Asianet Suvarna News Asianet Suvarna News

ಚೀನಾದ ಮೇಲೆ ಹದ್ದಿನ ಕಣ್ಣು, ಫಿಲಿಪ್ಪಿನ್ಸ್‌ಗೆ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿ ರವಾನಿಸಿದ ಭಾರತ!

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಮಿಲಿಟರಿ ಸ್ಥಾಪನೆ ಬಗ್ಗೆ  ಜಾಗತಿಕ ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ಫಿಲಿಪೈನ್ಸ್‌ನೊಂದಿಗೆ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಎದುರು ನೋಡುತ್ತಿದೆ.

With Eye On China India Sends First batch of BrahMos missiles to Philippines san
Author
First Published Apr 19, 2024, 6:19 PM IST

ನವದೆಹಲಿ (ಏ.19): ಚೀನಾದ ಮೇಲೆ ಹದ್ದಿನ ಕಣ್ಣಿಡುವ ನಿಟ್ಟಿನಲ್ಲಿ ಭಾರತವು ಏಪ್ರಿಲ್‌ 19 ರಂದು ಮೊದಲ ಬ್ಯಾಚ್‌ನ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳನ್ನು ಫಿಲಿಪ್ಪಿನ್ಸ್‌ ದೇಶಕ್ಕೆ ಕಳುಹಿಸಿಕೊಟ್ಟಿದೆ. ಎರಡೂ ದೇಶಗಳು 2022 ರಲ್ಲಿ $375 ಮಿಲಿಯನ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನವು ಇಂದು ಬೆಳಿಗ್ಗೆ ಫಿಲಿಪ್ಪೀನ್ಸ್‌ನ ಕ್ಲಾರ್ಕ್ ಏರ್‌ಬೇಸ್‌ನಲ್ಲಿ ಮೇಡ್-ಇನ್-ಇಂಡಿಯಾ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಅನ್ನು ಅಲ್ಲಿನ ಸರ್ಕಾರಕ್ಕೆ ಹಸ್ತಾಂತರ ಮಾಡಿತು. ಜನವರಿ 2022 ರಲ್ಲಿ, ಕ್ಷಿಪಣಿಯ ಮೂರು ಬ್ಯಾಟರಿಗಳ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಗಳನ್ನು ಪೂರೈಸಲು ಭಾರತವು ಫಿಲಿಪೈನ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಇದು ಬ್ರಹ್ಮೋಸ್‌ ಕ್ಷಿಪಣಿಯ ಮೊಟ್ಟಮೊದಲ ರಫ್ತು ಎನಿಸಿದೆ.

ಫಿಲಿಪ್ಪಿನ್ಸ್‌ ಮಾತ್ರವಲ್ಲದೆ, ಅರ್ಜೆಂಟೀನಾ ಸೇರಿದಂತೆ ಇತರ ಕೆಲವು ದೇಶಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆಯಲು ಆಸಕ್ತಿ ತೋರಿಸಿವೆ. ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಭಾರತ-ರಷ್ಯಾದ ಜಂಟಿ ಉದ್ಯಮವಾಗಿದ್ದು, ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ಪ್ರದೇಶಗಳಿಂದ ಉಡಾವಣೆ ಮಾಡಬಹುದಾದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ. ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ವೇಗದಲ್ಲಿ ಅಂದರೆ ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಸಂಚಾರ ಮಾಡುತ್ತದೆ. 

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಮಿಲಿಟರಿ ಶಕ್ತಿಯ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ಫಿಲಿಪೈನ್ಸ್‌ನೊಂದಿಗೆ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿದೆ. ಹೈಡ್ರೋಕಾರ್ಬನ್‌ಗಳ ಬೃಹತ್ ಮೂಲವಾದ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಸಾರ್ವಭೌಮತ್ವದ ವ್ಯಾಪಕ ಹಕ್ಕುಗಳ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿವೆ.

ರಷ್ಯಾದ ಈ ಕ್ಷಿಪಣಿ ಎದುರಿಸಲು ಪರದಾಡ್ತಿದೆ ಉಕ್ರೇನ್ ವಾಯು ರಕ್ಷಣಾ ಪಡೆ: ಪುಟಿನ್‌ ಮೇಲುಗೈ ಸಾಧಿಸೋಕೆ ಇದೇ ಕಾರಣ..!

ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಬ್ರೂನಿ ಸೇರಿದಂತೆ ಹಲವಾರು ದೇಶಗಳು ಕೂಡ ಚೀನಾದ ಹಕ್ಕುಗಳನ್ನು ವಿರೋಧಿಸಿವೆ. ಫಿಲಿಪೈನ್ಸ್‌ನೊಂದಿಗೆ ಮಿಲಿಟರಿ ಬಾಂಧವ್ಯವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ, ಇಥಿಯೋಪಿಯಾ, ಮೊಜಾಂಬಿಕ್, ಪೋಲೆಂಡ್ ಮತ್ತು ಐವರಿ ಕೋಸ್ಟ್‌ನೊಂದಿಗೆ ಆ ದೇಶಕ್ಕೆ ರಕ್ಷಣಾ ವಸ್ತುಗಳನ್ನು ಮಾರಾಟ ಮಾಡಲು ಭಾರತ ಬಯಸಿದೆ.

ಫಿಲಿಪ್ಪಿನ್ಸ್‌ ಬಳಿಕ ಇಂಡೋನೇಷ್ಯಾದಿಂದ ಭಾರತದ ಬ್ರಹ್ಮೋಸ್‌ ಕ್ಷಿಪಣಿ ಖರೀದಿ!

Follow Us:
Download App:
  • android
  • ios