29 ವರ್ಷದ ಯುವತಿ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ತಂಗಿದ್ದ ಪಿಜಿ ಕೋಣೆಯಲ್ಲಿ ಯುವತಿ ಶವ ಪತ್ತೆಯಾಗಿದೆ. 

ಗುರುಗಾಂವ್ (ಜೂ. 28) ಮಾಡೆಲ್ ಕಮ್ ನಟಿ ಶೆಫಾಲಿ ಜರಿವಾಲ ನಿಧನ, ಹೈದರಾಬಾದ್ ನಿರೂಪಕಿ ಸಾವು ಸೇರಿದಂತೆ ಇಂದು ದೇಶದ ಹಲವು ಭಾಗದಲ್ಲಿ ದುಃಖ ಹಾಗೂ ನೋವಿನ ಸುದ್ದಿಗಳೇ ಸದ್ದು ಮಾಡುತ್ತಿದೆ. ಈ ಘಟನೆಗಳ ಬೆನ್ನಲ್ಲೇ ಇದೀಗ 29 ವರ್ಷದ ಯುವತಿ ಶವ ಆಕೆ ತಂಗಿದ್ದ ಪಿಜಿ ಕೋಣೆಯಲ್ಲಿ ಪತ್ತೆಯಾಗಿದೆ. ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ, ಪ್ರತಿ ದಿನ ಪಿಜಿಗೆ ಬರುತ್ತಿದ್ದ ಆಕೆಯ ಬಾಯ್‌ಫ್ರೆಂಡ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಗುರುಗಾಂವ್‌ನ ಡಿಎಲ್‌ಎಫ್ 3ಎಸ್ ವಿ ಬ್ಲಾಕ್‌ನಲ್ಲಿ ನಡೆದಿದೆ.

ಬಾಯ್‌ಫ್ರೆಂಡ್ ವಿಚಾರಣೆ ತೀವ್ರ

ನಜಾಫಗಡ ಮೂಲದ ಈಕೆ ಗುರುಗಾಂವ್‌ನಲ್ಲಿ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ 7 ವರ್ಷಗಳಿಂದ ಪ್ರೀತಿಯಲಲ್ಲಿದ್ದಳು. ಈ ಹಿಂದಿನ ಕಂಪನಿಯಲ್ಲಿ ಪರಿಚಯವಾಗಿದ್ದ ಯುವಕನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದ ಈಕೆ ಇದೀಗ ಏಕಾಏಕಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಬಾಯ್‌ಫ್ರೆಂಡ್ ವಶಕ್ಕೆ ಪಡೆದಿರುವ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಒಂದೆರೆಡು ದಿನದಿಂದ ಈಕೆಯ ಸುಳಿವಿರಲಿಲ್ಲ. ಇತ್ತ ಪಿಜಿ ಕೋಣೆಯಿಂದ ದುರ್ವಾಸನೆ ಬರುತ್ತಿದ್ದಂತೆ ಪಿಜಿ ಮಾಲೀಕರು ಗಂಭೀರತೆ ಅರಿತಿದ್ದಾರೆ. ಹೀಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಬಾಗಿಲು ಒಡೆದು ಯುವತಿ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ತಂಗಿ ಹಾಗೂ ಬಾಯ್‌ಫ್ರೆಂಡ್‌ಗೆ ಕೊನೆಯ ಕಾಲ್

ಈ ಯುವತಿ ಕೊನೆಯದಾಗಿ ಕರೆ ಮಾಡಿದ್ದು ತನ್ನ ಸಹೋದರಿಯರಿಗೆ ಹಾಗೂ ಬಾಯ್‌ಫ್ರೆಂಡ್‌ಗೆ. ಮೂವರು ಸಹದೋರಿಯರ ಜೊತೆಗೆ ಈಕೆ ಕೊನೆಯದಾಗಿ ಮಾತನಾಡಿದ್ದಾಳೆ. ಇತ್ತ ಬಾಯ್‍‌ಫ್ರೆಂಡ್‌ಗೂ ಕರೆ ಮಾಡಿ ಮಾತನಾಡಿದ್ದಾರೆ. ಸಾವಿನ ಕುರಿತು ಕೆಲ ಅನುಮಾನಗಳು ಹೆಚ್ಚಾಗುತ್ತಿದೆ.

ಕುಟುಂಬಸ್ಥರು ಹೇಳುತ್ತಿರುವುದೇನು?

ಯುವತಿ ಮಾಸಿಕವಾಗಿ ಕುಗ್ಗಿ ಹೋಗಿದ್ದಳು. ಕುಟುಂಬಕ್ಕೆ ತಾನೇ ಆಧಾರವಾಗಿದ್ದಳು. ಸಹೋದರಿಯರ ವಿದ್ಯಾಭ್ಯಾಸ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು, ಕುಟುಂಬ ನಿರ್ವಹಣೆಯನ್ನು ಈಕೆ ಮಾಡುತ್ತಿದ್ದಳು. ಕಳೆದ ಕೆಲ ತಿಂಗಳುಗಳಿಂದ ಈಕೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಪ್ರತಿ ದಿನ ಪಿಜೆಗೆ ಬರುತ್ತಿದ್ದ ಬಾಯ್‌ಫ್ರೆಂಡ್ ಕೆಲ ದಿನಗಳಿಂದ ನಾಪತ್ತೆ

ಪ್ರತಿ ದಿನ ಪಿಜಿಗೆ ಬರುತ್ತಿದ್ದ ಈಕೆಯ ಬಾಯ್‌ಫ್ರೆಂಡ್ ಕಳೆದ ಕೆಲ ದಿನಗಳಿಂದ ಪಿಜಿ ಬಳಿ ಪತ್ತೆಯಾಗಿಲ್ಲ ಎಂದು ಇದೇ ಪಿಜಿಯಲ್ಲಿರುವ ಕೆಲವರು ಹೇಳಿದ್ದಾರೆ. 7 ವರ್ಷಗಳಿಂದ ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದರು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾಗಿದ್ದ. ಬಳಿಕ ಇಬ್ಬರು ಕಂಪನಿ ತೊರೆದು ಬೇರೆ ಬೇರೆ ಕಂಪನಿ ಸೇರಿಕೊಂಡಿದ್ದರು. ಸದ್ಯ ಯುವತಿ ಬೇರೆ ಕಂಪನಿಯಲ್ಲಿದ್ದರೆ, ಇತ್ತ ಬಾಯ್‌ಫ್ರೆಂಡ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.