Asianet Suvarna News Asianet Suvarna News

ನಾಳೆಯಿಂದ ಡಿ.22ರವರೆಗೆ 15 ದಿನಗಳ ಕಾಲ ಚಳಿಗಾಲದ ಸಂಸತ್‌ ಅಧಿವೇಶನ

ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಡುವಣ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಡಿ.4ರ ಸೋಮವಾರ ಚಾಲನೆ ಸಿಗಲಿದೆ. 

Winter session of Parliament for 15 days from tomorrow to December 22 akb
Author
First Published Dec 3, 2023, 8:40 AM IST

ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಡುವಣ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಡಿ.4ರ ಸೋಮವಾರ ಚಾಲನೆ ಸಿಗಲಿದೆ. ಡಿ.4ರಿಂದ ಡಿ.22ರವರೆಗೆ ಅಧಿವೇಶನ ನಡೆಯಲಿದ್ದು, 15 ದಿನದ ಕಲಾಪ ಇರಲಿದೆ. ಈ ಅವಧಿಯಲ್ಲಿ 19 ಮಸೂದೆಗಳು ಹಾಗೂ 2 ಹಣಕಾಸು ವಿಷಯಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ವಿಪಕ್ಷಗಳ ನಾಯಕರ ಸಭೆ ಕರೆದಿತ್ತು. ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಪೀಯೂಶ್‌ ಗೋಯಲ್‌, ಅನೇಕ ವಿಪಕ್ಷ ನಾಯಕರು ಪಾಲ್ಗೊಂಡಿದ್ದರು.

ಬೆಳಗಾವಿ ಅಧಿವೇಶನ: ಕಲಾಪದಲ್ಲಿ ಸರ್ಕಾರ ಕಟ್ಟಿಹಾಕಲು ನಾನೇ ಹಗ್ಗ ಕಳಿಸಿಕೊಡುವೆ: ಡಿಕೆಶಿ

ಈ ವೇಳೆ ವಿಪಕ್ಷ ನಾಯಕರು ಮಾತನಾಡಿ, ಬೆಲೆ ಏರಿಕೆ, ಮಣಿಪುರ ಸಮಸ್ಯೆ, ಕೇಂದ್ರವು ಹಳೆಯ 3 ಅಪರಾಧ ಮಸೂದೆಗಳನ್ನು ರದ್ದುಗೊಳಿಸಿ ಅದರ ಬದಲಿಗೆ 3 ಹೊಸ ಮಸೂದೆಗಳನ್ನು ಮಂಡಿಸಲು ಮುಂದಾಗಿರುವುದು ಹಾಗೂ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪ್ರಶ್ನೆಗಾಗಿ ಲಂಚ ಹಗರಣದ ಕಾರಣ ವಜಾ ಮಾಡಲು ಸಂಸದೀಯ ಸಮಿತಿ ಶಿಫಾರಸು ಮಾಡಿರುವುದು- ಈ ಎಲ್ಲ ವಿಷಯಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ವಿಪಕ್ಷಗಳ ಆಗ್ರಹವನ್ನು ಸರ್ಕಾರ ಸಕಾರಾತ್ಮಕವಾಗಿ ತೆಗೆದುಕೊಂಡಿದೆ. ಎಲ್ಲ ವಿಷಯಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ. ಇದಕ್ಕೆ ಸೂಕ್ತ ವಾತಾರವಣ ನಿರ್ಮಿಸಿಕೊಡುವ ಹೊಣೆ ವಿಪಕ್ಷದ್ದು’ ಎಂದರು.

ಚೀನಾ ವೈರಸ್‌ ಭೀತಿ ನಡುವೆ ಅಧಿವೇಶನಕ್ಕೆ ಬೆಳಗಾವಿ ಸಜ್ಜು..!

Latest Videos
Follow Us:
Download App:
  • android
  • ios