ನಾಗಪುರ (ಜು.  17)  ಈಕೆ ಅಂತಿಂಥ ಲೇಡಿ ಪೊಲೀಸ್ ಅಲ್ಲ. ಕೊರೋನಾ ಕಾಲದಲ್ಲಿಯೂ ಪ್ರಿಯತಮನ ಬಿಟ್ಟು ಇರಲು ಮನಸು ಮಾಡಿಲ್ಲ. ಅದಕ್ಕಾಗಿ ಸುಳ್ಳೊಂದನ್ನು ಹೇಳಿ ಸಿಕ್ಕಿಬಿದ್ದಿದ್ದಾರೆ. 

ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಿವಾಹಿತ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರುಷನೊಂದಿಗೆ ಕೌರಂಟೈನ್‌ ಆಗಿದ್ದಾರೆ.  ಇದಕ್ಕಾಗಿ ವ್ಯಕ್ತಿಯನ್ನು ತನ್ನ ಪತಿ ಎಂದು ಹೇಳಿಕೊಂಡಿದ್ದಾರೆ.

ಮಹಿಳಾ ಕಾನ್‌ಸ್ಟೇಬಲ್‌ನ ಜತೆ ಕೆಲಸ ಮಾಡುವರೊಬ್ಬರಿಗೆ  ಕೊರೊನಾ ಸೋಂಕು ತಗುಲಿತ್ತು. ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಮಹಿಳಾ ಕಾನ್‌ಸ್ಟೇಬಲ್‌ ಅನ್ನು ಕ್ವಾರಂಟೈನ್‌ ಮಾಡಬೇಕಾಗಿತ್ತು.

ಬೆಂಗಳೂರಿನಲ್ಲಿ ಏನ್ ಆಗಬೇಕು? ಉಸ್ತುವಾರಿಗಳಿಗೆ ಸಿಎಂ ಖಡಕ್ ಸೂಚನೆ

ಈ ವೇಳೆ ಮಹಿಳಾ ಕಾನ್‌ಸ್ಟೇಬಲ್‌ ನನ್ನ ಜತೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ನನ್ನ ಗಂಡನನ್ನು ಕ್ವಾರಂಟೈನ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಅವರಿಬ್ಬರನ್ನೂ ಕ್ವಾರಂಟೈನ್‌ ಮಾಡಲಾಗಿತ್ತು.

ಮಹಿಳಾ ಕಾನ್‌ಸ್ಟೇಬಲ್‌ ಜತೆ ಕ್ವಾರಂಟೈನ್ ಆಗಿದ್ದ ವ್ಯಕ್ತಿ ತನ್ನ ಅಸಲಿ ಮನೆಗೆ ಹೋಗಿಲ್ಲ. ಮೂರು ದಿನವಾದರೂ ಗಂಡ ಬಾರದಿದ್ದನ್ನು ನೋಡಿ ಪತ್ನಿ ಆತಂಕಕ್ಕೆ ಒಳಗಾಗಿದ್ದಾರೆ.  ವಿಷಯ ತಿಳಿದು ಕ್ವಾರಂಟೈನ್ ಕೇಂದ್ರದ ಬಳಿ ಬಂದಿದ್ದಾರೆ. ಆದರೆ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಕೊನೆಗೆ ಪತಿ ವಿರುದ್ಧ ಬಜಾಜ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳಾ ಕಾನ್‌ಸ್ಟೇಬಲ್‌ ಮತ್ತು ಕ್ವಾರಂಟೈನ್ ಆಗಿದ್ದ ಅಂಚೆ ಇಲಾಖೆ ನೌಕರ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಕಳೆದ ವರ್ಷ ಭೇಟಿಯಾಗಿದ್ದರು. ಅಲ್ಲಿಯೇ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.  ಡಿಸಿಪಿ ವಿವೇಕ್ ಮಶಾಲ್ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಈಗ ಅಂಚೆ ಇಲಾಖೆ ನೌಕರನನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.