Asianet Suvarna News Asianet Suvarna News

15 ದಿನದಲ್ಲಿ ವಿಷನ್ ಡಾಕ್ಯುಮೆಂಟ್‌: ಕೇಂದ್ರ ಸಚಿವ ಕುಮಾರಸ್ವಾಮಿ

ಯುವಕರ ಉದ್ಯೋಗ, ದೇಶದ ಸಮಸ್ಯೆಗಳನ್ನು ಬಗೆಹರಿಸುವ ಸವಾಲು ನಮ್ಮ ಮುಂದಿದೆ. ಮುಂದಿನ 15 ದಿನದಲ್ಲಿ ಬೃಹತ್ ಕೈಗಾರಿಕಾ ಇಲಾಖೆ ಕುರಿತು ವಿಷನ್ ಡಾಕ್ಯುಮೆಂಟ್ ಸಿದ್ದಪಡಿಸಲಿದ್ದೇನೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನ ಪಡೆದು ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದ ಎಚ್.ಡಿ.ಕುಮಾರಸ್ವಾಮಿ 

Will be Prepare the Vision Document in 15 days Says Union Minister HD Kumaraswamy grg
Author
First Published Jun 11, 2024, 6:55 AM IST

ನವದೆಹಲಿ(ಜೂ.11):  ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು(ಮಂಗಳವಾರ) ಸಂಜೆ 5 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ಖಚಿತಪಡಿಸಿರುವ ಕುಮಾರಸ್ವಾಮಿ ಅವರು ತಮಗೆ ಪ್ರಮುಖ ಖಾತೆ ನೀಡಿರುವುದಕ್ಕೆ ಕನ್ನಡಿಗರ ಪರವಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ವನ್ನೂ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಯುವಕರ ಉದ್ಯೋಗ, ದೇಶದ ಸಮಸ್ಯೆಗಳನ್ನು ಬಗೆಹರಿಸುವ ಸವಾಲು ನಮ್ಮ ಮುಂದಿದೆ. ಮುಂದಿನ 15 ದಿನದಲ್ಲಿ ಬೃಹತ್ ಕೈಗಾರಿಕಾ ಇಲಾಖೆ ಕುರಿತು ವಿಷನ್ ಡಾಕ್ಯುಮೆಂಟ್ ಸಿದ್ದಪಡಿಸಲಿದ್ದೇನೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನ ಪಡೆದು ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದರು.

ರಾಜ್ಯ ನಾಯಕರಿಗೆ ಬಂಪರ್, ಕುಮಾರಸ್ವಾಮಿಗೆ ಉಕ್ಕು-ಬೃಹತ್ ಕೈಗಾರಿಕೆ, ಇಲ್ಲಿದೆ ನಾಲ್ವರ ಖಾತೆ ಲಿಸ್ಟ್!

ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಇಲಾಖೆಯಲ್ಲೂ ಹೊಸ ಬದಲಾವಣೆ ತರಲು ಪ್ರಯತ್ನ ಮಾಡು ತ್ತೇನೆ. ಇದಕ್ಕಾಗಿ ದೇಶಾದ್ಯಂತ ಸುತ್ತಾ ಡಲು ನಿರ್ಧರಿಸಿದ್ದೇನೆ. ಉದ್ಯಮಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

ನನ್ನ ಮುಂದೆ ದೊಡ್ಡ ಸವಾಲಿದೆ. ಕರ್ನಾಟಕದಲ್ಲೂ ವಿಎಸ್‌ಎಲ್‌ವಿ ಸೇರಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ, ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಎಲ್ಲವನ್ನೂ ಗಮನಿಸಿ ಪ್ರಮುಖ ಖಾತೆಯನ್ನು ಮೋದಿ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಕ್ಷಣ ವ್ಯರ್ಥಮಾಡದೆ ಕೆಲಸ ಮಾಡುತ್ತೇನೆ. ರೂಟ್ ಮ್ಯಾಪ್ ಸಿದ್ದಮಾಡಿ ಕೆಲಸ ಮಾಡಿಸುತ್ತೇನೆ. ನನ್ನದೇ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios