14 ತಿಂಗಳ ಕಾನೂನು ಹೋರಾಟದ ನಂತರ, ಶ್ರೀಲಂಕಾ ಮೂಲದ ಮಹಿಳೆಯೊಬ್ಬರು ಕಸ್ಟಮ್ಸ್‌ನಿಂದ ತಮ್ಮ 11 ತೊಲೆ ಮಂಗಳಸೂತ್ರವನ್ನು ಮರಳಿ ಪಡೆದಿದ್ದಾರೆ. ಮದ್ರಾಸ್ ಹೈಕೋರ್ಟ್ ಎಲ್ಲಾ ಧರ್ಮಗಳ ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸಬೇಕು ಎಂದು ಹೇಳಿದೆ.

ಚೆನ್ನೈ: ಬರೋಬ್ಬರಿ 14 ತಿಂಗಳ ಕಾನೂನು ಹೋರಾಟದ ನಂತರ, ಶ್ರೀಲಂಕಾ ಮೂಲದ ಮಹಿಳೆಯೊಬ್ಬರು ತಮ್ಮ 11 ತೊಲೆ ಮಂಗಳಸೂತ್ರವನ್ನು ಕಸ್ಟಮ್ಸ್‌ನಿಂದ ವಾಪಸ್ ಪಡೆದಿದ್ದಾರೆ.

ಶ್ರೀಲಂಕಾ ಮೂಲದ ಮಹಿಳೆಯಿಂದ ಚೆನ್ನೈನಲ್ಲಿ ಕಸ್ಟಮ್ಸ್ ಅಧಿಕಾರಿಗಳು 11 ತೊಲೆ ಮಂಗಳಸೂತ್ರ ಮತ್ತು ಇತರ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಮಹಿಳೆ ಮಂಗಳಸೂತ್ರಕ್ಕಾಗಿ ಕಾನೂನು ಹೋರಾಟ ನಡೆಸಿದ್ದರು. ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ನ ಆದೇಶದ ನಂತರ, ಮಹಿಳೆಗೆ ಮಂಗಳಸೂತ್ರ ಶುಕ್ರವಾರ ಹಿಂತಿರುಗಿಸಲಾಯಿತು. 'ಎಲ್ಲಾ ಧರ್ಮಗಳ ಸಾಂಸ್ಕೃತಿಕ ಮೌಲ್ಯಗಳು ಮತ್ತು ಪದ್ಧತಿಗಳನ್ನು ಗೌರವಿಸಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿತು.

ಫೆಬ್ರವರಿ 14 ರಂದು ಮಹಿಳೆಯ ಪರವಾಗಿ ತೀರ್ಪು ಬಂದಿತು. ಶುಕ್ರವಾರ, ಮಹಿಳೆಯ ಸಂಬಂಧಿಕರು ಬಂದು ಚಿನ್ನಾಭರಣಗಳನ್ನು ಪಡೆದರು. ಚೆನ್ನೈ ಕಸ್ಟಮ್ಸ್ ಇಲಾಖೆಯು 11 ತೊಲ ಮಂಗಳಸೂತ್ರ ಸೇರಿದಂತೆ 36 ತೊಲ ಚಿನ್ನಾಭರಣಗಳನ್ನು ದೂರುದಾರರ ಕುಟುಂಬಕ್ಕೆ ಹಸ್ತಾಂತರಿಸಿತು. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಡಿಸೆಂಬರ್ 30, 2023 ರಂದು ನಡೆದಿತ್ತು. ಶ್ರೀಲಂಕಾ ಮೂಲದ ತನುಷಿಕಾ, ಮದುವೆಯ ನಂತರ ತನ್ನ ಅತ್ತೆ ಮತ್ತು ಅತ್ತಿಗೆಯೊಂದಿಗೆ ಚೆನ್ನೈಗೆ ಬಂದಿದ್ದರು. ಈ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯನ್ನು ಪರಿಶೀಲಿಸಿದಾಗ ಚಿನ್ನಾಭರಣ ಮಂಗಳಸೂತ್ರ ಪತ್ತೆ ಹಿನ್ನೆಲೆ ಸುಮಾರು 12 ಗಂಟೆಗಳ ಕಾಲ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಲೀಗಲ್ ನೋಟಿಸ್ ಕೊಟ್ಟ ವಕೀಲನೇ ಆರೋಪಿ! 10 ವರ್ಷ ಕಾನೂನು ಹೋರಾಟ, ಕಡೆಗೂ ಗೆದ್ದ ಅಡ್ವೋಕೆಟ್! ಏನಿದು ಪ್ರಕರಣ?

ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ:

ಚಿನ್ನಾಭರಣ ವಶಕ್ಕೆ ಪಡೆ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಸ್ತುತ ಮಹಿಳೆ ಫ್ರಾನ್ಸ್‌ನಲ್ಲಿದ್ದಾಳೆ. 'ಗ್ರೀನ್ ಚಾನೆಲ್ ಮೂಲಕ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ' ಎಂಬ ಕಸ್ಟಮ್ಸ್ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. 1962 ರ ಕಸ್ಟಮ್ಸ್ ಕಾಯ್ದೆಯ ಪ್ರಕಾರ, ವಿದೇಶಿ ಪ್ರಜೆಗಳು ಅಫಿಡವಿಟ್ ನೀಡದೆ ನಿಗದಿತ ಮಿತಿಗಿಂತ ಹೆಚ್ಚಿನ ಚಿನ್ನವನ್ನು ಸಾಗಿಸಲು ಸಾಧ್ಯವಿಲ್ಲ. ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರಿದ್ದ ಏಕ ಪೀಠವು ಈ ವಾದವನ್ನು ತಿರಸ್ಕರಿಸಿತು.

ಇದನ್ನೂ ಓದಿ:

ಕೋರ್ಟ್ ಹೇಳಿದ್ದೇನು?

ಭಾರತೀಯ ಸಾಂಸ್ಕೃತಿಕ ಸಂಪ್ರದಾಯದ ಪ್ರಕಾರ ವಿವಾಹಿತ ಮಹಿಳೆಯರು ಭಾರವಾದ ಚಿನ್ನಾಭರಣಗಳನ್ನು ಧರಿಸುವುದು ಸಾಮಾನ್ಯವಾಗಿದೆ ಮತ್ತು ಅಧಿಕಾರಿಗಳು ತಪಾಸಣೆ ನಡೆಸುವಾಗ ದೇಶದ ಎಲ್ಲಾ ಧರ್ಮಗಳ ಪದ್ಧತಿಗಳನ್ನು ಗೌರವಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಆಭರಣಗಳನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿ ಎಸ್ ಮೈಥಿಲಿ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಹೇಳಿದೆ.