ಮುಂಬೈ (ನ. 13)   ವಿವಾದಗಳಿಂದಲೇ ಹೆಸರು ಮಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಇದೀಗ ಬಿಜೆಪಿ ಮೇಲೆ  ವಾಗ್ದಾಳಿ ಮಾಡಿದ್ದಾರೆ. 

ಸಿಎಂ ಉದ್ಧವ್ ಠಾಕ್ರೆ ಮೇಲೆ  ಬಿಜೆಪಿ ಮಾಡಿರುವ ಭೂಹಗರಣದ ಆರೋಪಕ್ಕೆ ತಿರುಗೇಟು ನೀಡುವ ಭರದಲ್ಲಿ ಮಾತನಾಡಿದ್ದಾರೆ.  ನಮಗೆ ಗೊತ್ತಿದೆ, ಮಹಾರಾಷ್ಟ್ರದಲ್ಲಿ ಇನ್ನು  25  ವರ್ಷ ಬಿಜೆಪಿ ಅಧಿಕಾರದಿಂದ ಹೊರಗೆ ಉಳಿಯಲಿದೆ ಎಂದು ರಾವತ್ ಹೇಳಿದ್ದಾರೆ.

ಕ್ಷಿಪ್ರ ಬೆಳವಣಿಗೆ; ಸಿಎಂ ಬಿಎಸ್‌ವೈ, ಮಾಜಿ ಸಿಎಂ ಎಚ್‌ಡಿಕೆ ಭೇಟಿ

ಬಿಜೆಪಿ ವ್ಯಾಪಾರಿಗಳ, ದಲ್ಲಾಳಿಗಳ ಪಕ್ಷವಾಗಿದೆ.  ಆಧಾರವಿಲ್ಲದೆ ವ್ಯಾಪಾರಿಗಳ ಪಕ್ಷದ ನಾಯಕರು ಆರೋಪ ಮಾಡುತ್ತಿರುವುದು ನಾಚಿಕೆಗೇಡು ಎಂದಿದ್ದಾರೆ.

ಉದ್ಧವ್ ಠಾಕ್ರೆ ಕುಟುಂಬದ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಎರಡೂ ಕುಟುಂಬಗಳ ನಡುವೆ ಕಾನೂನು ಬದ್ಧವಾಗಿಯೇ ವ್ಯವಹಾರ ನಡೆದಿದೆ. ಇದನ್ನು  ಮೊದಲು ಬಿಜೆಪಿ  ನಾಯಕರು ತಿಳಿದುಕೊಳ್ಳಬೇಕು ಎಂದಿದ್ದಾರೆ.