High Court Order ಪೋಷಕರಿಂದ ಪ್ರತ್ಯೇಕವಾಗಿ ಬದುಕುವಂತೆ ಪತಿಗೆ ಒತ್ತಾಯಿಸುವುದು ಕ್ರೌರ್ಯ, ಹೈಕೋರ್ಟ್!

  • ಛತ್ತೀಸ್‌ಗಢ ಹೈಕೋರ್ಟ್‌ನಿಂದ ಮಹತ್ವದ ತೀರ್ಪು
  • ಸುಳ್ಳು ವರದಕ್ಷಿಣೆ ಕೇಸ್ ಬೆದರಿಕೆ ಹಾಕಿದರೆ ಕ್ರೌರ್ಯ
  • ಪೋಷಕರಿಂದ ಬೇರ್ಪಡಲು ಒತ್ತಾಯಿಸುವುದು ತಪ್ಪು
Wife creates constraints upon husband to get separated from his family amounts to cruelty says Chhattisgarh High Court ckm

ಛತ್ತೀಸ್‌ಗಢ(ಮೇ.15): ಪತಿಯನ್ನು ಪೋಷಕರಿಂದ ಪ್ರತ್ಯೇಕವಾಗಿ ಬದುಕುವಂತೆ ಒತ್ತಾಯಿಸುವುದು, ಈ ಕಾರಣಕ್ಕೆ ಪತಿ ಮೇಲೆ ಸುಳ್ಳು ವರದಕ್ಷಿಣೆ ಹಾಕುವುದು ಕ್ರೌರ್ಯಕ್ಕೆ ಸಮ ಎಂದು ಚತ್ತೀಸಘಡ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಜಸ್ಟೀಸ್ ಗೌಮ್ ಬಧೌರಿ ಎನ್‌ಕೆ ಚಂದ್ರವಂಶಿ ಅವರ ವಿಭಾಗಿಯ ಪೀಠ ಈ ಮಹತ್ವದ ಆದೇಶ ನೀಡಿದೆ. 2017ರಲ್ಲಿ ಪತ್ನಿಯ ಕ್ರೌರ್ಯದಿಂದ ಬೇಸತ್ತು ವಿಚ್ಚೇದನಕ್ಕೆ ಅರ್ಜಿ ಹಾಕಿದ್ದರು. ಆದರೆ ಕೋರ್ಬಾದ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಚತ್ತೀಸಘಡ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 

ಹೆಂಡತಿ..ಕಾಡುತಿ..  ಪತ್ನಿ ಕಿರುಕುಳಕ್ಕೆ  21 ಕೆಜಿ ಕಳಕೊಂಡವನಿಗೆ ಕೊನೆಗೂ ಡಿವೋರ್ಸ್ ಸಿಕ್ತು!

ವೈವಾಹಿಕ ಜೀವನದಲ್ಲಿ ಪದೇ ಪದೇ ಭಿನ್ನಾಭಿಪ್ರಾಯ ಹಾಗೂ ಜಗಳ ನಡೆಯುತ್ತಿತ್ತು. ಪತ್ನಿ ಪದೇ ಪದೇ ತವರು ಮನೆಗೆ ತೆರಳುತ್ತಿದ್ದಳು. ಇಷ್ಟೇ ಅಲ್ಲ ಮತ್ತೆ ಪತಿ ಮನೆಗೆ ಹಿಂದಿರುಗಲು ನಿರಾಕರಿಸಿದ್ದಾಳೆ. ಇದೇ ವೇಳೆ ಪೋಷಕರಿಂದ ಬೇರ್ಪಟ್ಟು ಬೇರೆ ಮನೆ ಮಾಡಲು ಒತ್ತಾಯಿಸಿದ್ದಾರೆ. ಈ ರೀತಿ ಮಾಡದೇ ಇದ್ದರೆ ವರದಕ್ಷಿಣೆ ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ ಎಂದು ಪತಿ ಅರ್ಜಿಯಲ್ಲಿ ದಾಖಲಿಸಿದ್ದಾರೆ.

ಪತ್ನಿಯ ತಂದೆ ಕೂಡ ತವರು ಮನೆಯಲ್ಲೇ ಇರಲು ಒತ್ತಾಯಿಸಿದ್ದಾರೆ.ಇದರ ನಡುವೆ ಪತಿಯನ್ನು ಮನವೊಲಿಸಿ ಮನೆಗೆ ಕರೆ ತರಲು , ಮನಸ್ತಾಪಗಳನ್ನು ದೂರವಾಗಿಸಲು ಪತಿ ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ಯಾವುದೂ ಯಶಸ್ವಿಯಾಗಲಿಲ್ಲ. ಹೀಗಾಗಿ ವಿಚ್ಚೇದನ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.

ಪತ್ನಿ ಕುಟುಂಬಸ್ಥರು ಆರ್ಥಿಕವಾಗಿ ಸದೃಢವಾಗಿದ್ದಾರೆ.ಪತಿಯೊಂದಿಗೆ ಮಾತ್ರ ಇರಲು ಬಯಸುವ ಪತ್ನಿ, ಅತ್ತೆ ಜೊತೆ ಕುಟುಂಬದಲ್ಲಿ ಜೀವನ ನಡೆಸಲು ಒಪ್ಪುತ್ತಿಲ್ಲ. ಪತಿಗೆ ಪದೇ ಪದೇ ಮಾನಸಿಕ ಒತ್ತಡ ತರುವ ಪ್ರಯತ್ನವನ್ನು ಪತಿ ಮಾಡುತ್ತಿದ್ದಾಳೆ ಅನ್ನೋದು ಗಮನಕ್ಕೆ ಬಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

'ಜಮೀನಲ್ಲ, ಆಸ್ತಿಯಲ್ಲ ಲೂಡೋದಲ್ಲಿ ಅಪ್ಪ ಮೋಸ ಮಾಡಿದ್ದಾನೆ, ನ್ಯಾಯ ಕೊಡಿಸಿ'!

ಪತಿಯ ತಂದೆ ಹಿರಿಯರಾಗಿದ್ದು, ಆಸರೆಯ ಅವಶ್ಯಕತೆ ಇದೆ. ಹಿರಿಯ ಮಗನ ನೆರವಿನ ಅಗತ್ಯತೆ ಇದೆ. ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದು ಮಗನ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ಪೋಷಕರಿಂದ ಬೇರ್ಪಟ್ಟು ಬೇರೆಡೆ ವಾಸಿಸುವಂತೆ ಒತ್ತಾಯಿಸುವುದು, ಮಾನಸಿಕ ಹಿಂಸೆ ನೀಡುವುದು ಕ್ರೌರ್ಯಕ್ಕೆ ಸಮ ಎಂದು ವಿಭಾಗೀಯ ಪೀಠ ಹೇಳಿದೆ.

ಪೋಷಕರಿಂದ ಬೇರ್ಪಟ್ಟರೆ ಮಾತ್ರ ಪತಿಯೊಂದಿಗೆ ಜೀವಿಸುವುದಾಗಿ ಆಕೆ ಸ್ಫಷ್ಟವಾಗಿ ಹೇಳಿರುತ್ತಾಳೆ. ಪೋಷಕರಿಂದ ಬೇರ್ಪಟ್ಟು, ಆಕೆಯೊಂದಿಗೆ ವಾಸಿಸುವಂತೆ ಪತ್ನಿ ನಿರಂತರವಾಗಿ ಮಾನಸಿಕ ಒತ್ತಡ ನೀಡವುದು ಕ್ರೌರ್ಯಕ್ಕೆ ಸಮ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದುವರೆಗೆ ಪೊಲೀಸ್ ದೂರು ದಾಖಲಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇಬ್ಬರು ಒಟ್ಟಿಗೆ ಜೀವಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಪತಿ ಹಾಗೂ ಪತ್ನಿಗೆ ಅವಲೋಕನಕ್ಕೆ ಸಮಯ ನೀಡುವುದು ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ತನ್ನ ಜವಾಬ್ದಾರಿ ನಿರ್ವಹಿಸಲು ಹಿಂದೇಟು ಹಾಕಿದೆ ಎಂದು ಹೇಳಲು ಹೈಕೋರ್ಟ್ ಹಿಂಜರಿಯುವುದಿಲ್ಲ ಎಂದಿದೆ.
 

Latest Videos
Follow Us:
Download App:
  • android
  • ios