ಅಲಿಗಢ[ಜ.14]: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗಿದವರನ್ನು ಜೀವಂತವಾಗಿ ಹೂತುಬಿಡುತ್ತೇನೆ ಎಂದು ಬಿಜೆಪಿ ನಾಯಕ ರಘುರಾಜ ಸಿಂಗ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ರಘುರಾಜ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಅವರು ಸಚಿವರೂ ಅಲ್ಲ, ಶಾಸಕರೂ ಅಲ್ಲ ಎನ್ನುವ ಮೂಲಕ ಉಪೇಕ್ಷಿಸಿದೆ.

PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!

ಅಲಿಗಢದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ರಾರ‍ಯಲಿಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ರಘುರಾಜ, ಕೇವಲ ಶೇ.1ರಷ್ಟಿರುವ ಕ್ರಿಮಿನಲ್‌ ಹಾಗೂ ಭ್ರಷ್ಟವ್ಯಕ್ತಿಗಳು ಮೋದಿ ಹಾಗೂ ಆದಿತ್ಯನಾಥ್‌ಗೆ ಮುರ್ದಾಬಾದ್‌ ಎಂಬ ಘೋಷಣೆ ಕೂಗುತ್ತಿದ್ದಾರೆ. ಅಂಥವರನ್ನು ಹೂತುಬಿಡುತ್ತೇನೆ. ಮೋದಿ ಹಾಗೂ ಯೋಗಿ ಅವರೇ ದೇಶವನ್ನು ಮುನ್ನಡೆಸುತ್ತಾರೆ. ಇದೇ ರೀತಿ ಆಳ್ವಿಕೆ ನಡೆಸುತ್ತಾರೆ. ದಾವೂದ್‌ ಇಬ್ರಾಹಿಂನಿಂದ ಹಣ ಪಡೆದವರು ನಮ್ಮ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.