ಸಮೂಹ ಸಂವಹನ ಹಳೇ ವಿದ್ಯಾರ್ಥಿಗಳ ಸಂಘದ 11ನೇ ವಾರ್ಷಿಕ ಸಭೆಯಲ್ಲಿ IFFCO IIMCAA ಪ್ರಶಸ್ತಿ ಘೋಷಣೆ!

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಕಾಲೇಜಿನ ಪತ್ರಿಕೋದಮ್ಯ ಹಳೇ ವಿದ್ಯಾರ್ಥಿಗಳ ಸಂಘ 11ನೇ ವಾರ್ಷಿಕ ಸಭೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ವೇಳೆ 7ನೇ IFFCO IIMCAA ಪ್ರಶಸ್ತಿ ಘೋಷಿಸಲಾಗಿದೆ. ವಿಜೇತರಿಗೆ ಟ್ರೋಫಿ ಜೊತೆಗೆ ಚೆಕ್ ವಿತರಿಸಿ ಸನ್ಮಾನಿಸಲಾಗಿದೆ. IFFCO IIMCAA ವಿಜೇತರ ಪಟ್ಟಿ ಇಲ್ಲಿದೆ.

Winners of 7th IFFCO IIMCAA Awards announced at Connections 2023 alumni meet of IIM Mass Communication Delhi ckm

ದೆಹಲಿ(ಫೆ.27): ಪ್ರತಿಷ್ಠಿತ IFFCO IIMCAA ಪ್ರಶಸ್ತಿ ಪ್ರಕಟಗೊಂಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್‌ನ ಸಮೂಹ ಸಂವಹನ ಹಳೇ ವಿದ್ಯಾರ್ಥಿಗಳ ಸಂಘಟನೆಯ 11ನೇ ವಾರ್ಷಿಕ ಸಭೆಯಲ್ಲಿ ಈ ಪ್ರಶಸ್ತಿ ವಿತರಿಸಲಾಗಿದೆ. ನವದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  7ನೇ IFFCO IIMCAA ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಯಿತು. ವರ್ಷದ ಪತ್ರಕರ್ತ, ಜೀವನಮಾನ ಸಾಧನೆ ಹಾಗೂ ಜ್ಯೂರಿ ಮೆಚ್ಚುಗೆಗೆ ಪಾತ್ರರಾದ ಸಾಧಕರನ್ನು ಘೋಷಿಸಿ ಪ್ರಶಸ್ತಿ ನೀಡಲಾಯಿತು. 

ಹಳೇ ವಿದ್ಯಾರ್ಥಿಗಳ ಪ್ರಧಾನ ಕಚೇರಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮ ಖ್ಯಾತ ಉರ್ದು ಕವಿ ವಸೀಮ್ ಬರೇಲ್ವಿ, ಅಕೀಲ್ ನೊಮಾನಿ, ರಾಣ ಯಶವಂತ್ ಕವಿಗೋಷ್ಠಿಗಳೊಂದಿಗೆ ಆರಂಭಗೊಂಡಿತು. ಇದೇ ವೇಳೆ ಗೋಲ್ಡನ್ ಜ್ಯೂಬಿಲಿ ಬ್ಯಾಚ್ (1972-73) ಮತ್ತು ರಜತ ಮಹೋತ್ಸವ ಬ್ಯಾಚ್ (1997-98) ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಕಾರ್ಯ್ರಮದ ಬಳಿಕ IFFCO IIMCAA ಪ್ರಶಸ್ತಿಗಳ ವಿಜೇತರನ್ನು ಸನ್ಮಾನಿಸಲಾಯಿತು. ಐಐಎಂಸಿ ಮಹಾನಿರ್ದೇಶಕ ಪ್ರೊ. ಸಂಜಯ್ ದ್ವಿವೇದಿ IFFCO IIMCAA ಪ್ರಶಸ್ತಿ ವಿಜೇತರಿಗೆ ಟ್ರೋಫಿ, ಚೆಕ್ ನೀಡಿ ಸನ್ಮಾನಿಸಿದರು.

ಬರಹಗಾರ್ತಿ ವೈದೇಹಿಗೆ 2022ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ

ಒಡಿಶಾದ ಸಾಹಿತಿ ಡಾ.ಗಾಯತ್ರಿಬಾಲಾ ಪಾಂಡಾ ವರ್ಷದ ಹಳೆಯ ವಿದ್ಯಾರ್ಥಿ ಪ್ರಶಸ್ತಿ ಪಡೆದರೆ, ಸಾರ್ವಜನಿಕ ಸೇವಾ ಪ್ರಶಸ್ತಿ ಸುಶೀಲ್ ಸಿಂಗ್, ಅಮಿತ್ ಕಟೋಚ್, ಪೀಲೇ ಈಟೆ ಮತ್ತು ಪಂಕಜ್ ಚಂದ್ರ ಗೋಸ್ವಾಮಿ ಅವರ ಪಾಲಾಗಿದೆ. ವರ್ಷದ ಪತ್ರಕರ್ತ ಪ್ರಶಸ್ತಿ ಬಿಹಾರದ ಉತ್ಕರ್ಷ್ ಸಿಂಗ್ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಜೊತೆ 1.50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇನ್ನು ಕೃಷಿ ವರದಿಗಾರ ಪ್ರಶಸ್ತಿಯನ್ನು ದೆಹಲಿಯ ರೋಹಿತ್ ವಿಶ್ವಕರ್ಮ ಪಡೆದಿದ್ದಾರೆ. ಜೊತೆಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಅಸ್ಸಾಂನ ವರದಿಗಾರಿಕೆಗೆ ದೆಹಲಿಯ ಆ್ಯಂಡ್ರೂ ಅಮ್ಸನ್ ವರ್ಷದ ವರದಿಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಟ್ರೋಫಿ ಹಾಗೂ  50,000 ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದಾರೆ. ವರ್ಷದ ಭಾಷಾ ವರದಿಗಾರ ಪ್ರಶಸ್ತಿ ಪ್ರಕಾಶನದಲ್ಲಿ ಕೇರಳದ ಬಿಜಿನ್ ಸ್ಯಾಮ್ಯುಯೆಲ್ ಪಡೆದುಕೊಂಡರೆ, ಪ್ರಸಾರ ವಿಭಾಗದಲ್ಲಿ ಕೇರಳದ ಸಂಧ್ಯಾ ಮಣಿಕಂದನ್ ಪಡೆದಿದ್ದಾರೆ. ವರ್ಷದ ನಿರ್ಮಾಕ ಪ್ರಶಸ್ತಿಗೆ ದೆಹಲಿಯ ಜ್ಯೋತಿ ಜಾಂಗ್ರಾ ಭಾಜನರಾಗಿದ್ದಾರೆ. ಇನ್ನು ವರ್ಷದ ಪಬ್ಲಿಕ್ ರಿಲೇಶನ್‌ಶಿಪ್ ವ್ಯಕ್ತಿ ಪ್ರಶಸ್ತಿಕೆ ಕರ್ನಾಟಕದ ಎಆರ್ ಹೇಮಂತ್ ಪಾತ್ರರಾಗಿದ್ದಾರೆ. ವರ್ಷದ ಜಾಹೀರಾತು ವ್ಯಕ್ತಿ ಪ್ರಶಸ್ತಿ ದೆಹಲಿಯ ಮೋಹಿತ್ ಪಾಸ್ರಿಚಾ ನೀಡಲಾಗಿದೆ.ಹರ್ಷಿತಾ ರಾಥೋಡ್, ಜ್ಯೋತಿ ಯಾದವ್, ಹರಿಕಿಶನ್ ಶರ್ಮಾ, ಎನ್ ಸುಂದ್ರೇಶ ಸುಬ್ರಮಣಿಯನ್, ಶಂಭು ನಾಥ್, ರಾಜಶ್ರೀ ಸಾಹೂ, ಅಭಿಷೇಕ್ ಯಾದವ್, ಜ್ಯೋತಿಸ್ಮಿತಾ ನಾಯಕ್, ಸುರಭಿ ಸಿಂಗ್ ಮತ್ತು ಶುಭಂ ತಿವಾರಿ ಅವರಿಗೆ ತೀರ್ಪುಗಾರರ ಮೆಚ್ಚುಗೆಗೆ ಪಾತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

Shaurya Puraskar : ದಾವಣಗೆರೆಗೆ ಕೀರ್ತಿ: ಬಾಲಕನ ಸಮಯ ಪ್ರಜ್ಞೆ, ಸಾಹಸಕ್ಕೆ ಶೌರ್ಯ ಪ್ರಶಸ್ತಿ!

IFFCO IIMCAA ಪ್ರಶಸ್ತಿ ವಿಜೇತರ ಲಿಸ್ಟ್:
ಜೀವಮಾನ ಸಾಧನೆ ಪ್ರಶಸ್ತಿ- ಪ್ರೊ.ಗೀತಾ ಬಮೇಜೈ
ಜೀವಮಾನ ಸಾಧನೆ ಪ್ರಶಸ್ತಿ- ಅನಿತಾ ಕೌಲ್ ಬಸು
ಜೀವಮಾನ ಸಾಧನೆ ಪ್ರಶಸ್ತಿ- ಪ್ರಕಾಶ್ ಪಾತ್ರ
ಜೀವಮಾನ ಸಾಧನೆ ಪ್ರಶಸ್ತಿ- ಸಮುದ್ರ ಗುಪ್ತಾ ಕಶ್ಯಪ್
ಜೀವಮಾನ ಸಾಧನೆ ಪ್ರಶಸ್ತಿ- ಅನುರಾಗ್ ವಾಜಪೇಯಿ

ವರ್ಷದ ಹಳೆ ವಿದ್ಯಾರ್ಥಿ ಪ್ರಶಸ್ತಿ- ಡಾ.ಗಾಯತ್ರಿಬಾಲಾ ಪಾಂಡ
ಸಾರ್ವಜನಿಕ ಸೇವೆ ಪ್ರಶಸ್ತಿ- ಸುಶೀಲ್ ಸಿಂಗ್
ಸಾರ್ವಜನಿಕ ಸೇವೆ ಪ್ರಶಸ್ತಿ- ಅಮಿತ್ ಕಟೋಚ್
ಸಾರ್ವಜನಿಕ ಸೇವೆ ಪ್ರಶಸ್ತಿ- ಎಟೆ ಪೀಲೀ
ಸಾರ್ವಜನಿಕ ಸೇವೆ ಪ್ರಶಸ್ತಿ- ಪಂಕಜ್ ಚಂದ್ರ ಗೋಸ್ವಾಮಿ
ಕನೆಕ್ಟಿಂಗ್ ಆಲ್ಯುಮಿನಿ ಆಫ್ ದಿ ಇಯರ್ ಪ್ರಶಸ್ತಿ -ಬ್ರಜ್ ಕಿಶೋರ್
ಕನೆಕ್ಟಿಂಗ್ ಚಾಪ್ಟರ್ ಆಪ್ ದಿ ಇಯರ್-ಒಡಿಶಾ
ಕನೆಕ್ಟಿಂಗ್ ಗ್ರೂಪ್ ಆಫ್ ದಿ ಇಯರ್- 1993-94 ಬ್ಯಾಚ್

ವರ್ಷದ ಪತ್ರಕರ್ತ- ಉತ್ಕರ್ಷ್ ಸಿಂಗ್
ವರ್ಷದ ಕೃಷಿ ವರದಿಗಾರ- ರೋಹಿತ್ ವಿಶ್ವಕರ್ಮ
ವರ್ಷದ ವರದಿಗಾರ(ಪ್ರಕಾಶನ)- ಆಂಡ್ರ್ಯೂ ಆಮ್ಸನ್
ವರ್ಷದ ಭಾರತೀಯ ಭಾಷಾ ವರದಿಗಾರ(ಪ್ರಕಾಶನ)- ಬಿಜಿನ್ ಸ್ಯಾಮ್ಯುಯೆಲ್
ವರ್ಷದ ವರದಿಗಾರ(ಪ್ರಸಾರ)- ನಿಬಿರ್ ದೇಕಾ
ವರ್ಷದ ಭಾರತೀಯ ಭಾಷಾ ವರದಿಗಾರ್ತಿ(ಪ್ರಸಾರ)- ಸಂಧ್ಯಾ ಮಣಿಕಂದನ್
ವರ್ಷದ ನಿರ್ಮಾಪಕಿ- ಜ್ಯೋತಿ ಜಾಂಗ್ರಾ
PR ವರ್ಷದ ವ್ಯಕ್ತಿ- ಎ ಆರ್ ಹೇಮಂತ್
ಜಾಹೀರಾತು ವರ್ಷದ ವ್ಯಕ್ತಿ- ಮೋಹಿತ್ ಪಾಸ್ರಿಚಾ

ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ಸಾಧಕರು:
ವರ್ಷದ ಪತ್ರಕರ್ತೆ- ಹರ್ಷಿತಾ ರಾಥೋಡ್
ವರ್ಷದ ಪತ್ರಕರ್ತೆ- ಜ್ಯೋತಿ ಯಾದವ್
ವರ್ಷದ ಕೃಷಿ ವರದಿಗಾರ- ಹರಿಕಿಶನ್ ಶರ್ಮಾ
ವರ್ಷದ ವರದಿಗಾರ(ಪ್ರಕಾಶನ)- ಎನ್ ಸುಂದರೇಶ ಸುಬ್ರಮಣಿಯನ್
ವರ್ಷದ ವರದಿಗಾರ(ಪ್ರಕಾಶನ)- ಶಂಭು ನಾಥ್
ವರ್ಷದ ಭಾರತೀಯ ಭಾಷಾ ವರದಿಗಾರ(ಪ್ರಕಾಶನ)- ರಾಜಶ್ರೀ ಸಾಹೂ
ವರ್ಷದ ವರದಿಗಾರ(ಪ್ರಸಾರ)- ಅಭಿಷೇಕ್ ಯಾದವ್
ವರ್ಷದ ಭಾರತೀಯ ಭಾಷಾ ವರದಿಗಾರ(ಪ್ರಸಾರ)- ಜ್ಯೋತಿಸ್ಮಿತಾ ನಾಯಕ್
ವರ್ಷದ ನಿರ್ಮಾಪಕ - ಸುರಭಿ ಸಿಂಗ್
ವರ್ಷದ ನಿರ್ಮಾಪಕ - ಶುಭಂ ತಿವಾರಿ

Latest Videos
Follow Us:
Download App:
  • android
  • ios