Asianet Suvarna News Asianet Suvarna News

ಶಾಕಿಂಗ್ ವಿಡಿಯೋ: ಜನಸಂದಣಿಯ ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಮಹಿಳೆ 

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಪ್ರಮುಖ ರಸ್ತೆಯಲ್ಲಿ ಜೂನ್ 25ರಂದು ಈ ಘಟನೆ ನಡೆದಿದೆ. 

Woman Walking Naked On Busy Street In Ghaziabad uttar pradesh mrq
Author
First Published Jun 27, 2024, 7:17 PM IST

ಲಕ್ನೋ: ನಡುರಸ್ತೆಯಲ್ಲಿ ಮಹಿಳೆ ಬೆತ್ತಲಾಗಿ ಓಡಾಡಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನಸಂದಣಿಯ ರಸ್ತೆಯಲ್ಲಿ ಮಹಿಳೆ ಯಾರ ಭಯವಿಲ್ಲದೇ ಹೋಗುತ್ತಿರುವ 9 ಸೆಕೆಂಡ್‌ ವಿಡಿಯೋ ತುಣಕು ಭಾರೀ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಪ್ರಮುಖ ರಸ್ತೆಯಲ್ಲಿ ಜೂನ್ 25ರಂದು ಈ ಘಟನೆ ನಡೆದಿದೆ. 

ಗಾಜಿಯಾಬಾದ್ ಸಿಟಿಯ ಮೋಹನ್ ನಗರದ ಚೌರ್ಹಾ ಪ್ರದೇಶದ ರಸ್ತೆಯಲ್ಲಿ ಬೆತ್ತಲಾದ ಮಹಿಳೆ ಕಾಣಿಸಿಕೊಂಡಿದ್ದು, ಯಾರು ಆಕೆಯನ್ನು ತಡೆಯಲು ಮುಂದಾಗಿಲ್ಲ. ರಸ್ತೆಯಲ್ಲಿ ಅಷ್ಟು ಜನರಿದ್ದರೂ ಮಹಿಳೆಯನ್ನು ಯಾರೊಬ್ಬರೂ ಸಹ ಪ್ರಶ್ನಿಸಲು ಮುಂದಾಗಿಲ್ಲ. ಒಂದು ರೀತಿ ಮಹಿಳೆ ಹಾಗೆ ಬಂದು ಮಿಂಚಿನಂತೆ ಮಾಯವಾದರು ಎಂದು ಹೇಳಲಾಗುತ್ತಿದೆ. ಮಹಿಳೆ ಸುತ್ತಲೂ ಸಾರ್ವಜನಿಕರು ನಿಂತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಳ್ಳತನಕ್ಕೆ ಬಂದೋನು ಹಾಸಿಗೆ ಮೇಲಿದ್ದ ಪತಿ ಪತ್ನಿ ವಿಡಿಯೋ ಮಾಡ್ದ! ವಾಟ್ಸಪ್ ಮೆಸೇಜ್ ನೋಡಿ ದಂಪತಿ ಕಂಗಾಲು!

ಯಾರು ಈ ಮಹಿಳೆ?

ಯಾರು ಈ ಮಹಿಳೆ? ಬೆತ್ತಲಾಗಿ ನಡುರಸ್ತೆಯಲ್ಲಿ ಓಡಾಡಿದ್ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಮಹಿಳೆಯ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಈ ಬಗ್ಗೆ ಸ್ಥಳೀಯ ಪೊಲೀಸರಿಂದಲೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಈ ವಿಡಿಯೋ ಬಳಿಕ ಗಾಜಿಯಾಬಾದ್‌ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆಗಳು ಶುರುವಾಗಿವೆ.

ಇದು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ವಿಷಯವಾಗಿದೆ. ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಪತ್ತೆ ಮಾಡಬೇಕು. ಈ ಘಟನೆ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಐವರು ಯುವಕರ ಜೊತೆ ವಧುವಿನ ಫಸ್ಟ್ ನೈಟ್- ಶಾಕಿಂಗ್ ನ್ಯೂಸ್ ಬೆಳಕಿಗೆ 

Latest Videos
Follow Us:
Download App:
  • android
  • ios