ವೈರಲ್ ಆಯ್ತು ಐಪಿಎಸ್ ಅಧಿಕಾರಿ ಟ್ವೀಟ್ ಜಿಲೇಬಿ ತಿನ್ನಲು ಅವಕಾಶ ನೀಡುತ್ತಿಲ್ಲ ಪತ್ನಿ ಬಾಲ್ಯದ ಜೀವನ ನೆನೆಪಿಸಿದ ಅಧಿಕಾರಿಯ ಟ್ವೀಟ್

ದೆಹಲಿ(ಜು.22): ಬಿಸಿ ಬಿಸಿ ಜಿಲೇಬಿ ನೋಡಿದರೆ ತಿನ್ನದೆ ಇರಲು ಸಾಧ್ಯವಿಲ್ಲ. ಆದರೆ ಇದೀಗ ಐಪಿಎಎಸ್ ಅಧಿಕಾರಿ ತಮ್ಮ ಜಿಲೇಬಿ ತಿನ್ನುವ ಆಸೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಎಲ್ಲವೂ ಎದುರಿಗಿದ್ದರೂ ಜಿಲೇಬಿ ತಿನ್ನಲು ಮಾತ್ರ ಪತ್ನಿ ಬಿಡುತ್ತಿಲ್ಲ ಅನ್ನೋ ಟ್ವೀಟ್ ಇದೀಗ ವೈರಲ್ ಆಗಿದೆ.

ಕೇವಲ 10 ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ಕ್ರಿಸ್ಪಿ ಆಲೂ ಜಿಲೇಬಿ!

ಐಪಿಎಸ್ ಅಧಿಕಾರಿ ಡಾ. ಸಂದೀಪ್ ಮಿತ್ತಲ್ ಟ್ವೀಟ್ ಕ್ಷಣಾರ್ಧಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಮ್ಮ ಬಾಲ್ಯದ ಜೀವನದಲ್ಲಿ ಜಿಲೇಬಿ ಪಾತ್ರ ಹಾಗೂ ಇಂದಿನ ಪರಿಸ್ಥಿತಿಯನ್ನು ಮಿತ್ತಲ್ ಸುಂದರವಾಗಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ಕುರಿತು ಮಾಡಿದ ಟ್ವೀಟ್ ಇಲ್ಲಿದೆ.

Scroll to load tweet…

ನನ್ನ ಬಾಲ್ಯದಲ್ಲಿ ದೊಡ್ಡ ಜಿಲೇಬಿಗೆ 25 ಪೈಸೆ ಇತ್ತು. ದೊಡ್ಡವನಾದ ಮೇಲೆ ಸಂಬಳ ಬಂದಾಗ ಪ್ರತಿ ದಿನ ಕನಿಷ್ಠ 3 ಜಿಲೇಬಿ ಖರೀದಿಸಿ ತಿನ್ನಬೇಕು ಎಂದು ಅಂದುಕೊಂಡಿದ್ದೆ. ಆದರೆ ಈಗ ಗಳಿಕೆ ಆರಂಭವಾಗಿದೆ. ಜಿಲೇಬಿ ಖರೀದಿಸಿ ತಿನ್ನೋ ಶಕ್ತಿ ಇದ್ದರೂ, ಪತ್ನಿ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಮಿತ್ತಲ್ ಟ್ವೀಟ್ ಮಾಡಿದ್ದಾರೆ.

ಮಿತ್ತಲ್ ಟ್ವೀಟ್‌ಗೆ ಪತ್ನಿ ಡಾ. ರಿಚಾ ಮಿತ್ತಲ್ ಪ್ರತಿಕ್ರಿಯೆ ಕೂಡ ವೈರಲ್ ಆಗಿದೆ. ಮಿತ್ತಲ್ ಟ್ವೀಟ್‌ಗೆ ರಿಪ್ಲೇ ಮಾಡಿರುವ ರಿಚಾ, ಇಂದು ಮನಗೆ ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಇವರಿಬ್ಬರ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಇದರೊಂದಿಗೆ ಹಲವರು ತಮ್ಮ ಬಾಲ್ಯದ ಜಿಲೇಬಿ ಕತೆಯನ್ನೂ ತೆರೆದಿಟ್ಟಿದ್ದಾರೆ.