* ಬಿಹಾರದದಲ್ಲಿ ನಿರಂತರ ಸ್ಫೋಟ ಪ್ರಕರಣ* ಬಾಂಬ್ ಸ್ಪೋಟವನ್ನು ಪಟಾಕಿ ಸ್ಫೋಟ ಎಂದ ಸರ್ಕಾರ!* ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ* ವಿಶ್ವ ಹಿಂದು ಪರಿಷತ್ ಒತ್ತಾಯ
ನವದೆಹಲಿ(ಮಾ. 10) ಬಿಹಾರದಲ್ಲಿ (Bihar) ಇತ್ತೀಚೆಗೆ ವರದಿಯಾಗುತ್ತಿರವ ಬಾಂಬ್ ದಾಳಿ (Bomb Blast) ಆಂತರಿಕ ಭದ್ರತಯನ್ನೇ ಪ್ರಶ್ನೆ ಮಾಡುವಂತೆ ಇದೆ. ಆಂತರಿಕ ಭದ್ರತೆ ಸವಾಲು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕೊರತೆಯನ್ನು ಕಣ್ಣಿಗೆ ಕಾಣಿಸಿದೆ.
ಬಿಹಾರದ ಸರ್ಕಾರ ಮತ್ತು ಸಂಘಟನೆಗಳು ದುರ್ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿವೆ. ರಾಷ್ಟ್ರ ಪರ ಚಿಂತನೆಯ ಸಂಘಟನೆಗಳು ಲೋಪವನ್ನು ತೆರೆದಿರಿಸಿವೆ.
ವಿಶ್ವ ಹಿಂದೂ ಪರಿಷತ್ತಿನ (VHP) ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಾತನಾಡುತ್ತ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸ್ಫೋಟಕ ಪರಿಸ್ಥಿತಿಯನ್ನು ಕೊನೆಗೊಳಿಸುವುದ ಅವಶ್ಯಕವಾಗಿದೆ ಘಟನೆಗಳ ಬಗ್ಗೆ ವ್ಯಾಪಕ, ಬಹು ಆಯಾಮದಲ್ಲಿ NIA ತನಿಖೆ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಕಳೆದ 9 ತಿಂಗಳುಗಳಲ್ಲಿ, ಬಂಕಾ, ಅರಾರಿಯಾ, ಖಗರಿಯಾ, ಸಿವಾನ್, ದರ್ಭಾಂಗಾ, ಭಾಗಲ್ಪುರ್ ಮತ್ತು ಈಗ ಗೋಪಾಲ್‌ಗಂಜ್ ಸೇರಿದಂತೆ ಅರ್ಧ ಡಜನ್‌ಗಿಂತಲೂ ಹೆಚ್ಚು ಸ್ಥಳಗಳಲ್ಲಿ ಈ ಬಾಂಬ್ ಸ್ಫೋಟವಾಗಿದೆ. ದುರ್ಘಟನೆಯಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕಟ್ಟಡಗಳು ಧ್ವಂಸವಾಗಿವೆ. ಜಿಹಾದಿ ಭಯೋತ್ಪಾದನೆಯ ಭಯಾನಕ ವಾಸನೆ ಮತ್ತು ಬಾಂಗ್ಲಾದೇಶದ ಸಂಪರ್ಕಗಳು ಇದರ ಹಿಂದೆ ಇರುವುದು ಗೊತ್ತಾಗಿದೆ ಎಂದಿದ್ದಾರೆ.
ದಾರಿಯಲ್ಲಿ ಬಿದ್ದ ಹೆಣ ಕಚ್ಚಿ ತಿನ್ನುತ್ತಿವೆ ನಾಯಿಗಳು, 14 ದಿನಗಳ ಯುದ್ಧ, ಹೀಗಾಯ್ತು ಉಕ್ರೇನ್!
ಕಳೆದ ವರ್ಷಗಳಲ್ಲಿ ನಡೆದಿರುವ ಸ್ಫೋಟದ ತನಿಖೆ ಸರಿಯಾದ ರೀತಿ ಆಗಿಲ್ಲ. ಪೊಲೀಸ್ ಇಲಾಖೆ ಮಣ್ಣೆರೆಚುವ ಕೆಲಸ ಮಾಡಿಕೊಂಡು ಬಂದಿದೆ. ಭೀಕರ ಬಾಂಬ್ ಸ್ಫೋಟಗಳನ್ನು ಕೇವಲ 'ಪಟಾಕಿ ಸ್ಫೋಟ' ಎಂದು ಹೆಸರಿಸಿರುವುದು ಒಂದು ರೀತಿಯಲ್ಲಿ ನಾಚಿಕೆಗೇಡಿನ ಸಂಗತಿ. ಈ ಪ್ರಕರಣ ತನಿಖೆಗೆ ಅರ್ಹವೇ ಅಲ್ಲ ಎಂದಿರುವುದು ವಿಷಾದನೀಯ ಎಂದಿದ್ದಾರೆ.
ಬಿಹಾರದ ಹಲವು ಜಿಲ್ಲೆಗಳು ಈಗಾಗಲೇ ಮುಸ್ಲಿಂ ಪ್ರಾಬಲ್ಯಕ್ಕೆ ತಿರುಗಿವೆ ಮತ್ತು ನೆರೆಯ ಜಾರ್ಖಂಡ್‌ನ ಸಾಹಿಬ್‌ಗಂಜ್ ಮತ್ತು ಪಾಕುರ್ ಜಿಲ್ಲೆಗಳು ಒಳನುಸುಳುವಿಕೆ ಸಮಸ್ಯೆ ಅನುಭವಿಸುತ್ತಿವೆ. ವಿದೇಶಿ ನುಸುಳುಕೋರ ಬಾಂಗ್ಲಾದೇಶಿ ತಾಲಿಬ್ಸ್ (ವಿದ್ಯಾರ್ಥಿಗಳು) ಗಳಿಂದಲೂ ಸಮಸ್ಯೆ ಆಘುತ್ತಿದೆ. ಲವ್ ಜಿಹಾದಿಗಳು ನಿರಂತರವಾಗಿ ಹಿಂದೂ ಹುಡುಗಿಯರನ್ನು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಣ್ಣು ಮಕ್ಕಳನ್ನು ಬಲಿಪಶು ಮಾಡುತ್ತಿದ್ದಾರೆ. ಹತ್ತಾರು ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಅನೇಕ ಹಿಂದೂ ಹೆಣ್ಣುಮಕ್ಕಳು ಅಪಹರಣ ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ ಮತ್ತು ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಬಲವಂತವಾಗಿ ಒಯ್ಯಲ್ಪಟ್ಟಿದ್ದಾರೆ. ಪುರ್ನಿಯಾದ ಮನಿಷಾ ಸಿಂಗ್ ಅವರಂತಹ ಅನೇಕ ಸಂತ್ರಸ್ತ ಹೆಣ್ಣುಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಹಾಗಾಗಿ ಈ ಎಲ್ಲ ವಿಚಾರಗಳು, ಬಾಂಬ್ ಸ್ಫೋಟದ ಸಮಗ್ರ ತನಿಖೆ ಆಗಬೇಕು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂಕಕವೇ ತನಿಖೆ ನಡೆಯಬೇಕು ಅಲ್ಲದೇ ಸಂತ್ರಸ್ತರಿಗೆ ಪರಿಹಾರ ಸಲ್ಲಿಕೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ನೆರೆಯ ರಾಜ್ಯಗಳು ಬಾಂಗ್ಲಾ ದೇಶಿ ನುಸುಳುಕೋರರಿಂದ ತೀವ್ರ ಸಮಸ್ಯೆ ಎದುರಿಸುತ್ತಲೇ ಬಂದಿದ್ದವು. ಬೆಂಗಳೂರಿನಲ್ಲಿಯೂ ಬಾಂಗ್ಲಾ ವಲಸಿಗರೂ ತೊಂದರೆ ಕೊಟ್ಟಿದ್ದು ಡ್ರಗ್ಸ್ ಜಾಲ ಮತ್ತು ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದರು.
