* ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ* ಮಸ್ಕಟ್ ನಿಂದ ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲಿ ಅನುಮಾನಾಸ್ಪದವಾಗಿ ಎರಡು ಬ್ಯಾಗ್ ಪತ್ತೆ* ರನ್ ವೇ ನಲ್ಲೆ ವಿಮಾನ ನಿಲ್ಲಿಸಿ ತಪಾಸಣೆ* ಏರ್ಪೋರ್ಟ್ ಭದ್ರತಾ ಸಿಬ್ಬಂದಿಯಿಂದ ತಪಾಸಣೆ
ಬೆಂಗಳೂರು(ಮಾ. 20) ಬೆಂಗಳೂರು (Kempegowda International Airport Bengaluru) ವಿಮಾನ ನಿಲ್ದಾಣದಲ್ಲಿ ಒಂದಷ್ಟು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಸ್ಕತ್ ನಿಂದ (Muscat) ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲಿ ಅನುಮಾನಾಸ್ಪದವಾಗಿ ಎರಡು ಬ್ಯಾಗ್ ಪತ್ತೆಯಾಗಿತ್ತು.
ರನ್ ವೇ ನಲ್ಲೆ ವಿಮಾನ ನಿಲ್ಲಿಸಿ ತಪಾಸಣೆ ನಡೆಸಲಾಯಿತು. ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಕೂಡಲೇ ತಪಾಸಣೆ ನಡೆಸಿದರು. ಮಹಿಳೆ (Woman) ಏರ್ ಕ್ರಾಫ್ಟ್ ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಬೋರ್ಡಿಂಗ್ ನಲ್ಲಿ ಸಮಯಕ್ಕೆ ಸರಿಯಾಗಿ ಬ್ಯಾಗ್ ಪಡೆದಿರಲಿಲ್ಲ.
ಕೆಲ ಸಮಯ ಅಧಿಕಾರಿಗಳು ಕಾದರೂ ಮಹಿಳೆ ಹಿಂದಕ್ಕೆ ಬಂದಿಲ್ಲ. ಅಪರಿಚಿತ ಬ್ಯಾಗ್ ಕಂಡು ಆತಂಕಗೊಂಡಿದ್ದ ಏರ್ಪೊರ್ಟ್ ಸಿಬ್ಬಂದಿ ತಕ್ಷಣ ಜಾಗೃತಗೊಂಡಿದ್ದಾರೆ. ಕೂಡಲೇ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ (Bomb) ನಿಷ್ಕ್ರಿಯ ದಳಕ್ಕೆ ವಿಷಯ ತಿಳಿಸಲಾಗಿದೆ. ಬ್ಯಾಗ್ ಪತ್ತೆಯಾದ ಸ್ಥಳದ ಸುತ್ತ ಐಸೋಲೇಟ್ ಮಾಡಿ ಬ್ಯಾಗ್ ಗಳ ಪರಿಶೀಲನೆ ನಡೆಸಲಾಯಿತು.
Russia-Ukraine War: ನವೀನ್ ಮೃತದೇಹವನ್ನು ಹುಟ್ಟೂರಿಗೆ ತನ್ನಿ: ಸ್ನೇಹಿತರ ಮನವಿ
ನಂತರ ಟಿಕೆಟ್ ನಂಬರ್ ನೋಡಿ ಮಹಿಳೆ ಪತ್ತೆಮಾಡಿದ ನಂತರ ಲಗೇಜ್ ಯಾರದ್ದೂ ಎಂಬುದು ಗೊತ್ತಾಗಿದೆ. ಆದರೆ ಒಂದಷ್ಟು ಕಾಲ ಆತಂಕಕ್ಕೆ ಈ ಘಟನೆ ಕಾರಣವಾಗಿತ್ತು.
ಬಾಂಬ್ ಇಟ್ಟವನಿಗೆ ಇಪ್ಪತ್ತು ವರ್ಷ ಶಿಕ್ಷೆ: ಮಂಗಳೂರು ಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆಸಾಮಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟವಾಗಿತ್ತು. 2020, ಜನವರಿ 20ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ದೋಷಿ ಎಂದಿರುವ ಸ್ಥಳೀಯ ನ್ಯಾಯಾಲಯ, ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಬಜ್ಪೆ ವಿಮಾನ ನಿಲ್ದಾಣದ ಬಾಂಬ್ ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ. ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಅಡಿಯಲ್ಲಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತಿಳಿಸಿತ್ತು.
ಇದಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ರ ಸೆಕ್ಷನ್ 16 ರ ಅಡಿಯಲ್ಲಿ, ರಾವ್ ಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ಅದನ್ನು ಪಾವತಿಸಲು ವಿಫಲವಾದರೆ ಮತ್ತೆ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವುದು ಕಡ್ಡಾಯ ಎಂದು ತಿಳಿಸಲಾಗಿತ್ತು.
ಉಡುಪಿ ಜಿಲ್ಲೆ ಮಣಿಪಾಲ ಮೂಲದ ಆದಿತ್ಯರಾವ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರನಾಗಿದ್ದು, 2018ರಲ್ಲಿ ಬೆಂಗಳೂರು ಏರ್‌ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಇದೇ ಆಕ್ರೋಶದಿಂದ ಬಾಂಬ್ ಇಟ್ಟಿದ್ದ. ಸುದೀರ್ಘ ವಿಚಾರಣೆ ನಡೆದಿತ್ತು.
