ಮಾಸ್ಕ್ ಹಾಕ್ಕೋ ಎಂದ ಪೌರ ಕಾರ್ಮಿಕಳಿಗೆ ಮೃಗದಂತೆ ಥಳಿಸಿದ ಮಹಿಳೆ | ವಿಡಿಯೋ ವೈರಲ್
ಮುಂಬೈ(ಮಾ.20): ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ, ಜನರು COVID 19 ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ಇತ್ತೀಚಿನ ಘಟನೆಯಲ್ಲಿ ನಗರದ ಕಂಡಿವಲಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮಾಸ್ಕ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಆದರೆ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕೆಲಸಗಾರಳೊಬ್ಬಳು ಆಕೆಯನ್ನು ತಡೆದಾಗ, ಅವಳು ಪೌರ ಕಾರ್ಮಿಕಳಿಗೆ ಹೊಡೆದು ಕಪಾಳಮೋಕ್ಷ ಮಾಡಿದ್ದಾರೆ.
ವಿಶ್ವದ ಮೊದಲ ಕೊರೋನಾ ಲಸಿಕೆ ಅಭಿವೃದ್ದಪಡಿಸಿದವರ ಚಿತ್ತ ಈಗ ಕ್ಯಾನ್ಸರ್ ಲಸಿಕೆ!...
ಘಟನೆಯ ಮೊಬೈಲ್ ವಿಡಿಯೋವನ್ನು ಸಾಮಾಜಿಕ ಶೇರ್ ಮಾಡಿಕೊಳ್ಳಲಾಗುತ್ತಿದೆ. ಆ ಕ್ಲಿಪ್‌ನಲ್ಲಿ, ಆಟೋರಿಕ್ಷಾ ಒಳಗೆ ಕುಳಿತಿದ್ದ ಮಹಿಳೆ ಮಾಸ್ಕ್ ಧರಿಸಲು ಕೇಳಿದಾಗ ಪೌರ ಕಾರ್ಮಿಕ ಮಹಿಳಾ ಕೆಲಸಗಾರಳನ್ನು ಹೊಡೆಯುವುದನ್ನು ಕಾಣಬಹುದು. ಕೆಲಸಗಾರಳನ್ನು ಕಾಲಿನಿಂದ ಒದ್ದು, ತಲೆಗೂದಲು ಹಿಡಿದು ಎಳೆಯುತ್ತಿರುವುದನ್ನು ಕಾಣಬಹುದು.
ಕೊರೋನವೈರಸ್ ಹರಡುವುದನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸದವರಿಗೆ ದಂಡ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೊರೊನಾ ಸ್ಫೋಟ, ಮಹಾ 50 % ಲಾಕ್‌ಡೌನ್, ಕರ್ನಾಟಕದಲ್ಲೂ ಜಾರಿಯಾಗುತ್ತಾ..?
ಮಾಸ್ಕ್ ಧರಿಸದವರಿಗೆ ಈಗ ಚಲನ್ ನೀಡಲು ಮುಂಬೈ ಪೋಲಿಸ್ ಅಧಿಕಾರ ಹೊಂದಿದೆ. ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸದ ಕಾರಣಕ್ಕಾಗಿ ನಾವು ನಿಮಗೆ ದಂಡ ವಿಧಿಸಿದಾಗಲೆಲ್ಲಾ ನಿಮ್ಮ ಜೀವನ ಮತ್ತು ಸುರಕ್ಷತೆಯ ಮೌಲ್ಯವನ್ನು ನಿಮಗೆ ನೆನಪಿಸುತ್ತೇವೆ. ಮಾಸ್ಕ್‌ಗಳಿಗೂ ಅದೇ ಅನ್ವಯವಾಗುತ್ತದೆ. ದಯವಿಟ್ಟು ನೋಡಿಕೊಳ್ಳಿ ಎಂದು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿ ಶುಕ್ರವಾರ 3,000 ಕ್ಕಿಂತಲೂ ಹೆಚ್ಚು ಕೋವಿಡ್ -19 ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಈಗ ಒಟ್ಟು ಕೇಸ್ 24,22,021 ರಷ್ಟಿದೆ.
