Asianet Suvarna News Asianet Suvarna News

ತಿರುಗಾಡ್ಬೇಕು 50 ಸಾವಿರ ಕೊಡಿ, ಹಣ ಕೊಡಲ್ಲ ಎಂದ ಯೋಧನಿಗೆ ಥಳಿಸಿದ ಪತ್ನಿ!

* ರಾಜಸ್ಥಾನದಲ್ಲಿ ಪತಿ ಮೇಲೆ ಪತ್ನಿ ಹಲ್ಲೆ

* ಹಣ ಕೊಡಲು ನಿರಾಕರಿಸಿದ ಪತಿಗೆ ಥಳಿಸಿದ ಪತ್ನಿ

* ಏಳೆಂಟು ತಾಸು ಪತಿ ಮೇಲೆ ಹಲ್ಲೆ

Woman assaults husband forcing to give money in Barmer pod
Author
Bangalore, First Published Mar 16, 2022, 3:59 PM IST | Last Updated Mar 16, 2022, 3:59 PM IST

ಜೈಪುರ(ಮಾ.16): ಬಾರ್ಮರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಸಹೋದರರೊಂದಿಗೆ ಸೇರಿ ಸೇನೆಯಲ್ಲಿ ಸೇಏವೆ ಸಲ್ಲಿಸುತ್ತಿರುವ ಪತಿಯನ್ನು ಥಳಿಸಿದ್ದಾಳೆ. ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದು, ದೇಹದ ಮೇಲೆಲ್ಲಾ ನೀಲಿ ಬಣ್ಣದ ಬರೆಗಳಿವೆ. ಈ ಸಂಬಂಧ ಸಂತ್ರಸ್ತ ಪತಿ ತನ್ನ ಪತ್ನಿ ಹಾಗೂ ಸೋದರ ಮಾವ ಸೇರಿದಂತೆ ಆರು ಜನರ ವಿರುದ್ಧ ಬಾರ್ಮರ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆಯಲ್ಲಿ ತೊಡಗಿದ್ದಾರೆ. ದೆಹಲಿಗೆ ಭೇಟಿ ನೀಡಲು ಪತ್ನಿ ತನ್ನ ಪತಿ ಬಳಿ 50,000 ರೂಪಾಯಿ ಕೇಳಿದ್ದಳು ಎಂದು ಹೇಳಲಾಗುತ್ತಿದೆ. ಪತಿ ಆ ಹಣ ನೀಡದಿದ್ದಾಗ ಪತ್ನಿ ತನ್ನ ಸಹೋದರರನ್ನು ಕರೆಸಿ ಅಮಾನುಷವಾಗಿ ಥಳಿಸಿದ್ದಾರೆ. ಸಂತ್ರಸ್ತ ಪತಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಮಾಹಿತಿಯ ಪ್ರಕಾರ, ಸಂತ್ರಸ್ತೆಯ ಪತಿ ಚುನಾರಾಮ್ ಜಾಟ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ್ ವಿದ್ಯಾ ಮಂದಿರದ ಬಳಿಯ ಶಿವಕರ್ ರಸ್ತೆಯ ನಿವಾಸಿ. ಇತ್ತೀಚೆಗೆ ಚುನಾರಾಮ್ ಜಾಟ್ ಅವರ ಪತ್ನಿ ದೆಹಲಿಗೆ ಭೇಟಿ ನೀಡಲು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಚುನಾರಾಮ್ ಹಣ ಇಲ್ಲ ಎಂದಿದ್ದಾನೆ. ಇದು ಅವನ ಹೆಂಡತಿಗೆ ಕೋಪ ಬರುವಂತೆ ಮಾಡಿದೆ. ಈ ವೇಳೆ ಪತ್ನಿ ತನ್ನ ಸಹೋದರರನ್ನು ಕರೆಸಿ ಪತಿಗೆ ಅಮಾನುಷವಾಗಿ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾಳೆ.

7-8 ಗಂಟೆಗಳ ಕಾಲ ಕ್ರೂರವಾಗಿ ಥಳಿತ

ಚುನಾರಾಮ್ ತನ್ನ ಪತ್ನಿ ಮತ್ತು ಸೋದರ ಮಾವ ಮತ್ತು ಅತ್ತೆಯ ಕಡೆಯ 4 ಜನರ ವಿರುದ್ಧ ಸದರ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಜವಾನನ ಪ್ರಕಾರ, ಅವನ ಹೆಂಡತಿ, ಸೋದರ ಮಾವ ಮತ್ತು ಅತ್ತೆಯ ಕಡೆಯ ಇತರ ಜನರು ಒಟ್ಟಾಗಿ ಕಬ್ಬಿಣದ ಸರಳುಗಳು ಮತ್ತು ಬೆಲ್ಟ್‌ಗಳಿಂದ ಅವನನ್ನು ನಿರ್ದಯವಾಗಿ ಹೊಡೆದ್ದಾರೆ. ಸುಮಾರು 7-8 ಗಂಟೆಗಳ ಕಾಲ ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ಚುನಾರಾಮ್ ಆರೋಪಿಸಿದ್ದಾರೆ. ಚುನಾರಾಮ್ ಪ್ರಸ್ತುತ ಲೇಹ್-ಲಡಾಖ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದ ಪೊಲೀಸ್ ವರಿಷ್ಠಾಧಿಕಾರಿ 

ಜವಾನನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಬಗ್ಗೆ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭಾರ್ಗವ ತಿಳಿಸಿದ್ದಾರೆ. ಸಂತ್ರಸ್ತ ಜವಾನನ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಸದರ್ ಠಾಣೆ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

Latest Videos
Follow Us:
Download App:
  • android
  • ios