ಮಹಿಳೆಯೊಬ್ಬರು ಬೆಡ್‌ರೂಮಿನ ಬಾಗಿಲು ತೆರೆದಾಗ ಹುಲಿಯೊಂದು ಕಾಣಿಸಿಕೊಂಡಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆ ಗಾಬರಿಗೊಂಡಿದ್ದಾಳೆ.
ಮಹಿಳೆಯೊಬ್ಬರು ತನ್ನ ಮನೆಯ ಒಳಗೆ ಹೊಗುವುದಕ್ಕೆ ಬಾಗಿಲನ್ನು ನಿಧಾನವಾಗಿ ತೆಗೆದು ಗಂಡನಿಗೆ ಸರ್ಪೈಸ್ ಕೊಡಲು ಮುಂದಾಗಿದ್ದಾಳೆ. ಆದರೆ, ಮನೆಯಲ್ಲಿ ಗಂಡನ ಬದಲು ಹುಲಿಯು ಇಣಿಕಿ ನೋಡಿದೆ. ಆಗ ತನ್ನ ಗಂಡನನ್ನು ಗಂಡ ತಿಂದು ಹಾಕಿದೆಯೇ ಎಂದು ಮಹಿಳೆ ಗಾಬರಿಗೊಂಡಿದ್ದಾಳೆ.
ವನ್ಯಜೀವಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಮಾನ್ಯವಾಗಿದೆ. 'ನೇಚರ್ ಈಸ್ ಅಮೇಜಿಂಗ್' ಅಕೌಂಟ್ ಇಂತಹ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತದೆ. ಈಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಒಬ್ಬ ಮಹಿಳೆ ಬಾಗಿಲು ತೆರೆದಾಗ ಹುಲಿಯೊಂದು ಅವಳನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ಕಾಣಬಹುದು.
ಮನೆಗೆ ಬಂದು ಬಾಗಿಲು ತೆಗೆದಾಗ ಹುಲಿ ನಿಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದರೆ ಏನಾಗುತ್ತೆ? ಈ ವಿಡಿಯೋದಲ್ಲಿ ಅದೇ ಆಗಿದೆ. ಮಹಿಳೆ ಬಾಗಿಲು ತೆರೆದಾಗ ಹುಲಿಯ ಕಣ್ಣುಗಳು ಕಾಣಿಸುತ್ತವೆ. ಬಾಗಿಲು ಸ್ವಲ್ಪ ತೆರೆದಾಗ ಹುಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮಹಿಳೆ ಬಾಗಿಲು ಮುಚ್ಚದೆ ಮತ್ತೆ ತೆರೆಯಲು ಪ್ರಯತ್ನಿಸಿದಾಗ ಹುಲಿ ಮುಂದೆ ಬರುತ್ತದೆ. ಆಗ ಮಹಿಳೆ ಬಾಗಿಲು ಹಾಕಿಕೊಳ್ಳುತ್ತಾಳೆ.
ಇದನ್ನೂ ಓದಿ: ಹೆಂಡ್ತಿಯ ಕಿತಾಪತಿಯಿಂದ ಬೇಸತ್ತು ನಿನ್ನೊಂದಿಗೆ ಮಲಗಲ್ಲ ಎಂದು ಎದ್ದು ಹೋದ ಗಂಡ
'ನೀವು ಬಾಗಿಲು ತೆಗೆದಾಗ ಹೀಗೆ ಕಂಡ್ರೆ ಏನ್ ಮಾಡ್ತೀರಿ?' ಎಂದು ವಿಡಿಯೋದ ಕ್ಯಾಪ್ಶನ್‌ನಲ್ಲಿ ಕೇಳಲಾಗಿದೆ. ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಭಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ಹುಲಿಯನ್ನು ಮಹಿಳೆಯ ಗಂಡನೇ ಮನೆಯಲ್ಲಿ ಬಿಟ್ಟಿರಬಹುದು ಎಂದು ಕೂಡ ಹೇಳಲಾಗುತ್ತಿದೆ.
