Asianet Suvarna News Asianet Suvarna News

ಮೋದಿ-ಯೋಗಿ ಬಳಿಕ ರಾಮ ಮಂದಿರ ಒಡೆದು ಮಸೀದಿ ಕಟ್ಟುತ್ತೇವೆ; ಮುಸ್ಲಿಂ ವ್ಯಕ್ತಿ ವಿವಾದಿತ ಹೇಳಿಕೆ!

ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ಮುಸ್ಲಿಂ ವ್ಯಕ್ತಿ ನೀಡಿದ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೋದಿ-ಯೋಗಿ ಆಡಳಿತದಲ್ಲಿ ಇರುವ ತನಕ ಮಾತ್ರ ರಾಮ ಮಂದಿರ ಇರಲಿದೆ. ಬಳಿಕ ಒಡೆದು ಬಾಬ್ರಿ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.

Will Demolish Ram Mandir and throw away after Modi Yogi era Muslim man spark outrage ckm
Author
First Published Dec 15, 2023, 6:34 PM IST

ಲಖನೌ(ಡಿ.15) ಆಯೋಧ್ಯೆ ರಾಮ ಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಂದಿರ ಲೋಕಾರ್ಪಣೆಗೊಳಿಸಲಿದ್ದಾರೆ. ಈಗಾಗಲೇ ತಯಾರಿಗಳು, ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಇಡೀ ದೇಶದಲ್ಲೇ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಇದರ ನಡುವೆ ವಿವಾದವೊಂದು ಭುಗಿಲೆದ್ದಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಆಡಿದ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಇರುವವರೆಗೆ ಮಾತ್ರ ರಾಮ ಮಂದಿರ ಇರಲಿದೆ. ಮೋದಿ-ಯೋಗಿ ಬಳಿಕ ನಾವು ರಾಮ ಮಂದಿರ ಒಡೆದು ಹಾಕಿ ದೂರ ಎಸೆಯುತ್ತೇವೆ. ಬಳಿಕ ಬಾಬ್ರಿ ಮಸೀದಿ ಮತ್ತೆ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಈ ಹೇಳಿಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ನೀವು(ಹಿಂದೂಗಳು) ರಾಮ ಮಂದಿರ ನಿರ್ಮಾಣ ಮಾಡಿ ಪೂಜೆ ಮಾಡುತ್ತಾ ಇರಿ. ಎಲ್ಲೀವರೆಗೆ? ಮೋದಿ-ಯೋಗಿ ಇರುವ ತನಕ ನೀವು ರಾಮ ಮಂದಿರದಲ್ಲಿ ಪೂಜೆ ಮಾಡುತ್ತೀರಿ. ಅವರ ಬಳಿಕ ನಾವು ರಾಮ ಮಂದಿರ ಕೆಡವುತ್ತೇವೆ. ರಾಮ ಮಂದಿರವನ್ನೂ ದೂರಕ್ಕೆ ಎಸೆದು, ಕೆಡವಿದ ಬಾಬ್ರಿ ಮಸೀದಿಯನ್ನು ಮತ್ತೆ ನಿರ್ಮಿಸುತ್ತೇವೆ. ರಾಮ ಮಂದಿರ ನಿರ್ಮಾಣ ಮಾಡಲು ಎಷ್ಟೋ ಜಾಗವಿತ್ತು. ಬಾಬ್ರಿ ಮಸೀದಿ ಜಾಗದಲ್ಲೇ ಯಾಕೆ ಮಾಡಿದ್ದೀರಿ. ಬಾಬ್ರಿ ಮಸೀದಿ ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಮುಸ್ಲಿಂ ವ್ಯಕ್ತಿ ಹೇಳಿದ್ದಾರೆ.

ಕನ್ನಡಿಗರು ಕೆತ್ತಿದ ರಾಮಲಲ್ಲಾ ವಿಗ್ರಹ ಆಯ್ಕೆ ಆಗುತ್ತಾ? ಇಂದು ಅಂತಿಮ ತೀರ್ಮಾನ!

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಎಚ್ಚರ ಹಿಂದೂಗಳ ಮೋದಿ-ಯೋಗಿಯನ್ನು ಯಾಕೆ ಮತ್ತೆ ಆರಿಸಬೇಕು ಅನ್ನೋದಕ್ಕೆ ಇದೇ ವಿಡಿಯೋ ಸಾಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮೋದಿ-ಯೋಗಿ ಆಡಳಿತದಿಂದ ಭಾರತದ ಗತವೈಭವ ಹೇಗೆ ಮರಳುಕಳಿಸುತ್ತದೆ ಅನ್ನೋದು ಈ ವಿಡಿಯೋದಿಂದ ಗೊತ್ತಾಗುತ್ತಿದೆ. ನಮ್ಮ ಪೂರ್ವಜರು, ರಾಜರು ನಿರ್ಮಿಸಿದ ಅದೆಷ್ಟೋ ದೇವಸ್ಥಾನ ಮಣ್ಣಿನಡಿ ಹೂತುಹೋಗಿದೆ, ನೆಲಮಸವಾಗಿದೆ. ಇದೇ ಮಂದಿರವನ್ನು ಮಸೀದಿಯನ್ನಾಗಿ ಪರಿವರ್ತನೆ ಮಾಡಿದ್ದಾರೆ. ಇದೀಗ ತಾನು ಹುಟ್ಟಿದ, ವೈಭವೋಪೇತವಾಗಿ ಆಳಿದ ನಾಡಿನಲ್ಲಿ ಬಂಧಮುಕ್ತರಾಗಿದ್ದ ಶ್ರೀರಾಮ ಇದೀಗ ರಾಜ್ಯಭಾರ ಮಾಡಲು ಸಜ್ಜಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.

 

 

ಮೋದಿ-ಯೋಗಿ ಬಳಿಕ ಅದಕ್ಕಿಂತ ಪ್ರಖರ ನಾಯಕರು ಆಗಮಿಸುತ್ತಾರೆ. ಮೋದಿ-ಯೋಗಿ ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ಅವರ ಕೊಡುಗೆಯನ್ನು ನಾವು ಮುಂದಿನ ಪೀಳಿಕೆಗೆ ತಿಳಿ ಹೇಳುತ್ತೇವೆ. ಪ್ರತಿ ಮನೆಯಲ್ಲಿ ಯೋಗಿ-ಮೋದಿ ಹುಟ್ಟುತ್ತಾರೆ ಎಂದು ಇತರರ ಕಮೆಂಟ್ ಮಾಡಿದ್ದಾರೆ. ಈ ಹೇಳಿಕೆ ಪರವಾಗಿಯೂ ಕೆಲ ಕಮೆಂಟ್ ವ್ಯಕ್ತವಾಗಿದೆ. ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇದು ಯಾವ ನ್ಯಾಯ? ಸ್ವಾತಂತ್ರ್ಯ ಬಳಿಕ ಯಾವುದೇ ಮಂದಿರ ಧ್ವಂಸಮಾಡಿಲ್ಲ. ಹೀಗಿರುವಾಗ ಮಸೀದಿ ಧ್ವಂಸ ಮಾಡಿದ್ದು ಯಾಕೆ? ಅನ್ನೋ ಪ್ರಶ್ನೆಯನ್ನು ಕೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!
 

Follow Us:
Download App:
  • android
  • ios