ಬೆಳಗಾವಿ ಅಧಿವೇಶನ: ಕಲಾಪದಲ್ಲಿ ಸರ್ಕಾರ ಕಟ್ಟಿಹಾಕಲು ನಾನೇ ಹಗ್ಗ ಕಳಿಸಿಕೊಡುವೆ: ಡಿಕೆಶಿ
ಮ್ಮಲ್ಲಿ ಒಳ್ಳೆ ತೆಂಗಿನ ನಾರಿನ ಹಗ್ಗ ಸಿಗುತ್ತದೆ. ಬೇಕಾದರೆ ವಿಪಕ್ಷಗಳಿಗೆ ಕಳುಹಿಸಿಕೊಡುತ್ತೇನೆ. ಅದರಲ್ಲಿ ನಮ್ಮನ್ನು ಕಟ್ಟಿ ಹಾಕಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಕನಕಪುರ (ಡಿ.3): ನಮ್ಮಲ್ಲಿ ಒಳ್ಳೆ ತೆಂಗಿನ ನಾರಿನ ಹಗ್ಗ ಸಿಗುತ್ತದೆ. ಬೇಕಾದರೆ ವಿಪಕ್ಷಗಳಿಗೆ ಕಳುಹಿಸಿಕೊಡುತ್ತೇನೆ. ಅದರಲ್ಲಿ ನಮ್ಮನ್ನು ಕಟ್ಟಿ ಹಾಕಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ನಡೆಸಿರುವ ತಯಾರಿಯನ್ನು ಯಾವ ರೀತಿ ಎದುರಿಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಡಿಕೆಶಿ, ನಮ್ಮಲ್ಲಿ ತೆಂಗಿನ ನಾರಿನ ಒಳ್ಳೆಯ ಹಗ್ಗ ಸಿಗುತ್ತದೆ. ನೀವು ಯಾರಿಗೆ ಬೇಕು ಹೇಳಿ ಕಳುಹಿಸಿಕೊಡುತ್ತೇನೆ. ಅದರಲ್ಲಿಯೇ ನಮ್ಮನ್ನು ಕಟ್ಟಿ ಹಾಕಲಿ ಎಂದರು.
ಆಪರೇಷನ್ ತೆಲಂಗಾಣಕ್ಕೆ ಧಾವಿಸಿದ ಡಿಕೆಶಿ ಟೀಮ್..!
ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಅದಕ್ಕಾಗಿ ಈಗಾಗಲೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಕೊಡಲು ಅವಕಾಶ ಇದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿಯೂ ಮೆಡಿಕಲ್ ಕಾಲೇಜು ಇರಲಿದೆ. ಕನಕಪುರ ತಾಲೂಕಿನಲ್ಲಿಯೂ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತೆಲಂಗಾಣ, ರಾಜಸ್ಥಾನದಲ್ಲಿ ಗೆಲ್ಲುವ ಕೈ ನಾಯಕರು ಕರ್ನಾಟಕ ರೆಸಾರ್ಟ್‌ಗೆ ಶಿಫ್ಟ್: ತೆಲಂಗಾಣಕ್ಕೆ ಹೊರಟ ಡಿಕೆಶಿ
ನಮ್ ಮನೆಯವ್ರಿಗೂ ಟೈಮ್ ಕೊಡೋಕಾಗ್ತಿಲ್ಲ :
ನಮ್ ಮನೆಯವ್ರಿಗೆ ಮತ್ತು ಕ್ಷೇತ್ರದ ಜನರಿಗೆ ಟೈಮ್ ಕೊಡಲು ಆಗುತ್ತಿಲ್ಲ. ಅಷ್ಟೊಂದು ಕೆಲಸದ ಒತ್ತಡ ಇದೆ. ಈಗ ಅಧಿವೇಶನಕ್ಕೆ ಬೆಳಗಾವಿಗೆ 10 ದಿನ ಹೋಗುತ್ತೇವೆ. ಅದರ ಜೊತೆಗೆ ರಾಜಕೀಯ ಜಂಜಾಟ ಬೇರೆ ಇದೆ. ಕ್ಷೇತ್ರದಲ್ಲಿನ ಕೆಲ ಕೆಲಸಗಳ ಪ್ರಗತಿ ಬಗ್ಗೆ ಸಂಸದ ಡಿ.ಕೆ.ಸುರೇಶ್ ನಿಗಾ ವಹಿಸಿದ್ದಾರೆ. ಅವರು ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಅಹವಾಲು ಆಲಿಸುತ್ತಿದ್ದಾರೆ. ಈಗ ನಾನು ಅಧಿಕಾರಿಗಳ ಜೊತೆ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.