ಅಸ್ಸಾಂ ವಲಸಿಗರಿಗೆ ಪೌರತ್ವ ನೀಡಲು ಸುಪ್ರೀಂ ಸಮ್ಮತಿ

 1966ರ ಜ.1ರಿಂದ 1971ರ ಮಾ.25ರೊಳಗೆ ಅಸ್ಸಾಂ ಪ್ರವೇಶಿಸಿದ ವಲಸಿಗರಿಗೆ ಭಾರತದ ಪೌರತ್ವ ನೀಡುವುದಕ್ಕೆ ಸುಪ್ರೀಂನಿಂದ ಸಮ್ಮತಿ ಸಿಕ್ಕಿದೆ.

Supreme Court agrees to grant citizenship to Assam migrants

ನವದೆಹಲಿ: 1966ರ ಜ.1ರಿಂದ 1971ರ ಮಾ.25ರೊಳಗೆ ಅಸ್ಸಾಂ ಪ್ರವೇಶಿಸಿದ ವಲಸಿಗರಿಗೆ ಭಾರತದ ಪೌರತ್ವ ನೀಡುವುದಕ್ಕೆ ಸುಪ್ರೀಂನಿಂದ ಸಮ್ಮತಿ ಸಿಕ್ಕಿದೆ. ವಲಸಿಗರಿಗೆ ನಾಗರಿಕತ್ವ ನೀಡುವ ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸುಪ್ರೀಂಕೋರ್ಟ್‌ ಕಾನೂನು ಪರೀಕ್ಷೆಯಲ್ಲಿ ಗೆದ್ದಿದೆ. ಸೆಕ್ಷನ್ 6 ಎಯ ಸಾಂವಿಧಾನಿಕ ಸಿಂಧುತ್ವವನ್ನು ಪಂಚಸದಸ್ಯ ಸಾಂವಿಧಾನಿಕ ಪೀಠ 4:1 ಬಹುಮತದ ತೀರ್ಪಿನೊಂದಿಗೆ ಎತ್ತಿ ಹಿಡಿದಿದೆ.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಏರ್ಪಟ್ಟಿದ್ದ ಆಸ್ಸಾಂ ಒಪ್ಪಂದ ಅಕ್ರಮ ವಲಸಿಗರ ಸಮಸ್ಯೆಗೆ ಒಂದು ರಾಜಕೀಯ ಪರಿಹಾರ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಣ್ಣ ರಾಜ್ಯವಾದ ಅಸ್ಸಾಂಗೆ ವಲಸಿಗರ ಪ್ರವೇಶ ಹೆಚ್ಚಿನ ಪ್ರಮಾಣದಲ್ಲಿದೆ. ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವುದು ಸುದೀರ್ಘ ಪ್ರಕ್ರಿಯೆ. ಸಂಸತ್ತು ಹಾಗೂ ವಿಧಾನಸಭೆಗಳಿಗೆ ಅಂತಹ ಕಾಯ್ದೆ ರೂಪಿಸುವ ರೂಪಿಸುವ  ಅಧಿಕಾರ ಇದೆ ಎಂದು ನ್ಯಾಯಾಲಯ ಹೇಳಿದೆ. 

2041ಕ್ಕೆ ಅಸ್ಸಾಂ ಮುಸ್ಲಿಂ ರಾಜ್ಯವಾಗಲಿದೆ;: ಸಿಎಂ ಹಿಮಂತ ಬಿಸ್ವಾ ಶರ್ಮಾ ಕಳವಳ

ಏನಿದು ಪ್ರಕರಣ?:
ಅಕ್ರಮ ವಲಸಿಗರ ಸಮಸ್ಯೆ ಬಗ್ಗೆ ದೊಡ್ಡ ಹೋರಾಟವೇ ಅಸ್ಸಾಂನಲ್ಲಿ ನಡೆದಿತ್ತು. ಈ ಹೋರಾಟ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಹಾಗೂ ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ ನಡುವೆ 1985ರಲ್ಲಿ ಒಪ್ಪಂದ ವೇರ್ಪಟ್ಟಿತ್ತು. ಅದರ ಪ್ರಕಾರ ಪೌರತ್ವ ಕಾಯ್ದೆಗೆ ಸೆಕ್ಷನ್ 6ಎ ಸೇರ್ಪಡೆ ಮಾಡಿ, ಪೌರತ್ವಕ್ಕೆ ಅವಕಾಶ ಕೊಡಲಾಗಿತ್ತು. 1966ರಜ.1 ರಿಂದ1971ರ ಮಾ.25ರೊಳಗೆ ಬಂದವರನ್ನು ಗುರುತಿಸಿ ಪೌರತ್ವ ಪೌರತ್ವ ನೀಡುವ ನೀಡುವುದು, ಅನಂತರ ಬಂದವರನ್ನು ಗಡೀಪಾರು ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ 1971ರ ಬದಲು ಕಟಾಫ್‌ ವರ್ಷವನ್ನು 1951 ಎಂದು ನಿಗದಿಪಡಿಸಬೇಕು ಎಂದು ವಾದಿಸಿ ಸುಪ್ರೀಂಗೆ ಅರ್ಜಿ ಸಲ್ಲಿಕೆಯಾಗಿತ್ತು.

ಅಸ್ಸಾಂನಲ್ಲಿ ಮುಸ್ಲಿಂ ವಿವಾಹ, ವಿಚ್ಛೇದನ ಕಾಯ್ದೆ ರದ್ದು: ಏಕರೂಪದ ನಾಗರಿಕ ಸಂಹಿತೆ ಜಾರಿ

Latest Videos
Follow Us:
Download App:
  • android
  • ios