ಮಳ್ಳಿ ಮಳ್ಳಿ.. ನಿದ್ದೆ ಮಾಡೋ ಹಾಗೆ ನಟಿಸಿ ಬಾಯಲ್ಲೇ ಚಿನ್ನದ ಸರ ಕದ್ದ ಕಳ್ಳಿ

ಈಕೆ ಎಂಥಾ ಖತರ್ನಾಕ್ ಕಳ್ಳಿ ನೋಡಿ... ಬಸ್‌ನಲ್ಲಿ ನಿದ್ದೆ ಮಾಡ್ತಿದ್ದ ಹಾಗೆ ಮತ್ತೊಬ್ಬರ ಸೀಟಿಗೆ ವಾಲಿಕೊಂಡು ಬಾಯಲ್ಲೇ ಕಚ್ಚಿ ಕಚ್ಚಿ ಗೋಲ್ಡ್ ಚೈನ್ ಕತ್ತರಿಸಿ ತೆಗೆದುಕೊಂಡಿದ್ದಾಳೆ. 
 

Woman chews off gold chain on bus caught skr

ಚಿನ್ನ ಕದಿಯೋದ್ರಲ್ಲಿ ಬಹಳ ಟ್ಯಾಲೆಂಟೆಡ್ ಈಕೆ. ಆದ್ರೂ ಈ ಬಾರಿ ಅದೃಷ್ಟ ಅವಳ ಬಳಿ ಇರಲಿಲ್ಲ.

ಮಾರ್ಚ್ 21 ರಂದು ಬೆಳಿಗ್ಗೆ ಚೆನ್ನೈನ ಚೆಂಗಲ್‌ಪೇಟ್ ಜಿಲ್ಲೆಯ ಸೆನ್ನೇರಿಕುಪ್ಪಂನಲ್ಲಿ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಚೆನ್ನೈ) ಲಿಮಿಟೆಡ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದೃಷ್ಟಿಹೀನ ವೃದ್ಧೆಯೊಬ್ಬರ ಸರ ಕದ್ದು ಸಿಕ್ಕಿಬಿದ್ದಿದ್ದಾಳೆ ಈಕೆ.

ಸರಗುಣಂ ಎಂಬ 68 ವರ್ಷದ ದೃಷ್ಟಿ ಸರಿ ಇರದ ವೃದ್ಧೆಯ ಚಿನ್ನದ ಸರವನ್ನು ಮಹಿಳೆ ಅಗಿದು ಪರಾರಿಯಾಗಿದ್ದಾಳೆ. ಕತ್ತಿನ ಆಭರಣ ಕಿತ್ತಂತಾಗಿ ವೃದ್ಧೆ ಕಿರುಚಾಡಲಾರಂಭಿಸುತ್ತಿದ್ದಂತೆಯೇ ಬಸ್ಸಿನಲ್ಲಿದ್ದ ಪ್ರಯಾಣಿಕರು  ವೃದ್ಧೆ ಮತ್ತು ಕಳ್ಳಿಯ ಸುತ್ತ ನೆರೆದಿದ್ದಾರೆ. 


 

ಪ್ರಯಾಣಿಕರು 28ರ ಹರೆಯದ ಆರೋಪಿ ಚೈನ್‌ ಎಳೆಯಲು ಯತ್ನಿಸಿದ್ದನ್ನು ಕಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಸ್‌ನಲ್ಲಿದ್ದ ಪ್ರಯಾಣಿಕರು ಆರೋಪಿಯನ್ನು ಥಳಿಸಿ ನಂತರ ಚೆಂಗಲ್‌ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ತನಿಖೆಯ ವೇಳೆ ಮಹಿಳೆಯನ್ನು ಪುಣೆ ಮೂಲದ ಎಂ ನಿಶಾ ಎಂದು ಗುರುತಿಸಲಾಗಿದೆ. ದಾಖಲಾತಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಮಹಿಳೆ ನಿತ್ಯ ಅಪರಾಧಿಯಾಗಿದ್ದು, ಈ ಹಿಂದೆಯೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಗಂಡಸರು 'ಆ' ನೇರಕ್ಕೆ ಯೋಜಿಸುತ್ತಾರೆ; ಬೀಪ್ ಬೀಪ್‌ ಪದ ಬಳಸಿದ ಉರ್ಫಿ ಜಾವೇದ್

ನಿಶಾ ನಿದ್ರೆಯ ನೆಪದಲ್ಲಿ ತನ್ನ ಸೀಟಿನ ಮೇಲೆ ಒರಗಿಕೊಂಡು ತನ್ನ ಹಲ್ಲುಗಳನ್ನು ಬಳಸಿ ಚಿನ್ನದ ಸರವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

Latest Videos
Follow Us:
Download App:
  • android
  • ios