ಗುಡ್ ನ್ಯೂಸ್, ವಂದೇ ಭಾರತ್ ತ್ವರಿತ ಪಾರ್ಸೆಲ್ ಸರ್ವೀಸ್ ಆರಂಭಿಸುತ್ತಿದೆ ಭಾರತೀಯ ರೈಲ್ವೇ!
ಭಾರತೀಯರಿಗೆ ಪಾರ್ಸೆಲ್ ತ್ವರಿತವಾಗಿ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ತಲುಪಿಸಲು ಭಾರತೀಯ ರೈಲ್ವೇ ಹೊಸ ಸರ್ವೀಸ್ ಆರಂಭಿಸುತ್ತಿದೆ. ವಂದೇ ಭಾರತ್ ಮೂಲಕ ಹೊಸ ಪಾರ್ಸೆಲ್ ಸರ್ವೀಸ್ ಆರಂಭಗೊಳ್ಳುತ್ತಿದೆ.
ಭಾರತೀಯ ರೈಲ್ವೇಯಲ್ಲಿ ಈಗಾಗಲೇ ಗೂಡ್ಸ್ ಸರ್ವೀಸ್ ಲಭ್ಯವಿದೆ. ಯಾವುದೇ ರೀತಿಯ ಸರಕುಗಳನ್ನು ಸಾಗಿಸಲು ಭಾರತೀಯ ರೈಲ್ವೇ ಅನುವು ಮಾಡಿಕೊಟ್ಟಿದೆ. ಇದೀಗ ಭಾರತೀಯ ರೈಲ್ವೇ ಹೊಸ ಪಾರ್ಸೆಲ್ ಸರ್ವೀಸ್ ಆರಂಭಿಸುತ್ತಿದೆ. ಫಾಸ್ಟ್ ಪಾರ್ಸೆಲ್ ಸರ್ವೀಸ್ ಇದಾಗಿದೆ. ವಂದೇ ಭಾರತ್ ರೈಲಿನ ಮೂಲಕ ಈ ಹೊಸ ಸೇವೆ ಆರಂಭಗೊಳ್ಳುತ್ತಿದೆ. ಕಾರಣ ವಂದೇ ಭಾರತ್ ಅತೀ ವೇಗವಾಗಿ ಹಾಗೂ ಕಡಿಮೆ ಸಮಯದಲ್ಲಿ ಉದ್ದೇಶಿತ ಗುರಿತ ತಲುಪುವ ಕಾರಣ ಸುಲಭವಾಗಿ ಪಾರ್ಸೆಲ್ ತಲುಪಲಿದೆ.
ಹಾಗಂತ ದುಬಾರಿ ವೆಚ್ಚವಿಲ್ಲ, ಅತೀ ಕಡಿಮೆ ದರದಲ್ಲಿ ಫಾಸ್ಟ್ ಪಾರ್ಸೆಲ್ ಸರ್ವೀಸ್ ನೀಡಲು ಭಾರತೀಯ ರೈಲ್ವೇ ಇಲಾಖೆ ಮುಂದಾಗಿದೆ. ಮೊಬೈಲ್ ಫೋನ್ ಸೇರಿದಂತೆ ಮೌಲ್ಯಯುತ ವಸ್ತುಗಳು, ಹೂವು, ತರಕಾರಿ, ಹಣ್ಣು ಸೇರಿದಂತೆ ನಿಗದಿತ ಸಮಯದಲ್ಲಿ ಹಾಳಾಗುವ ವಸ್ತುಗಳನ್ನು ವಂದೇ ಭಾರತ್ ರೈಲಿನ ಮೂಲಕ ಪಾರ್ಸೆಲ್ ಮಾಡಬಹುದು. ಕಡಿಮೆ ಸಮಯದಲ್ಲಿ ಗುರಿ ತುಲುವ ಕಾರಣ ಸುಲಭವಾಗಿ ಪಾರ್ಸೆಲ್ ಕಳುಹಿಸಲು ಸಾಧ್ಯವಾಗಲಿದೆ.
ಬೆಂಗಳೂರಿನಿಂದ ಚೆನ್ನೈಗೆ ಯಾವುದೇ ಪಾರ್ಸೆಲ್ ಈ ವಂದೇ ಭಾರತ್ ಮೂಲಕ ಕಳುಹಿಸದರೆ 4 ಗಂಟೆಯಲ್ಲಿ ತಲುಪಲಿದೆ. ವಂದೇ ಭಾರತ್ ಗರಿಷ್ಠ ಪ್ರಯಾಣದ ರೈಲು ಕೂಡ 12 ರಿಂದ 14 ಗಂಟೆ ಒಳಗೆ ತಲಪುತ್ತಿದೆ. ಹೀಗಾಗಿ ಪಾರ್ಸೆಲ್ ಕಳುಹಿಸುವುದು ಹಾಗೂ ನಿಗದಿತ ಸಮಯದಲ್ಲಿ ಗುರಿ ತಸುಪಿಸುವುದು ರೈಲ್ವೇ ಇಲಾಖೆಗೆ ಸುಲಭವಾಗಿದೆ.
ಮೊದಲ ಹಂತದಲ್ಲಿ ಕೆಲ ವಂದೇ ಭಾರತ್ ರೈಲಿನಲ್ಲಿ ಈ ಫಾಸ್ಟ್ ಪಾರ್ಸೆಲ್ ಸರ್ವೀಸ್ ಆರಂಭಗೊಳ್ಳಲಿದೆ. ಸದ್ಯ ಭಾರತದಲ್ಲಿ 136 ವಂದೇ ಭಾರತ್ ರೈಲು ಸೇವೆ ನೀಡುತ್ತಿದೆ. ಈ ಪೈಕಿ ಕೆಲ ರೈಲುಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಬಳಿಕ ಹಂತ ಹಂತವಾಗಿ ವಿಸ್ತರಣೆಯಾಗಲಿದೆ. ಈ ಮೂಲಕ ಸಂಪೂರ್ಣವಾಗಿ ವ್ಯಾಪಿಸಲಿದೆ.
ಈಗಾಗಲೇ ನವದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೂ ವಂದೇ ಭಾರತ್ ರೈಲು ಸೇವೆ ನೀಡಲಾಗಿದೆ. ಹೀಗಾಗಿ ಕಾಶ್ಮೀರಿ ಆ್ಯಪಲ್ ಸೇರಿದಂತೆ ಇತರ ಉತ್ಪನ್ನಗಳು ಕೆಲವೇ ಗಂಟೆಗಳಲ್ಲಿ ಕಾಶ್ಮೀರದಿಂದ ನವದೆಹಲಿಗೆ ತಲುಪಲಿದೆ. ಈ ರೀತಿ ಹಲವು ಭಾಗಗಳಿಗೆ ಫಾಸ್ಟ್ ಪಾರ್ಸೆಲ್ ಸೇವೆ ಆರಂಭಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ವಂದೇ ಭಾರತ್ ರೈಲು ಶೀಘ್ರದಲ್ಲೇ ಸ್ಲೀಪರ್ ರೈಲು ಪರಿಚಯಿಸುತ್ತಿದೆ. ಹೊಸ ವರ್ಷದ ಆರಂಭದಲ್ಲೇ ಅಂದರೆ ಜನವರಿ ಕೊನೆಯ ವಾರದಲ್ಲಿ ಸ್ಲೀಪರ್ ರೈಲು ಉದ್ಘಾಟೆನೆಯಾಗಲಿದೆ. ಈಗಾಗಲೇ 10 ವಂದೇ ಭಾರತ್ ಸ್ಲೀಪರ್ ರೈಲು ನಿರ್ಮಾಣ ಹಂತದಲ್ಲಿದೆ. ಇನ್ನು 50 ಸ್ಲೀಪರ್ ವಂದೇ ಭಾರತ್ ರೈಲು ನಿರ್ಮಾಣಕ್ಕೆ ಆರ್ಡರ್ ನೀಡಲಾಗಿದೆ.