ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್| ಟ್ರಂಪ್ ಸ್ವಾಗತಕ್ಕೆ ಅದ್ಧೂರಿ ಸ್ವಾಗತ| ಮೋದಿ ಸ್ವಾಗತಕ್ಕೆ ಅಮೆರಿಕಾ ಇಷ್ಟು ಖರ್ಚು ಮಾಡುತ್ತಾ? ನಿರ್ದೇಶಕನ ಪ್ರಶ್ನೆ ಫುಲ್ ವೈರಲ್

ನವದೆಹಲಿ[ಫೆ.25]: ಬಾಲಿವುಡ್ ಹಾಗೂ ದಕ್ಷಿಣ ಭಾರತ ಸಿನಿಮಾ ಕ್ಷೇತ್ರದ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಅಲ್ಲದೇ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಸರಣಿ ಟ್ವಿಟ್ ಮಾಡುತ್ತಿದ್ದಾರೆ. ಹೀಗಿರುವಾಗ ವರ್ಮಾ ಮಾಡಿದ ಟ್ವೀಟ್ ಒಂದು ಭಾರೀ ವೈರಲ್ ಆಗುತ್ತಿದೆ. ಈ ಟ್ವೀಟ್ ನಲ್ಲಿ ಅವರು ಟ್ರಂಪ್ ಪ್ರವಾಸ ಕುರಿತು ಪ್ರಶ್ನೆಯೊಂದನ್ನು ಎಸೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಡೊನಾಲ್ಡ್ ಟ್ರಂಪ್ ಪ್ರವಾಸ ಸಂಬಂಧ ಟ್ವೀಟ್ ಮಾಡಿರುವ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ನಾವು ಭಾರತೀಯರು ಡೊನಾಲ್ಡ್ ಟ್ರಂಪ್ ಸ್ವಾಗತಕ್ಕೆ ಕೋಟ್ಯಾನುಗಟ್ಟಲೇ ಹಣ ವ್ಯಯಿಸಿದ್ದಾರೆ. ಹೀಗಿರುವಾಗ ಅಮೆರಿಕಾ ಕೂಡಾ ನರೇಂದ್ರ ಮೋದಿ ಸ್ವಾಗತಕ್ಕೆ ಸಾವಿರ ರೂಪಾಯಿಯಾದರೂ ಖರ್ಚು ಮಾಡುತ್ತಾರಾ? ಇದು ಅಮೆರಿಕಾ ಏನೆಂದು ಹೇಳುತ್ತದೆ, ಭಾರತ ಕುರಿತಾಗಿ ಅಲ್ಲ... ಸುಮ್ಮನೆ ಹೇಳಿದೆಯಷ್ಟೇ' ಎಂದು ಬರೆದಿದ್ದಾರೆ.

Scroll to load tweet…

ಇದರ ಬೆನ್ನಲ್ಲೇ ವರ್ಮಾ ಗುಜರಾತ್ ನಲ್ಲಿ ನಿರ್ಮಿಸಲಾದ ಗೋಡೆ ಫೋಟೋವನ್ನೂ ಟ್ವೀಟ್ ಮಾಡುತ್ತಾ 'ನೈಜ ಚಿತ್ರಣ, ಟ್ರಂಪ್ ನೋಡಿದಂತೆ' ಎಂದು ಬರೆದಿದ್ದಾರೆ. ಸದ್ಯ ಇವರು ಮಾಡುತ್ತಿರುವ ಟ್ವೀಟ್ಸ್ ಭಾರೀ ವೈರಲ್ ಆಗುತ್ತಿವೆ.