2024ರಲ್ಲಿ ಮತ್ತೆ ಗೆದ್ದು ಅಧಿಕಾರಕ್ಕೆ ಬರುವೆ: ಪ್ರಧಾನಿ ಮೋದಿ ವಿಶ್ವಾಸ
ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿಯ ಜಿಲ್ಲೆಗಳು ಇದೀಗ ಇಡೀ ದೇಶಕ್ಕೆ ಸ್ಫೂರ್ತಿದಾಯಕ ಜಿಲ್ಲೆಗಳಾಗಿ ಹೊರಹೊಮ್ಮಿವೆ. ಈ ಜಿಲ್ಲೆಗಳ ಸಾಫಲ್ಯತೆ ಮರುಪರಿಶೀಲಿಸಲು ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಮತ್ತೆ ನಾನು ಬರುವೆ ಎಂದು ಘೋಷಿಸಿದ್ದಾರೆ.
ನವದೆಹಲಿ (ಅ.01): ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿಯ ಜಿಲ್ಲೆಗಳು ಇದೀಗ ಇಡೀ ದೇಶಕ್ಕೆ ಸ್ಫೂರ್ತಿದಾಯಕ ಜಿಲ್ಲೆಗಳಾಗಿ ಹೊರಹೊಮ್ಮಿವೆ. ಈ ಜಿಲ್ಲೆಗಳ ಸಾಫಲ್ಯತೆ ಮರುಪರಿಶೀಲಿಸಲು ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಮತ್ತೆ ನಾನು ಬರುವೆ ಎಂದು ಘೋಷಿಸಿದ್ದಾರೆ. ಈ ಮೂಲಕ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವೆ ಎಂಬ ಪರೋಕ್ಷ ಸಂದೇಶ ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ.
ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯ ಮುಂದುವರೆದ ಭಾಗವಾಗಿ ದೇಶಾದ್ಯಂತ 100 ಮಹತ್ವಾಕಾಂಕ್ಷಿಯ ವಲಯ ಅಭಿವೃದ್ಧಿ ಯೋಜನೆಗೆ ಶನಿವಾರ ಲ್ಲಿನ ಭಾರತ ಮಂಟಪಂನಲ್ಲಿ ಚಾಲನೆ ನೀಡಿ ಮಾತನಾಡಿದರು. ಅಂದರೆ ಹಿಂದುಳಿದ ವಲಯಗಳ ಅಭಿವೃದ್ಧಿಯೇ ಈ ಯೋಜನೆಯ ಗುರಿಯಾಗಿದ್ದು, ಅವನ್ನು ಮಹತ್ವಾಕಾಂಕ್ಷಿ ವಲಯಗಳು ಎಂದು ಪರಿಗಣಿಸಲಾಗಿದೆ.<
ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ
ಜನಜೀವನ ಬದಲಾವಣೆ: ‘ಮಹತ್ವಾಕಾಂಕ್ಷಿ ಯೋಜನೆಯು 112 ಜಿಲ್ಲೆಗಳ 25 ಕೋಟಿ ಜನರ ಜೀವನದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ. ಅವರ ಜೀವನದ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದೇ ರೀತಿ ಮುಂದಿನ ಒಂದು ವರ್ಷದ ಅವಧಿಯಲ್ಲಿ 500 ಮಹತ್ವಾಕಾಂಕ್ಷೆಯ ವಲಯಗಳ ಪೈಕಿ ಕನಿಷ್ಠ 100 ವಲಯಗಳು ಸ್ಫೂರ್ತಿದಾಯಕ ವಲಯಗಳಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ವಿವಿಧ ಸಚಿವಾಲಯಗಳು 100 ವಲಯಗಳನ್ನು ಆಯ್ದು ವಿವಿಧ ವಿಷಯಗಳಲ್ಲಿ ಅಲ್ಲಿನ ಜೀವನಮಟ್ಟವನ್ನು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿಸಬೇಕು’ ಎಂದು ಸೂಚಿಸಿದರು.
2024ರ ಅಕ್ಟೋಬರ್‌ನಲ್ಲಿ ಮತ್ತೆ ಬರುವೆ: ಜೊತೆಗೆ, ‘ನನಗೆ ಖಂಡಿತಾ ಭರವಸೆ ಇದೆ 2024ರ ಅಕ್ಟೋಬರ್- ನವೆಂಬರ್‌ನಲ್ಲಿ ನಾವು ಮತ್ತೊಮ್ಮೆ ಈ ಯೋಜನೆಯ ಸಾಫಲ್ಯವನ್ನು ಮೌಲ್ಯಮಾಪನ ಮಾಡಲು ಇಲ್ಲಿ ಸೇರಲಿದ್ದೇವೆ’ ಎನ್ನುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಕಲ್ಪ ಸಪ್ತಾಹ: ಇದೇ ವೇಳೆ ಸಂಕಲ್ಪ ಸಪ್ತಾಹ ಕಾರ್ಯಕ್ರಮಕ್ಕೂ ಮೋದಿ ಚಾಲನೆ ನೀಡಿದರು. ಯೋಜನೆಯ ಅವಧಿಯಾದ ಅ.3ರಿಂದ9ರ ಅವಧಿಯಲ್ಲಿ ಮೊದಲ ಆರು ದಿನಗಳಿಗೆ ಸಂಪೂರ್ಣ ಸ್ವಾಸ್ಥ್ಯ, ಸುಪೋಷಿತ ಪರಿವಾರ್, ಸ್ವಚ್ಛತಾ, ಕೃಷಿ, ಶಿಕ್ಷಾ, ಸಮೃದ್ಧಿ ದಿವಸ ಎಂಬ 6 ವಿಷಯಗಳನ್ನು ಆಧರಿಸಿ ಮಹತ್ವಾಕಾಂಕ್ಷೆಯ ವಲಯಗಳು ಕಾರ್ಯನಿರ್ವಹಿಸಬೇಕಿವೆ.
ಮನುಷ್ಯನ ಜೀವ ಮತ್ತು ಜೀವನ ಯಾವುದು ಶಾಶ್ವತವಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಅಂತಿಮ ದಿನವಾದ ಅ.9ರಂದು ಇಡೀ ವಾರ ಕೈಗೊಂಡ ಕಾರ್ಯಕ್ರಮಗಳ ಸಂಭ್ರಮಾಚರಣೆಯಾದ ಸಂಕಲ್ಪ ಸಪ್ತಾಯ ಸಮಾವೇಶ ಸಮಾರೋಹ ಏರ್ಪಡಿಸಬೇಕು ಎಂದು ಮೋದಿ ಕರೆಕೊಟ್ಟರು. ಶನಿವಾರದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 3000ಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಜೊತೆಗೆ 2 ಲಕ್ಷಕ್ಕೂ ಹೆಚ್ಚು ಜನರು ವಚ್ರ್ಯುವಲಿ ಭಾಗವಹಿಸಿದ್ದರು.