ರೈಲು ಬರುತ್ತಿದ್ದ ವೇಳೆ ರೈಲ್ವೆ ಟ್ರ್ಯಾಕ್ ದಾಟಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ಎಚ್ಚೆತ್ತ ರೈಲ್ವೆ ಸಿಬ್ಬಂದಿ ಪ್ಲಾಟ್‌ಫಾರ್ಮ್ ಮೇಲೆಳೆದುಕೊಂಡು ಬಚಾವ್‌ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಒಮ್ಮೊಮ್ಮೆ ಜನರ ಅದೃಷ್ಟ ಚೆನ್ನಾಗಿರುತ್ತದೆ. ತಮ್ಮ ಜೀವವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದವರನ್ನು ಇನ್ಯಾರೋ ಬಚಾವ್‌ ಮಾಡಿ ಅವರ ಜೀವವನ್ನೇ ಉಳಿಸಿಬಿಡುತ್ತಾರೆ. ಇದೇ ರೀತಿ, ಉತ್ತರ ಪ್ರದೇಶದ ರೈಲ್ವೆ ಸ್ಟೇಷನ್‌ವೊಂದರಲ್ಲಿ ಟ್ರೈನು ಬರುತ್ತಿರುವಾಗ, ಅದನ್ನು ಗಮನಿಸದೆ ರೈಲ್ವೆ ಟ್ರ್ಯಾಕ್‌ ದಾಟುತ್ತಿದ್ದ ಮಹಿಳೆಯನ್ನು ರೈಲ್ವೆ ಸಿಬ್ಬಂದಿ ತಕ್ಷಣ ಬಚಾವ್ ಮಾಡಿದ್ದಾರೆ. ನಂತರ, ಒಂದೆರಡು ಕ್ಷಣದಲ್ಲೇ ರೈಲು, ಆ ರೈಲ್ವೆ ಟ್ರ್ಯಾಕ್‌ ಅನ್ನು ಹಾದು ಹೋಗಿದ್ದು, ಒಂದು ವೇಳೆ ಮಹಿಳೆ ಆ ಸಮಯದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್‌ ಹತ್ತದೆ, ರೈಲ್ವೆ ಹಳಿಯಲ್ಲೇ ಇದ್ದರೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್‌, ರೈಲ್ವೆ ಸಿಬ್ಬಂದಿ ಅವರನ್ನು ಬಚಾವ್ ಮಾಡಿದ್ದು, ಈ ಹಿನ್ನೆಲೆ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. 

ಉತ್ತರ ಪ್ರದೇಶದ ಶಿಖೋಹಾಬಾದ್‌ ಸ್ಟೇಷನ್‌ನಲ್ಲಿ ರೈಲ್ವೆ ಟ್ರ್ಯಾಕ್‌ ದಾಟಲು ಹೋಗುತ್ತಿದ್ದ ಮಹಿಳೆಯನ್ನು ಎಚ್ಚೆತ್ತ ರೈಲ್ವೆ ಸಿಬ್ಬಂದಿಯೊಬ್ಬರು ಬಚಾವ್ ಮಾಡಿದ್ದಾರೆ. ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಈ ಘಟನೆಯ ವಿಡಿಯೋ ಸೆರೆಯಾಗಿದ್ದು ಇದನ್ನು ಹಲವು ನೆಟ್ಟಿಗರು ಟ್ವಿಟ್ಟರ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ಆ ಮಹಿಳೆ ರೈಲ್ವೆ ಹಳಿಯನ್ನು ಬಳಸುತ್ತಿದ್ದಾರೆ ಎಂದು ಆ ವಿಡಿಯೋದ ವಿವರ ಹೇಳಿದ್ದಾರೆ. ಇನ್ನು, ಈ ವಿಡಿಯೋವನ್ನು ನೀವು ನೋಡಿದರೂ ಸಹ ನಿಮಗೆ ಒಂದು ಕ್ಷಣ ಗಾಬರಿಯಾಗಬಹುದು, ಇಂತಹ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

Viral Video: ದೇಹ ಉಜ್ಜಿಕೊಳ್ಳಲು ಕಾರನ್ನೇ ಹಾಳುಮಾಡಿದ ಆನೆ..! ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..

Scroll to load tweet…

ಈ ವಿಡಿಯೋ ಫೂಟೇಜ್‌ ಪ್ರಕಾರ, ಹಳದಿ ಬಣ್ಣದ ಸಲ್ವಾರ್‌ ಕಮೀಜ್‌ ಧರಿಸಿರುವ ಮಹಿಳೆ ರೈಲ್ವೆ ಟ್ರ್ಯಾಕ್‌ನಿಂದ ಪ್ಲಾಟ್‌ಫಾರ್ಮ್‌ವೊಂದನ್ನು ಹತ್ತಲು ಪ್ರಯತ್ನಿಸುತ್ತಾರೆ. ಅದೇ ವೇಳೆ, ರೈಲು ಸ್ಟೇಷನ್‌ಗೆ ಅದೇ ರೈಲು ಹಳಿಯ ಮೇಲೆ ಬರುತ್ತಿರುತ್ತದೆ. ಈ ವೇಳೆ, ಪ್ಲಾಟ್‌ಫಾರ್ಮ್‌ ಹತ್ತಲು ಕಷ್ಟಪಡುತ್ತಿದ್ದ ಮಹಿಳೆಯನ್ನು ನೋಡಿದ ರೈಲ್ವೆ ಸಿಬ್ಬಂದಿ ಓಇಡ ಬಂದು ಮಹಿಳೆಯನ್ನು ಪ್ಲಾಟ್‌ಫಾರ್ಮ್‌ ಮೇಲೆಳೆದುಕೊಂಡಿದ್ದಾರೆ. ನಂತರ ಒಂದೆರಡು ಕ್ಷಣದಲ್ಲೇ ವೇಗವಾಗಿ ಬರುತ್ತಿದ್ದ ರೈಲು ಅಲ್ಲಿಗೆ ಬರುತ್ತದೆ. ಆ ಸಿಬ್ಬಂದಿಯನ್ನು ರಾಮ್‌ ಸ್ವರೂಪ್‌ ಮೀನಾ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಳ್ಳಲಾಗಿದೆ. 

ಆದರೆ, ಆ ಮಹಿಳೆ ಮ್ತತೆ ಹಾದುಹೋಗುತ್ತಿದ್ದ ರೈಲಿನ ಬಳಿ ತನ್ನ ಬಾಟಲ್‌ ಎತ್ತಿಕೊಳ್ಳಲು ಹೋಗುತ್ತಾರೆ ಎಂದು ರೈಲು ಸಿಬ್ಬಂದಿಗಳು ಮಾತನಾಡುತ್ತಿರುವ ಧ್ವನಿ ಆ ವಿಡಿಯೋದಲ್ಲಿ ಕೇಳಿಸುತ್ತದೆ. ಅದೃಷ್ಟವಶಾತ್‌, ಮಹಿಳೆಗೆ ಸಣ್ಣ ಪುಟ್ಟ ಗಾಯ ಸಹ ಆಗಿಲ್ಲ. ಈ ವಿಡಿಯೋ ನೋಡಿದ ಅನೇಕ ಟ್ವಿಟ್ಟರ್‌ ಬಳಕೆದಾರರು ಆಘಾತಕ್ಕೊಳಗಾಗಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, "ಬಾಟಲ್‌ನ ಬೆಲೆ ಮಾನವನ ಜೀವನಕ್ಕಿಂತ ಹೆಚ್ಚಿಲ್ಲ" ಎಂದೂ ಕೆಲ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಹಾಗೂ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಅವರನ್ನು ಬಿಡಬಾರದು ಎಂದೂ ಒಬ್ಬರು ಕಮೆಂಟ್‌ ಮೂಲಕ ಹೇಳಿದ್ದಾರೆ. ಇನ್ನು ಹಲವರು ಮಾತಿಲ್ಲದ ಎಮೋಜಿಯನ್ನು ಶೇರ್‌ ಮಾಡಿಕೊಂಡಿದ್ದಾರೆ. 

Viral Video: ಮಹಿಳೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಹಾವು: ಹೊರತೆಗೆಯೋಕೆ ವೈದ್ಯರ ಪ್ರಯತ್ನ ಹೇಗಿದೆ ನೋಡಿ..!

View post on Instagram

ಇದೇ ರೀತಿ, ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಎಥಾವಾ ಜಿಲ್ಲೆಯ ಭಾರ್ತಾನಾ ರೈಲ್ವೆ ಸ್ಟೇಷನ್‌ನಲ್ಲಿ ಪ್ರಯಾಣಿಕರೊಬ್ಬರು ಅದೃಷ್ಟವಶಾತ್‌ ಅಪಘಾತದಿಂದ ಪಾರಾಗಿದ್ದರು. ರೈಲು ಹಾದುಹೋಗುವಾಗ ಅವರು ರೈಲು ಪ್ಲಾಟ್‌ಫಾರ್ಮ್‌ ಹಾಗೂ ರೈಲ್ವೆ ಹಳಿಗಳ ನಡುವಿನ ಜಾಗದಲ್ಲಿ ಬಿದ್ದಿದ್ದಾರೆ. ಅವರಿಗೆ ಯಾವುದೇ ಪೆಟ್ಟಾಗಿಲ್ಲ. ವೇಗದಲ್ಲಿದ್ದ ರೈಲನ್ನು ಹತ್ತಲು ಹೋಗಿ ಅವರು ಟ್ರ್ಯಾಕ್‌ ಮೇಲೆ ಬಿದ್ದಿದ್ದಾರೆ. ನಂತರ, ಅವರು ತನ್ನನ್ನು ತಾನು ಬಚಾವ್ ಮಾಡಿಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು ಹಾಗು ಹಲವರು, ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿದ್ದರು.