ವೆನಿಜುವೆಲಾ ಅಧ್ಯಕ್ಷ ಮಡುರೋರನ್ನು ಅಪಹರಿಸಿದಂತೆ ಭಾರತದ ಪ್ರಧಾನಿ ಮೋದಿಯನ್ನೂ ಅಮೆರಿಕ ಅಧ್ಯಕ್ಷ ಟ್ರಂಪ್ ಕಿಡ್ನ್ಯಾಪ್ ಮಾಡುತ್ತಾರಾ? ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಪ್ರಶ್ನಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಮುಂಬೈ: ವೆನಿಜುವೆಲಾ ಅಧ್ಯಕ್ಷ ಮಡುರೋರನ್ನು ಅಪಹರಿಸಿದಂತೆ ಭಾರತದ ಪ್ರಧಾನಿ ಮೋದಿಯನ್ನೂ ಅಮೆರಿಕ ಅಧ್ಯಕ್ಷ ಟ್ರಂಪ್ ಕಿಡ್ನ್ಯಾಪ್ ಮಾಡುತ್ತಾರಾ? ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಪ್ರಶ್ನಿಸಿದ್ದಾರೆ.
ವಿವಾದಕ್ಕೆ ಕಾರಣ
ಇದು ವಿವಾದಕ್ಕೆ ಕಾರಣವಾಗಿದೆ. ಭಾರತದ ಮೇಲೆ ಅಮೆರಿಕದ ದುಬಾರಿ ತೆರಿಗೆಯಿಂದ ನಾವು ಭಾರೀ ಆದಾಯ ಕಳೆದುಕೊಳ್ಳಲಿದ್ದೇವೆ. ಇದನ್ನು ತಡೆಯಲು ಈಗಾಗಲೇ ನಾವು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದೇವೆ. ಹಾಗಿದ್ದರೆ ಮುಂದಿನ ಕಥೆ ಏನು? ವೆನಿಜುವೆಲಾಕ್ಕೆ ಆದ ರೀತಿ ಭಾರತಕ್ಕೂ ಆಗಲಿದೆಯೇ? ಮಡುರೋ ರೀತಿ ಮೋದಿಯನ್ನೂ ಟ್ರಂಪ್ ಕಿಡ್ನಾಪ್ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ತಿರುಗೇಟು ನೀಡಿರುವ ಬಿಜೆಪಿ
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ‘ಮಡುರೋ ಅವರಿಗೆ ಟ್ರಂಪ್ ಮಾಡಿದಂತೆ ಭಾರತದ ಪ್ರಧಾನಿಯವರಿಗೆ ಮಾಡಿದರೆ ಏನಾಗುತ್ತದೆ ಎಂದು ಯೋಚಿಸುವುದು ದೇಶಕ್ಕೆ ಮಾಡುವ ಅವಮಾನ. ಮಾತನಾಡುವ ಮೊದಲು ಯೋಚಿಸಬೇಕು. ಅಥವಾ ಇದು ಕಾಂಗ್ರೆಸ್‌ನ ನಿಜವಾದ ಅಜೆಂಡವೇ?’ ಎಂದು ಪ್ರಶ್ನಿಸಿದ್ದಾರೆ.

