ಚಲಿಸುತ್ತಿದ್ದ ಕಾರಿನಲ್ಲಿ ಸಭ್ಯತೆ ಮೀರಿದ ಯುವತಿ, ಇತರ ಸವಾರರಿಂದ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಯುವತಿಯ ವರ್ತನೆ ಹಾಗೂ ಅಪಾಯಕಾರಿ ಸ್ಟಂಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. 

ಲಖನೌ (ನ.18) ರಸ್ತೆಯಲ್ಲಿ ಅಪಾಯಾಕಾರಿ ಸ್ಟಂಟ್ ಮಾಡುವುದು ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ. ಬೈಕ್ ಮೂಲಕ, ಕಾರು ಮೂಲಕ ಸ್ಟಂಟ್ ಮಾಡಿ ಪೊಲೀಸರಿಂದ ದುಬಾರಿ ದಂಡ, ಕಠಿಣ ಶಿಕ್ಷೆಗೆ ಗುರಿಯಾದ ಉದಾಹರಣೆ ಇದೆ. ಇದೀಗ ಪ್ರಮುಖ ರಸ್ತೆಯಲ್ಲಿ ಯುವತಿಯೊಬ್ಬಳು ಬಟ್ಟೆ ಬಿಚ್ಚಿ ಕಾರಿನ ವಿಂಡೋ ಮೂಲಕ ಹೊರಗಡೆ ನಿಂತು ಸ್ಟಂಟ್ ಮಾಡಿದ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದಿದೆ. ಹಿಂಬದಿ ಕಾರಿನ ಪ್ರಯಾಣಿಕರು ಯುವತಿಯ ವರ್ತನೆ, ಅಪಾಯಾಕಾರಿ ಸ್ಟಂಟ್ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಯುವತಿ ವಿರುದ್ಧ ಬಾರಿ ಆಕ್ರೋಶಗಳು ವ್ಯಕ್ತವಾಗಿದೆ.

ಯುವತಿಯ ನಡೆಯಿಂದ ಹಲವರಿಗೆ ಮುಜುಗರ

ಸೋಶಿಯಲ್ ಮೀಡಿಯಾದಲ್ಲಿ ಈ ಯುವತಿಯ ಅಪಾಯಾಕಾರಿ ಸ್ಟಂಟ್ ವೈರಲ್ ಆಗುತ್ತಿದೆ. ಈ ವಿಡಿಯೋ ಕುರಿತು ಸ್ಪಷ್ಟತೆ ಲಭ್ಯವಾಗಿಲ್ಲ. ವಿಡಿಯೋದಲ್ಲಿ ಉತ್ತರ ಪ್ರದೇಶ ರಿಜಿಸ್ಟ್ರೇಶನ್ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಯುವತಿ ಈ ಸ್ಟಂಟ್ ಮಾಡಿದ್ದಾಳೆ. ಕಪ್ಪು ಬಣ್ಣದ ಕಾರು ವೇಗವಾಗಿ ಸಾಗುತ್ತಿದ್ದರೆ, ಇತ್ತ ಕಾರಿನಲ್ಲಿ ಕುಳಿತಿದ್ದ ಯುವತಿ ಬಟ್ಟೆ ಬಿಟ್ಟ ಕಾರಿನ ವಿಂಡೋ ಮೂಲಕ ಹೊರಗೆ ಚಾಚಿ ನಿಂತು ಕುಣಿದಾಡಿದ್ದಾಳೆ. ಯುವತಿಯ ಅರ್ಧ ದೇಹ ಕಾರಿನಿಂದ ಹೊರಗಿದೆ. ಜೊತೆಗೆ ಬಟ್ಟೆಯೂ ಇಲ್ಲ, ಇಷ್ಟೇ ಅಲ್ಲ ಅತೀ ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿ ಅಪಾಯಾಕಾರಿ ರೀತಿ ಕುಣಿದಾಡುತ್ತಾ ಸ್ಟಂಟ್ ಮಾಡಿದ್ದಾಳೆ.

ಸಭ್ಯತೆ ಮರತೆ ಯುವತಿ

ಲಖನೌದ ಶಹೀದ್ ಪಾಥ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಸೋಶಿಯಲ್ ಮೀಡಿಯಾ ವಿಡಿಯೋಗಳು ಹೇಳುತ್ತಿದೆ. ಲಖನೌ ನಗರದ ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಯುವತಿ ಕೆಟ್ಟದಾಗಿ ನಡೆದುಕೊಂಡಿದ್ದಾಳೆ. ಸಾರ್ವಜನಿ ಸ್ಥಳದಲ್ಲಿ ಸಭ್ಯತೆ ಮೀರಿದ್ದು ಮಾತ್ರವಲ್ಲ, ಟ್ರಾಫಿಕ್ ನಿಯಮವನ್ನೂ ಉಲ್ಲಂಘಿಸಿದ್ದಾಳೆ. ಸಾರ್ವಜನಿಕ ರಸ್ತೆಯಲ್ಲಿ ಅಪಾಯಾಕಾರಿ ಸ್ಟಂಟ್ ಮಾಡುವುದು ಸ್ಟಂಟ್ ಮಾಡುವವರಿಗೆ ಮಾತ್ರವಲ್ಲ, ಇತರ ಪ್ರಯಾಣಿಕರ ಜೀವಕ್ಕೂ ಅಪಾಯ ತಂದೊಡ್ಡಲಿದೆ. ಹೀಗಾಗಿ ಈ ರೀತಿ ಸ್ಟಂಟ್ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುತ್ತದೆ.

ಈ ಘಟನೆ ಕುರಿತು ಲಖನೌ ಪೊಲೀಸರಿಂದ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಆದರೆೆ ಮೂಲಗಳ ಪ್ರಕಾರ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರಿನ ನಂಬರ್ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿರುವ ಪೊಲೀಸರು ಯವತಿ ಹಾಗೂ ಕಾರು ಚಾಲಕನ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.

ಶಹೀದ್ ಪಥ ಮಾರ್ಗದಲ್ಲಿ ಈ ರೀತಿಯ ಹಲವು ಟ್ರಾಫಿಕ್ ನಿಯಮ ಉಲ್ಲಂಘನೆಗಳು ನಡೆದಿದೆ. ಪ್ರತಿ ಬಾರಿ ಪೊಲೀಸರು ಕಠಿಣ ಕ್ರಮ ಜರುಗಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿ ಹಲವು ನಿಯಮಗಳು ಉಲ್ಲಂಘನೆಯಾಗಿದೆ.