ಭೋಪಾಲ್ (ಅ.23): ಕಾಳಿದೇವಿಗೆ ನರ ಬಲಿ ಕೊಡುತ್ತಿದ್ದ ಬಗ್ಗೆ ಪೌರಾಣಿಕ ಕತೆಗಳಲ್ಲಿ ಕೇಳಿರುತ್ತೀರಿ. 

ಆದರೆ, ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮೈಮೇಲೆ ದೇವತೆ ಬಂದಿದ್ದಾಳೆ ಎಂದು ಹೇಳಿಕೊಂಡು ಮಗನನ್ನೇ ಕೊಡಲಿಯಿಂದ ಕಡಿದು ಹತ್ಯೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. 

ಪೊಲೀಸರ ಹೆಸರಲ್ಲಿ ಆನ್‌ಲೈನ್‌ ವಂಚನೆ: ನಾಲ್ವರು ಕಳ್ಳರು ಅಂದರ್‌ ...

50 ವರ್ಷದ ಸುನಿಯಾಬಾಯ್‌ ಲೋಧಿ ಎಂಬಾಕೆ ಬುಧವಾರ ರಾತ್ರಿ ದೇವಿಯ ಅವತಾರ ತಾಳಿದ್ದು, ಮುಂಜಾನೆ 4.30ರ ಸಮಯದಲ್ಲಿ 24 ವರ್ಷದ ಮಗನನ್ನು ಬಲಿ ಪಡೆದಿದ್ದಾಳೆ.

ಬಳಿಕ ಮಲಗಿದ್ದ ಗಂಡನನ್ನು ಏಳಿಸಿ ತಾನು ದೇವಿಯ ಅವತಾರ ತಾಳಿದ್ದು, ಮಗನನ್ನು ನರ ಬಲಿ ಪಡೆದಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಘಟನೆ ಊರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.