ಕೇವಲ 10 ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ಕ್ರಿಸ್ಪಿ ಆಲೂ ಜಿಲೇಜಿ!
ಆಲೂಗೆಡ್ಡೆಯಿಂದ ಜಿಲೇಜಿ ತಯಾರಿಸಬಹುದು. ನಿಮಗೆ ಗೊತ್ತಾ ಇದು? ಟೇಸ್ಟ್ ಕೂಡ ಸೂಪರ್ ಆಗಿರುತ್ತೆ ಹಾಗೂ ಮಾಡುವುದು ಸಹ ಸುಲಭ. ಇಲ್ಲಿದೆ ಆಲೂಗೆಡ್ಡೆ ಜಿಲೇಜಿಯ ಸಿಂಪಲ್ ರೆಸಿಪಿ.
ಬೇಕಾಗುವ ಸಾಮಗ್ರಗಳು: 200 ಗ್ರಾಂ ಮೈದಾ ಹಿಟ್ಟು, 2 ಬೇಯಿಸಿದ ಆಲೂಗೆಡ್ಡೆ, 1/2 ಕಪ್ ಮೊಸರು, 1/4 ಟೀಸ್ಪೂನ್ ಫ್ರುಟ್ ಸಾಲ್ಟ್, ಕರಿಯಲು ಎಣ್ಣೆ, ಒಂದು ಚಿಟಿಕೆ ಕೇಸರಿ, 1/4 ಟೀಸ್ಪೂನ್ ಏಲಕ್ಕಿ ಪುಡಿ ಮತ್ತು 1 ಕಪ್ ಸಕ್ಕರೆ.
ಹಂತ 1:
ಮೊದಲನೆಯದಾಗಿ, ಒಂದು ಬಾಣಲೆಯಲ್ಲಿ 2 ಕಪ್ ನೀರು, ಸಕ್ಕರೆ ಮತ್ತು ಕೇಸರಿಯನ್ನು ಹಾಕಿ. ಒಂದೆಳೆ ಸಕ್ಕರೆ ಪಾಕವನ್ನು ತಯಾರಿಸಬೇಕು.
ಹಂತ -2:
ಈಗ ಮೈದಾ ಹಿಟ್ಟು, ಮೊಸರು, ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಕಡಿಮೆ ನೀರು ಸೇರಿಸಿ ದಪ್ಪ ಹಿಟ್ಟು ತಯಾರಿಸಿ ಕೊಳ್ಳಿ. (ಹಾಲನ್ನು ಸಹ ಬಳಸಬಹುದು)
ಹಂತ -3:
ಹಿಟ್ಟು ಉಂಡೆಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಅದಕ್ಕೆ ಫ್ರುಟ್ ಸಾಲ್ಟ್ ಅಥವಾ ಈನೊ ಸೇರಿಸಿದ ನಂತರ ಫಿಲ್ಟರ್ ಮಾಡಿ.
ಹಂತ -4:
ತಯಾರಿಸಿದ ಮಿಶ್ರಣವನ್ನು ಕೋನ್ ಆಕಾರದ ಪಾಲಿಥಿನ್ ಅಥವಾ ಇನ್ನಾವುದೇ ದಪ್ಪ ಬಟ್ಟೆಯಲ್ಲಿ ಹಾಕಿ. ತುದಿಯಲ್ಲಿ ಸಣ್ಣ ರಂಧ್ರವನ್ನು ಮಾಡಿ.
ಹಂತ -5:
ಕಾದ ಎಣ್ಣೆಗೆ ಹಿಟ್ಟನ್ನು ಜಲೇಬಿ ಆಕಾರದಲ್ಲಿ ಬಿಡಿ. ಅದು ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ.
ಹಂತ -6:
ಕರಿದ ಜಿಲೇಜಿಗಳನ್ನು ಸಕ್ಕರೆ ಪಾಕದಲ್ಲಿ 2-3 ನಿಮಿಷಗಳ ಕಾಲ ಹಾಕಿ ತೆಗೆಯಿರಿ.
ಆಲೂಗಡ್ಡೆ ಸೂಪರ್ ಫುಡ್. ಇದರ ಬಳಕೆ ಭಾರತೀಯ ಅಡುಗೆಮನೆಯಲ್ಲಿ ಕಾಮನ್. ಮಕ್ಕಳಿಂದ ಹಿರಿಯರವರೆಗೆ ಆಲೂಗಡ್ಡೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಅದರಲ್ಲಿರುವ ಪಿಷ್ಟವು ಜಲೇಬಿಯನ್ನು ಗರಿ ಗರಿಯಾಗಿಸುತ್ತದೆ. ಇದಲ್ಲದೆ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್-ಬಿ ಮತ್ತು ರಂಜಕದ ಅಂಶಗಳು ಕಂಡುಬರುತ್ತದೆ.