ಬರ್ತ್‌ಡೇ ದಿನ ಮನೆಯಲ್ಲೇ ಉಳಿದ ಮಹಿಳೆ | ಕೊರೋನಾ ಸಂಕಟದ ಮಧ್ಯೆ ಪೊಲೀಸರು ಕೊಟ್ರು ಸ್ವೀಟ್ ಸರ್ಪೈಸ್
ಮುಂಬೈ(ಏ.24): ಬರೀ ಕೊರೋನಾ ಸಾವು, ಸೋಂಕಿತರ ಸಂಖ್ಯೆ ಹೆಚ್ಚಳ, ಆಕ್ಸಿಜನ್ ಇಲ್ಲದೆ ನರಳಾಟ ಇದನ್ನೇ ನೋಡಿ ನೋಡಿ ಮನಸು ಕೆಟ್ಟಿದೆಯಾ..? ಹಾಗಾದ್ರೆ ಇಲ್ಲಿ ನೋಡಿ. ಕೊರೋನಾ ಸಂಕಟದ ಮಧ್ಯೆ ನಡೆದ ಸಣ್ಣ, ಸುಂದರ ಘಟನೆಯೊಂದು ಎಲ್ಲೆಡೆ ವೈರಲ್ ಆಗಿದೆ.
ಮುಂಬೈ ಪೊಲೀಸರ ಜನಸ್ನೇಹಿ ನಡವಳಿಕೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಸು ಗೆದ್ದಿದೆ. ಟ್ವಿಟರ್ ಬಳಕೆದಾರರಿಂದ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ತನ್ನ ಜನ್ಮದಿನವನ್ನು ಆಚರಿಸಲು ಹೊರಗೆ ಹೋಗಲು ನಿರಾಕರಿಸಿದ ಮಹಿಳೆಗೆ ಇಲಾಖೆಯು ಕೇಕ್ ಕಳುಹಿಸಿದ ಸುಂದರ ವಿಚಾರವೊಂದು ಆನ್‌ಲಯನ್‌ನಲ್ಲಿ ಓಡಾಡುತ್ತಿದೆ.
ಸುಪ್ರೀಂಕೋರ್ಟ್ ನೂತನ ಸಿಜೆಐ ಎನ್. ವಿ. ರಮಣ ಪ್ರಮಾಣವಚನ ಸ್ವೀಕಾರ!
ಟ್ವಿಟರ್ ಬಳಕೆದಾರರು ತಮ್ಮ ಪೋಸ್ಟ್ನಲ್ಲಿ ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ಘಟನೆಗಳ ವಿವರಿಸುವ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಓಡಾಡುತ್ತಿದೆ. ನನ್ನ ದಿನ ಸುಂದರವಾಗಿಸಿದ್ದಕ್ಕಾಗಿ ಧನ್ಯವಾದಗಳು-ಮುಂಬೈ ಪೋಲಿಸ್ ಎಂದು ಅವರು ಪೋಸ್ಟ್ ಹಂಚಿಕೊಂಡಾಗ ಬರೆದಿದ್ದಾರೆ.
ಇದಕ್ಕೆ ಮುಂಬೈ ಪೊಲೀಸರು ಕೂಡ ಹೃದಯಸ್ಪರ್ಶಿ ಉತ್ತರ ನೀಡಿದ್ದಾರೆ. ನೀವು ಜವಾಬ್ದಾರಿಯುತ ಪ್ರಜೆ. ನಿಮ್ಮ ವಿಶೇಷ ದಿನದಂದು ನೀವು ಮನೆಯಲ್ಲಿಯೇ ಇರುವುದಕ್ಕೆ ನಮ್ಮ ಮೆಚ್ಚುಗೆ ಇದು. ಇಂದು ನಿಮ್ಮ ಸುರಕ್ಷಿತ ಆಚರಣೆಯು ನಾಳೆ ನಗರ ಸಂತೋಷದಿಂದಿರಲು ಸಹಾಯ ಮಾಡುತ್ತದೆ. ನಾವು ನಿಮಗೆ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.
