನ್ಸ್‌ನ್ನೂ ಮಿಸ್ ಮಾಡದ ಗೃಹಿಣಿಯರಿಗೆ ಲಾಕ್‌ಡೌನ್ ದೊಡ್ಡ ಆಘಾತ.

ಇನ್ನು ಫಂಕ್ಷನ್ ಮಾಡೋರಿಗೆ ಅತಿಥಿಗಳನ್ನು ಆಹ್ವಾನಿಸಬೇಕೇ? ಮದುವೆಗಾಗಿ ಜನರು ಪ್ರಯಾಣಿಸಬೇಕೇ? ಜೋಡಿ ಇನ್ನೂ ಕೆಲವು ತಿಂಗಳು ಕಾಯಲು ಸಾಧ್ಯವಿಲ್ಲವೇ? ಎಂಬ ಸಾಲು ಸಾಲು ಗೊಂದಲ.

ಟಿಫಿನ್ ಬಾಕ್ಸ್‌ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ

20 ಜನ, 50 ಜನ ಇದ್ದು ಮದುವೆಯಾಗೋದಾದ್ರೂ ಸೀರೆ, ಒಡವೆಗೇನೂ ಕಮ್ಮಿ ಇಲ್ಲ. ನಡೆಯೋ ಕೆಲವೇ ಮದುವೆಗಳು ಅದ್ಧೂರಿಯಾಗೇ ನಡೆಯುತ್ತಿವೆ. ಮಹಿಳೆಯೊಬ್ಬರು ಯಾವುದೋ ಫಂಕ್ಷನ್‌ನಲ್ಲಿ ಕ್ಲಿಕ್ಕಿಸಿದ ಸೆಲ್ಫೀ ವೈರಲ್ ಆಗಿದೆ.

ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ಅವರು ಟ್ವೀಟ್ ಮಾಡಿರುವ ಚಿತ್ರದಲ್ಲಿ, ಅಪರಿಚಿತ ಮಹಿಳೆ ಮೂಗಿನ ಆಭರಣವನ್ನು ಮುಖದ ಮುಖವಾಡಕ್ಕೆ ಪಿನ್ ಮಾಡಿರುವುದನ್ನು ಕಾಣಬಹುದು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೀವಾನೇ ಹೋಗ್ಲಿ ಆದ್ರೆ ಆಭರಣ ಅಲ್ಲ, ತೋರಿಕೆಯ ಪರಮಾವಧಿ, ಲಿಪ್‌ಸ್ಟಿಕ್‌ಗೂ ಒಂದು ಕಿಟಿಕಿ ಬೇಕಿತ್ತು, ಗ್ರೇಟ್.. ಶೃಂಗಾರ ಮತ್ತು ಸುರಕ್ಷೆ, ಅವರು ಸ್ತ್ರೀ, ಏನು ಬೇಕಾದರೂ ಮಾಡಬಲ್ಲಳು, ಆಭರಣ ಭಾರತದ ಜನ್ಮ ಸಿದ್ಧ ಹಕ್ಕು ಎಂದೆಲ್ಲಾ ನೆಟ್ಟಿಗರು ಕಮೆಂಟಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona