ನಿಮಗೆ ಪಾರ್ಸೆಲ್ ಬಂದರೆ ತೆರೆಯುವ ಮುನ್ನ ವಿಡಿಯೋ ಮಾಡುವುದು ಒಳಿತು. ಹೀಗೆ ಕೆಲ ಎಲೆಕ್ಟ್ರಿಕ್ ವಸ್ತುಗಳು, ಮನೆ ನಿರ್ಮಾಣ ವಸ್ತುಗಳ ನಿರೀಕ್ಷೆಯಲ್ಲಿದ್ದ ಮಹಳೆಗೆ ಪಾರ್ಸೆಲ್ ಒಂದು ಬಂದಿದೆ. ಖಷಿಯಿಂದ ತೆರೆದು ನೋಡಿ ಆಘಾತಗೊಂಡಿದ್ದಾರೆ. ಮಾಹಿತಿ ತಿಳಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟಕ್ಕೂ ಈ ಪಾರ್ಸೆಲ್ ಬಾಕ್ಸ್‌ನಲ್ಲಿ ಏನಿತ್ತು? 

ಗೋದಾವರಿ(ಡಿ.20) ಈಗ ಎಲ್ಲವೂ ಆನ್‌ಲೈನ್ ಶಾಪಿಂಗ್.ಬುಕ್ ಮಾಡಿದರೆ ಸಾಕು ಕುಳಿತಲ್ಲಿಗೆ ನೇರವಾಗಿ ಪಾರ್ಸೆಲ್ ಆಗಮಿಸುತ್ತಿದೆ. ಇನ್ನು ಯಾರಿಗಾದರೂ ಗಿಫ್ಟ್ ಕೊಡಬೇಕೆಂದರೂ ಅಷ್ಟೇ. ಸರ್ಚ್ ಮಾಡಿ, ಬುಕ್ ಮಾಡಿದರೆ ಮುಗೀತು. ಆದರೆ ಹೀಗೆ ಬರವು ಪಾರ್ಸೆಲ್‌ಗಳಲ್ಲಿ ಹಲವು ಬಾರಿ ಮೋಸ ಹೋದ ಘಟನೆಗಳು ಇವೆ. ಆರ್ಡರ್ ಮಾಡಿದ್ದು ಬೇರೆ, ಬಂದದ್ದೇ ಬೇರೆ ಆದ ಉದಾಹರಣೆಗಳಿವೆ. ಆದರೆ ಇಲ್ಲೊಂದು ಮಹಿಳೆಗೆ ಮನೆ ನರ್ಮಾಣಕ್ಕೆ ಕೆಲ ಸಂಘಟನೆ ಸಹಾಯ ಮಾಡಿತ್ತು. ಮತ್ತಷ್ಟು ಸಹಾಯ ಮಾಡುವ ಭರವಸೆ ನೀಡಿತ್ತು. ಹೀಗಾಗಿ ಕೆಲ ವಸ್ತುಗಳ ನಿರೀಕ್ಷೆಯಲ್ಲಿದ್ದ ಮಹಿಳೆಗೆ ದೊಡ್ಡ ಬಾಕ್ಸ್ ಪಾರ್ಸೆಲ್ ಬಂದಿದೆ. ಗೃಹ ನಿರ್ಮಾಣದ ವಸ್ತುಗಳು ಎಂದು ತೆರೆದು ನೋಡಿದಾಗ ಅಚ್ಚರಿಯಾಗಿದೆ. ಒಂದು ಕ್ಷಣ ಏನು ಮಾಡಬೇಕು ಎಂದು ತೋಚಿಲ್ಲ. ಕಾರಣ ಈ ಬಾಕ್ಸ್ ಪಾರ್ಸೆಲ್ ಒಳಗಿದ್ದದ್ದು ವಸ್ತು ವಲ್ಲ, ವ್ಯಕ್ತಿಯ ಮೃತದೇಹ. 

ಈ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಯೆಂಡಗಂಧಿಯಲ್ಲಿ ನಡೆದಿದೆ. ನಾಗ ತುಳಸಿ ಅನ್ನೋ ಮಹಿಳೆಗೆ ಈ ಪಾರ್ಸೆಲ್ ಬಂದಿದೆ. ಗಾಬರಿಗೊಂಡ ತುಳಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪಾರ್ಸೆಲ್ ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೇ ವೇಳೆ ಪಾರ್ಸೆಲ್ ಬಾಕ್ಸ್ ಒಳಗೆ ಒಂದು ಪತ್ರವನ್ನು ಇಡಲಾಗಿತ್ತು.

ಗುಡ್ ನ್ಯೂಸ್, ವಂದೇ ಭಾರತ್ ತ್ವರಿತ ಪಾರ್ಸೆಲ್ ಸರ್ವೀಸ್ ಆರಂಭಿಸುತ್ತಿದೆ ಭಾರತೀಯ ರೈಲ್ವೇ!

ಈ ಪತ್ರದಲ್ಲಿ 1.30 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಒಂದು ವೇಳೆ ದುಡ್ಡು ಕೊಡದಿದ್ದರೆ, ಈ ಕೊಲೆ ನೀವೆ ಮಾಡಿರುವುದಾಗಿ ಸಾಕ್ಷಿ ನುಡಿಯುತ್ತೇವೆ. ಇದಕ್ಕೆ ಬೇಕಾದ ದಾಖಲೆಗಳು ನಮ್ಮ ಬಳಿ ಇವೆ. ಪೊಲೀಸರಿಗೆ ಮಾಹಿತಿ ನೀಡಿ ನಮ್ಮನ್ನು ಹಿಡಿಯುವ ಪ್ರಯತ್ನ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಲಿದೆ ಎಂದು ಎಚ್ಚರಿಸಲಾಗಿದೆ. ಸದ್ಯ ಪ್ರಕರಣ ದಾಖಳಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ನಾಗ ತುಳಸಿ ಅನ್ನೋ ಮಹಿಳೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಆರ್ಥಿಕವಾಗಿ ಸಶಕ್ತರಲ್ಲದ ಕಾರಣ ಕ್ಷತ್ರಿಯಾ ಸೇವಾ ಸಮಿತಿಗೆ ಮನವಿ ಮಾಡಿಕೊಂಡಿದ್ದಾರೆ. ಮಹಿಳೆಯ ಮನವಿ ಪುರಸ್ಕರಿಸಿದ ಕ್ಷತ್ರಿಯಾ ಸೇವಾ ಸಮಿತಿ ಹಂತ ಹಂತವಾಗಿ ಮನೆ ನಿರ್ಮಾಣಕ್ಕೆ ನೆರವು ನೀಡುವುದಾಗಿ ಹೇಳಿದೆ. ಇದರಂತೆ ಮೊದಲ ಹಂತದಲ್ಲಿ ಮನೆಗೆ ಬೇಕಾದ ಟೈಲ್ಸ್‌ಗಳನ್ನು ಪಾರ್ಸೆಲ್ ಕಳುಹಿಸಿದೆ. ಬಳಿಕ ಮನೆಯ ಎಲೆಕ್ಟ್ರಿಕ್ ವಸ್ತುಗಳನ್ನು ಕಳುಹಿಸುವುದಾಗಿ ಹೇಳಿದೆ. ಎಲೆಕ್ಟ್ರಿಕ್ ವಸ್ತುಗಳನ್ನು ನೀವು ಖರೀದಿಸುವುದು ಬೇಡ, ಇದನ್ನು ಸಮಿತಿ ಒದಗಿಸಲಿದೆ ಎಂದು ಭರವಸೆ ನೀಡಿತ್ತು.

ಈ ಭರವಸೆ ನೀಡಿದ ಕೆಲ ದಿನಗಳ ಬಳಿಕ ದೊಡ್ಡ ಪಾರ್ಸೆಲ್ ಬಾಕ್ಸ್ ಬಂದಿದೆ. ಕ್ಷತ್ರಿಯಾ ಸೇವಾ ಸಮಿತಿ ಈಗಾಗಲೇ ಎಲೆಕ್ಟ್ರಾನಿಕ್ ವಸ್ತುಗಳ ಕಳುಹಿಸುವುದಾಗಿ ಹೇಳಿರುವ ಕಾರಣ ಪಾರ್ಸೆಲ್ ಬಾಕ್ಸ್ ಕುರಿತು ತಲೆಕೆಡಿಸಿಕೊಳ್ಳಲು ನಾಗ ತುಳಸಿ ಹೋಗಿಲ್ಲ. ಮನಸ್ಸಿನಲ್ಲಿ ಕ್ಷತ್ರಿಯಾ ಸೇವಾ ಸಮಿತಿಗೆ ಧನ್ಯವಾದ ಹೇಳುತ್ತಾ ಬಾಕ್ಸ್ ತೆರೆದಾಗ ಆಘಾತಗೊಂಡಿದ್ದಾರೆ. 

ಪಾರ್ಸೆಲ್ ಸ್ಫೋಟಿಸಿ ಅಪ್ಪ ಮಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್‌: ಬಾಂಬ್ ಕಳಿಸಿದ್ದ ಪತ್ನಿಯ ಸ್ಯಾಡಿಸ್ಟ್ ಲವರ್‌

ಸುಮಾರು 45 ವರ್ಷ ವಯಸ್ಸಿನ ಮೃತದೇಹ ಇದು ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಸಿಸಿಟಿವಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇತ್ತ ಮೃತ ವ್ಯಕ್ತಿ ಯಾರು ಅನ್ನೋ ಕುರಿತು ಪರಿಶೀಲನೆ ನಡೆಯುತ್ತಿದೆ. ಸುತ್ತಮುತ್ತಲಿನ ಮಿಸ್ಸಿಂಗ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಕುರಿತು ತನಿಖೆ ನಡೆಯುತ್ತಿದೆ.