ಕೈಜೋಡಿಸಿ ಕ್ಷಮೆ ಕೇಳುವವರೆಗೆ ಜಾವೇದ್ ಅಕ್ತರ್ ಸಿನಿಮಾ ಬ್ಯಾನ್; ಗುಡುಗಿದ ಬಿಜೆಪಿ ನಾಯಕ!
- ಆರ್‌ಎಸ್ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿದ್ದ ಸಿನಿಮಾ ಸಾಹಿತಿ ಜಾವೇದ್ ಅಕ್ತರ್
- ಆಫ್ಘಾನಿಸ್ತಾನದಲ್ಲಿ ತಾಲಿಬಾನ್, ಭಾರತದಲ್ಲಿ RSS,ವಿಶ್ವ ಹಿಂದೂ ಪರಿಷತ್ ಹೇಳಿಕೆ
- ಜಾವೇದ್ ಹೇಳಿಕೆಗೆ ಭಾರಿ ವಿರೋಧ, ಕೈಜೋಡಿಸಿ ಕ್ಷಮೆ ಕೇಳುವಂತೆ ಆಗ್ರಹ
ಮುಂಬೈ(ಸೆ.05): ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ ಬೆನ್ನಲ್ಲೇ ದೇಶದಲ್ಲಿನ ಹಲವರು ಉಗ್ರರ ಪರ ಬ್ಯಾಟ್ ಬೀಸಿ ಭಾರಿ ವಿರೋಧಕ್ಕೆ ಕಾರವಾಗಿದ್ದಾರೆ. ಇದರ ಜೊತೆ ಕೆಲವರು ಆರ್‌ಎಸ್ಎಸ್, ವಿಶ್ವಹಿಂದೂ ಪರಿಷತ್, ಬಜರಂಗದಳ ಸಂಘಟನೆಯನ್ನು ತಾಲಿಬಾನ್‌ಗೆ ಹೋಲಿಸಿ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಬಾಲಿವುಡ್ ಸಾಹಿತಿ ಜಾವೇದ್ ಅಕ್ತರ್ ಇದೇ ರೀತಿ ಹೇಳಿಕೆ ನೀಡಿ ಹಲವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಜಾವೇದ್ ಅಕ್ತರ್ ಕ್ಷಮೆ ಕೇಳುವರೆಗೆ ಬಿಡುವುದಿಲ್ಲ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದೆ.
ಪುಲ್ವಾಮಾ ದಾಳಿ: ಪಾಕ್ ಭೇಟಿ ರದ್ದುಗೊಳಿಸಿದ ಜಾವೆದ್ ಅಖ್ತರ್ ದಂಪತಿ
ಜಾವೇದ್ ಅಕ್ತರ್ ಎರಡೂ ಕೈಜೋಡಿ ಕ್ಷಮೆ ಕೇಳಬೇಕು. ಕ್ಷಮೆ ಕೇಳುವವರೆಗೆ ಅಕ್ತರ್ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಶಾಸಕ ರಾಮ ಕದಮ್ ಗುಡುಗಿದ್ದಾರೆ. ಈ ಕುರಿತು ವಿಡಿಯೋ ಸಂದೇಶ ಪೋಸ್ಟ್ ಮಾಡಿರುವ ಕದಮ್, ಅಕ್ತರ್ ಕ್ಷಮೆ ಕೇಳಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.
ಜಾವೇದ್ ಅಕ್ತರ್ ಹೇಳಿಕೆ ದೇಶಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿರುವ ಆರ್‌ಎಸ್ಎಸ್ ಕಾರ್ಯಕರ್ತರನ್ನು ಅವಮಾನಿಸಿದೆ. ವಿಶ್ವ ಹಿಂದೂ ಕಾರ್ಯಕರ್ತರು, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳ ಕುರಿತು ಹೇಳಿಕೆ ನೀಡುವ ಮೊದಲು ಸಂಘಟನಗಳ ಸೇವೆಯನ್ನು ಪರಿಶೀಲಿಸಬೇಕಿತ್ತು ಎಂದಿದ್ದಾರೆ.
ಪಿಎಂ ಮೋದಿ ಚಿತ್ರಕ್ಕೆ ಗೀತ ರಚಿಸಿಲ್ಲ: ಪೋಸ್ಟರ್ ನೋಡಿ ಜಾವೇದ್ 'ಶಾಕ್'
ಭಾರತದಲ್ಲಿ ಆರ್‌ಎಸ್ಎಸ್ ಸಿದ್ಧಾಂತದ ಮೇಲೆ ಜನರಿಂದ ಆರಿಸಲ್ಪಟ್ಟ ಸರ್ಕಾರವಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಹೇಗಿದೆ? ಭಾರತದಲ್ಲಿ ಆಡಳಿತ ಹೇಗಿದೆ? ಸಣ್ಣ ಪರಿಶೀಲನೆ ಮಾಡಿದರೆ ಈ ಹೇಳಿಕೆ ಹೊರಬರುತ್ತಿರಲಿಲ್ಲ. ಹಿಂದೂ ಹಾಗೂ ಹಿಂದೂ ಸಂಘಟನೆಗಳನ್ನು ದೂಷಿಸಲೇಬೇಕು ಎಂದು ಹೊರಟಿರುವ ಜಾವೇದ್ ಅಕ್ತರ್ ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ ಎಂದು ಕದಮ್ ಹೇಳಿದ್ದಾರೆ.
ಜಾವೇದ್ ಅಕ್ತರ್ ಹೇಳಿಕೆ ವಿರುದ್ಧ ಮಹಾರಾಷ್ಟ್ರ ಬಿಜೆಪಿಯ ವಕೀಲ ಆಶುತೋಶ್ ದುಬೆ ದೂರು ದಾಖಲಿಸಿದ್ದಾರೆ. ಜಾವೇದ್ ಅಕ್ತರ್ ಹೇಳಿಕೆಗೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.